ಐಪಿಎಲ್‌ಗೆ ಯುಎಇ ಸೂಕ್ತ ತಾಣ: ಬ್ರಿಜೇಶ್
Team Udayavani, Jul 24, 2020, 10:53 AM IST
ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕೂಟ ಆಯೋಜಿಸಲು ಯುಎಇ ಸೂಕ್ತ ತಾಣ ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ. ಮಾಧ್ಯಮವೊಂದರ ಜತೆಗೆ ಮಾತನಾಡಿದ ಅವರು, “ಯುನೈಟೆಡ್ ಅರಬ್ ಎಮಿ ರೆಟ್ಸ್ (ಯುಎಇ) ಐಪಿಎಲ್ ಆತಿಥ್ಯಕ್ಕೆ ಹೇಳಿ ಮಾಡಿಸಿದ ಸ್ಥಳ ವಾಗಿದೆ. ವಿದೇಶದಲ್ಲಿ ಕೂಟ ನಡೆಸುವುದಾದರೆ ನಮಗೆ
ಮೊದಲ ಆಯ್ಕೆ ಇದ್ದದ್ದು ಯುಎಇನಲ್ಲಿ. ಇಲ್ಲಿನ ಕ್ರಿಕೆಟ್ ಸೌಲಭ್ಯಗಳು ಉನ್ನತ ವಾಗಿವೆ. ಶ್ರೇಷ್ಠ ಕ್ರೀಡಾಂಗಣ, ಡ್ರೆಸ್ಸಿಂಗ್ ಕೊಠಡಿ, ಅಭ್ಯಾಸಕ್ಕೆ ಸೌಲಭ್ಯ, ಹೋಟೆಲ್ ವ್ಯವಸ್ಥೆ ಎಲ್ಲವು ಆಟಗಾರರಿಗೆ ಅಚ್ಚುಕಟ್ಟಾಗಿದೆ. ಒಂದು ನಗರದಿಂದ ಮತ್ತೂಂದು ನಗರಕ್ಕೆ ವಿಮಾನ ಸೇವೆಯನ್ನು ಅವಲಂಬಿಸಬೇಕಿಲ್ಲ. ರಸ್ತೆ ಸಾರಿಗೆ ವಾಹನ ಬಳಸಿ ಸ್ಯಾನಿಟೈಸ್ ಮಾಡಿ ಕೊಂಡು ರಸ್ತೆಯ ಮೂಲಕವೇ ಆಟಗಾರರನ್ನು ಒಂದೆಡೆಯಿಂದ ಮತ್ತೂಂದು ಕಡೆಗೆ ಸುಲಭವಾಗಿ ಕರೆದುಕೊಂಡು ಹೋಗಬಹುದು’ ಎಂದು ತಿಳಿಸಿದರು.
ಐಪಿಎಲ್ ನಡೆಯುವ ದಿನಾಂಕವನ್ನು ಮುಂದಿನ ಒಂದು ವಾರದೊಳಗೆ ಬಿಸಿಸಿಐ ಪ್ರಕಟಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅದಕ್ಕೂ ಮೊದಲು ಕೇಂದ್ರ ಸರ್ಕಾರದ ಅನುಮತಿ ಸಿಗಬೇಕಿದ್ದು ಅದಕ್ಕಾಗಿ ಬಿಸಿಸಿಐ ಕಾಯುತ್ತಿದೆ, ಯುಎಇ ನ ದುಬೈ, ಅಬುಧಾಬಿ ಹಾಗೂ ಶಾರ್ಜಾ ಕ್ರೀಡಾಂಗಣದಲ್ಲಿ ಕೂಟಕ್ಕಾಗಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
ಮನೆಯಿಂದಲೇ ಐಪಿಎಲ್ ಟೀವಿ ಕಾಮೆಂಟ್ರಿ!
ನವದೆಹಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಕೂಟದ ನೇರ ಪ್ರಸಾರದ ಟೀವಿ ಕಾಮೆಂಟ್ರಿಯನ್ನು ಮನೆಯಿಂದಲೇ ನಿರ್ವಹಿಸಲು ಕೂಟದ ನೇರ ಪ್ರಸಾರಕ ಸಂಸ್ಥೆ ಸ್ಟಾರ್ ನ್ಪೋರ್ಟ್ಸ್ ಚಿಂತನೆ ನಡೆಸಿದೆ. ಸ್ಟಾರ್ ಸಂಸ್ಥೆ ದಕ್ಷಿಣ ಆಫ್ರಿಕಾದ ಸೆಂಚುರಿಯನ್ ಪಾರ್ಕ್‌ನಲ್ಲಿ ಭಾನುವಾರ ನಡೆದಿದ್ದ ಪ್ರದರ್ಶನ ಪಂದ್ಯದ “ವರ್ಚುವಲ್ ಕಾಮೆಂಟರಿ’ಯನ್ನು ಪ್ರಾಯೋಗಿಕವಾಗಿ ನಡೆಸಿ ಯಶಸ್ವಿಯಾಯಿತು. ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಬರೋಡಾದಲ್ಲಿರುವ ತಮ್ಮ ಮನೆಯಿಂದ, ಕೋಲ್ಕತದಿಂದ ದೀಪ್‌ದಾಸ್ ಗುಪ್ತಾ ಹಾಗೂ ಮುಂಬೈ ನಿವಾಸದಿಂದ ಸಂಜಯ್ ಮಂಜ್ರೆಕರ್ ನೇರ ಪ್ರಸಾರದ ಟೀವಿ ಕಾಮೆಂಟರಿ ಮಾಡಿದ್ದರು. ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಐಪಿಎಲ್ ನಲ್ಲೂ ಇದನ್ನೇ ಏಕೆ ಮಾಡಬಾರದು ಎನ್ನುವ ಚಿಂತನೆಯನ್ನು ಸ್ಟಾರ್ ನಡೆಸಿದೆ. ಪ್ರಸಕ್ತ ಕೋವಿಡ್ ಸನ್ನಿವೇಶದಲ್ಲಿ ಇಂತಹ ಪ್ರಯೋಗ ಅವಶ್ಯಕವಾಗಿದೆ ಎಂದು ಸ್ಟಾರ್ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಇರ್ಫಾನ್ ಪಠಾಣ್, “ಸಾವಿರಾರು ಕಿ.ಮೀ. ದೂರದಲ್ಲಿ ನಡೆಯುವ ಪಂದ್ಯಕ್ಕೆ ಭಾರತದಲ್ಲಿ ನಮ್ಮ ಮನೆಯಲ್ಲೇ ಕುಳಿತು ಕಾಮೆಂಟ್ರಿ ಹೇಳುವುದು ವಿಶೇಷ ಅನುಭವ ನೀಡಿತ್ತು. ಮನೆಯಿಂದ ಕಾಮೆಂಟ್ರಿ ಮಾಡುವುದು ಒಳ್ಳೆಯದು ಅನ್ನುವುದನ್ನು ಒಪ್ಪಿಕೊಳ್ಳುತ್ತೇನೆ, ಆದರೆ ನೈಜತೆ ಇಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ’ ಎಂದು ಇರ್ಫಾನ್ ತಿಳಿಸಿದರು.
ಐಪಿಎಲ್: ಕಿವೀಸ್ ಕ್ರಿಕೆಟಿಗರಿಗೆ ಅನುಮತಿ
ವೆಲ್ಲಿಂಗ್ಟನ್: ಈ ವರ್ಷದ ಐಪಿಎಲ್ ಪಂದ್ಯಾ ವಳಿಯಲ್ಲಿ ಪಾಲ್ಗೊಳ್ಳಲು ನ್ಯೂಜಿಲೆಂಡ್ ತನ್ನೆಲ್ಲ ಆಟ ಗಾರರಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿದೆ. ಆದರೆ ಆರೋಗ್ಯಕ್ಕೆ ಸಂಬಂಧಿ ಶಿಷ್ಟಾಚಾರ ಮತ್ತು ಮಾರ್ಗಸೂಚಿಗಳ ಕುರಿತು ಮಂಡಳಿ ಏನೂ ಹೇಳುವುದಿಲ್ಲ, ಇದಕ್ಕೆಲ್ಲ ಸ್ವತಃ ಆಟಗಾರರೇ ಹೊಣೆ ಎಂಬುದಾಗಿ “ಕ್ರಿಕೆಟ್ ನ್ಯೂಜಿಲೆಂಡ್’ನ ವಕ್ತಾರ ರಿಚರ್ಡ್ ಬೂಕ್ ಪಿಟಿಐಗೆ ಇ-ಮೇಲ್ ಮೂಲಕ ತಿಳಿಸಿದ್ದಾರೆ. ಯುಎಇಯಲ್ಲಿ ನಡೆಯಲಿದೆ ಎನ್ನಲಾದ 2020ರ ಐಪಿಎಲ್‌ನಲ್ಲಿ ನ್ಯೂಜಿ ಲೆಂಡಿನ 6 ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಇವರೆಂದರೆ ಜಿಮ್ಮಿ ನೀಶಮ್ (ಪಂಜಾಬ್), ಲಾಕೀ ಫರ್ಗ್ಯುಸನ್ (ಕೆಕೆಆರ್), ಮಿಚೆಲ್ ಮೆಕ್ಲೆನಗನ್ ಮತ್ತು ಟ್ರೆಂಟ್ ಬೌಲ್ಟ್ (ಮುಂಬೈ), ಕೇನ್ ವಿಲಿಯಮ್ಸನ್ (ಹೈದರಾಬಾದ್) ಮತ್ತು ಮಿಚೆಲ್ ಸ್ಯಾಂಟ್ನರ್ (ಚೆನ್ನೈ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Brand Value: ಬಾಲಿವುಡ್ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್ ಮೌಲ್ಯ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.