ಉಬೆರ್ ಕಪ್ ಬ್ಯಾಡ್ಮಿಂಟನ್: ಆಸೀಸ್ ವಿರುದ್ಧ 4-1 ಗೆಲುವು
Team Udayavani, May 22, 2018, 6:15 AM IST
ಬ್ಯಾಂಕಾಕ್: ಸೈನಾ ನೆಹ್ವಾಲ್ ಸಾರಥ್ಯದ ಭಾರತದ ವನಿತಾ ತಂಡ ಉಬೆರ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯ “ಎ’ ವಿಭಾಗದ ಸ್ಪರ್ಧೆಯಲ್ಲಿ ಆಸ್ಟ್ರೇಲಿಯವನ್ನು 4-1 ಅಂತರದಿಂದ ಮಣಿಸಿದೆ. ಕೆನಡಾ ವಿರುದ್ಧ ಇಷ್ಟೇ ಅಂತರದಿಂದ ಸೋತ ಭಾರತಕ್ಕೆ ಈ ಗೆಲುವು ಹೊಸ ಭರವಸೆ ಮೂಡಿಸಿದೆ.
ಮೊದಲ ವನಿತಾ ಡಬಲ್ಸ್ ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳಲ್ಲೂ ಭಾರತೀಯ ಪಡೆ ಆಸ್ಟ್ರೇಲಿಯಕ್ಕೆ ಸೋಲುಣಿಸಿತು. ಸೈನಾ ನೆಹ್ವಾಲ್ 21-14, 21-19ರಿಂದ ಹುವಾನ್ ಯು ವೆಂಡಿ ಚೆನ್ ಅವರಿಗೆ ಸೋಲುಣಿಸಿ 1-0 ಮುನ್ನಡೆ ಒದಗಿಸಿದರು. ಆದರೆ ಡಬಲ್ಸ್‌ನಲ್ಲಿ ಮೇಘನಾ ಜಕ್ಕಂಪುಡಿ-ಪೂರ್ವಿಷಾ ಎಸ್. ರಾಮ್ 13-21, 16-21ರಿಂದ ಗ್ರೋನ್ಯಾ ಸೋಮರ್ವಿಲ್ಲೆ-ರೆನುಗಾ ವೀರನ್ ವಿರುದ್ಧ ಸೋಲು ಕಂಡರು.
ಮತ್ತೂಂದು ಸುತ್ತಿನ ಸಿಂಗಲ್ಸ್‌ನಲ್ಲಿ ವೈಷ್ಣವಿ ರೆಡ್ಡಿ 21-17, 21-13ರಿಂದ ಜೆನ್ನಿಫರ್ ಟಾಮ್ ಅವರನ್ನು, ಡಬಲ್ಸ್‌ನಲ್ಲಿ ಸಂಯೋಗಿತಾ ಘೋರ್ಪಡೆ-ಪ್ರಜಕ್ತಾ ಸಾವಂತ್ 21-19, 21-11 ಅಂತರದಿಂದ ಲೂಸಿಯಾ ಮಾ-ಆ್ಯನ್ ಲೂಸಿ ಸ್ಲಿà ಅವರನ್ನು ಪರಾಭವಗೊಳಿಸಿದರು.
ಕೊನೆಯ ಪಂದ್ಯದಲ್ಲಿ ಅನುರಾ ಪ್ರಭುದೇಸಾಯಿ 21-16, 21-7ರಿಂದ ಜೆಸಿಲಿ ಫಂಗ್ ಅವರಿಗೆ ಸೋಲುಣಿಸಿದರು. ಬುಧವಾರ ಜಪಾನ್ ವಿರುದ್ಧದ ಸೆಣಸಾಟದಲ್ಲಿ ಭಾರತದ ನಾಕೌಟ್ ಪ್ರವೇಶ ಸಾಧ್ಯತೆ ನಿರ್ಧಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.