Udupi; ಅಖಿಲ ಭಾರತ ಅಂತರ್ ವಿ.ವಿ. ಕಬಡ್ಡಿ ಪಂದ್ಯಾವಳಿ: ಮಂಗಳೂರು ವಿ.ವಿ. ಭರ್ಜರಿ ಶುಭಾರಂಭ
Team Udayavani, Nov 24, 2023, 12:20 AM IST
ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ, ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ಕಾಲೇಜಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿವಿ ಪುರುಷರ ಕಬಡ್ಡಿ ಪಂದ್ಯಾವಳಿಯ ಮೊದಲ ದಿನ ಆತಿಥೆಯ ಮಂಗಳೂರು ವಿ.ವಿ. ತಂಡವು ಉತ್ತಮ ಪ್ರದರ್ಶನ ತೋರಿದೆ.
ಮಂಗಳೂರು ವಿ.ವಿ. ತಂಡವು ಹರಿ ಯಾಣದ ಎಸ್‌ಜೆಜೆಟಿ ವಿ.ವಿ.ಯ ತಂಡ ವನ್ನು 73-42 ಅಂತರದಲ್ಲಿ ಸೋಲಿಸಿದೆ. ಅಲ್ಲದೆ ಮೊದಲ ದಿನದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಂಡ ಇದಾಗಿದೆ.
ಔರಂಗಬಾದ್‌ನ ಡಾ| ಎಂಬಿಎ ವಿಶ್ವವಿದ್ಯಾಲಯದ ತಂಡವು ಕಡಪದ ವೇಮನ ವಿ.ವಿ.ಯ ತಂಡವನ್ನು 50-48 ಅಂತರದಲ್ಲಿ ಸೋಲಿಸಿದೆ. ಪಂಜಾಬಿನ ಗುರುಕಾಶಿ ವಿ.ವಿ. ತಂಡವು ಜ್ಞಾನನಾಯಕ ಚಂದ್ರಶೇಖರ್ ವಿ.ವಿ.ಯನ್ನು 53-35 ಅಂತರದಲ್ಲಿ ಸೋಲಿಸಿದೆ. ಹರಿಯಾಣದ ಚೌದರಿ ಬನ್ಸಿಲಾಲ್ ವಿ.ವಿ. ಪೂರ್ವಾಂಚಲದ ವೀರ್ ಬಹದ್ದೂರ್ ಸಿಂಗ್ ವಿ.ವಿ.ಯನ್ನು 40 (65-25) ಅಂಕಗಳಿಂದ ಸೋಲಿಸಿದೆ. ಹರಿಯಾಣದ ಎಂಡಿ ವಿ.ವಿ.ಯು ಮೈಸೂರು ವಿ.ವಿ.ಯನ್ನು 52-44 ಅಂತರದಲ್ಲಿ ಮಣಿಸಿದೆ.
ದಿನದ ಕೊನೆಯ ಪಂದ್ಯದಲ್ಲಿ ಚಂಡೀಗಢ ವಿ.ವಿ. ತಂಡವು ಜಗನ್ನಾಥ ಸಂಸ್ಕೃತ ವಿ.ವಿ. ತಂಡವನ್ನು 55-36 ಅಂಕಗಳಿಂದ ಸೋಲಿಸಿದೆ.
ಕ್ರೀಡೆಗೆ ಉತ್ತಮ ಮನಃಸ್ಥಿತಿ ಬೇಕು: ರಾಕೇಶ್ ಕುಮಾರ್
ಶ್ರೀ ಅದಮಾರು ಶಿಕ್ಷಣ ಮಂಡಳಿ ಅಧ್ಯಕ್ಷರಾದ ಅದಮಾರು ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪಂದ್ಯಾಟಕ್ಕೆ ಚಾಲನೆ ನೀಡಿದರು. ಅನಂತರ ಅರ್ಜುನ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ರಾಕೇಶ್ ಕುಮಾರ್ ಅವರನ್ನು ಸಮ್ಮಾನಿಸಿದರು.
ಕ್ರೀಡಾ ಮನೋಭಾವದಿಂದ ಉತ್ತಮ ಮನಃಸ್ಥಿತಿಯಲ್ಲಿ ಆಡಬೇಕು. ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಇದ್ದೇ ಇರುತ್ತದೆ. ಗೆಲ್ಲಬೇಕು ಎಂಬ ಸದಾಶಯದೊಂದಿಗೆ ಸ್ಪರ್ಧೆ ನೀಡಬೇಕು ಎಂದು ರಾಕೇಶ್ ಕುಮಾರ್ ಹೇಳಿದರು.
ಈ ಸಂದರ್ಭ ಶಾಸಕ ಗುರ್ಮೆ ಸುರೇಶ್ ಶೆಟ್ಟಿ , ಉದ್ಯಮಿ ಮುನಿಯಾಲು ಉದಯ ಶೆಟ್ಟಿ, ಮಂಗಳೂರು ವಿ.ವಿ. ಕುಲಪತಿ ಡಾ| ಜಯರಾಜ ಅಮೀನ್, ವಿ.ವಿ.ಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಜೆರಾಲ್ಡ್ ಸಂತೋಷ್ ಡಿ’ಸೋಜಾ, ಡಾ| ಕಿಶೋರ್ ಕುಮಾರ್ ಸಿ.ಕೆ., ಅಖೀಲ ಭಾರತೀಯ ವೀಕ್ಷಕ ಡಾ| ಸುನೀಲ್ ಕುಮಾರ್, ತಾಂತ್ರಿಕ ವೀಕ್ಷಕ ಪ್ರೊ| ದೇವೇಂದ್ರ ದುಲ್, ಸಂಸ್ಥೆಯ ಗೌರವ ಆಡಳಿತಾಧಿಕಾರಿ ಡಾ| ಎ.ಪಿ.ಭಟ್ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.