ಉಮರ್ ಅಕ್ಮಲ್‌ಗೆ ಆಜೀವ ನಿಷೇಧ ಸಾಧ್ಯತೆ: ಪಿಸಿಬಿ
Team Udayavani, Mar 21, 2020, 10:26 PM IST
ಕರಾಚಿ: ಆಟಕ್ಕಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುವ ಪಾಕಿಸ್ಥಾನ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್ ಅವರಿಗೆ ಭ್ರಷ್ಟಾಚಾರ ನಿಯಮದಡಿ ಆಜೀವ ನಿಷೇಧ ಹೇರಲು ಪಿಸಿಬಿ ಸಕಲ ಸಿದ್ಧತೆ ಕೈಗೊಂಡಿದೆ.
ಪಾಕಿಸ್ಥಾನ ಸೂಪರ್ ಲೀಗ್‌ನ ಐದನೇ ಆವೃತ್ತಿಗೂ ಮುನ್ನ ಮ್ಯಾಚ್ ಫಿಕ್ಸಿಂಗ್ ಸಲುವಾಗಿ ಬುಕ್ಕಿಗಳು ಸಂಪರ್ಕಿಸಿದ್ದ ವಿಚಾರವನ್ನು ಉದ್ದೇಶಪೂರ್ವಕವಾಗಿಯೇ ಪಿಸಿಬಿ ಗಮನಕ್ಕೆ ತರದ ಕಾರಣಕ್ಕಾಗಿ ಅಕ್ಮಲ್ ವಿರುದ್ಧ ಕನಿಷ್ಠ 6 ತಿಂಗಳ, ಗರಿಷ್ಠ ಜೀವಾವಧಿ ನಿಷೇಧ ಹೇರುವ ಸಾಧ್ಯತೆ ಇದೆ.
ಪ್ರಕರಣಕ್ಕೆ ಸಂಬಂಧಿಸಿ ಅಕ್ಮಲ್‌ಗೆ ಪಿಸಿಬಿ ಮಾರ್ಚ್ 31ರ ವರೆಗೆ ಗಡುವು ನೀಡಿದೆ. ಈ ಅವಧಿಯ ಒಳಗಡೆ ಅಕ್ಮಲ್ ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತುಪಡಿಸಬೇಕಿದೆ. ಒಂದು ವೇಳೆ ವಿಫಲರಾದರೆ ನಿಷೇಧ ಖಚಿತ ಎಂದು ಪಾಕ್ ಕ್ರಿಕೆಟ್ ಮಂಡಳಿ ಎಚ್ಚರಿಕೆ ನೀಡಿದೆ.
ಪಿಸಿಬಿ ಭ್ರಷ್ಟಾಚಾರ ತಡೆ ನೀತಿ ಸಂಹಿತೆ ನಿಯಮವನ್ನು ಉಮರ್ ಅಕ್ಮಲ್ ಎರಡು ಬಾರಿ ಉಲ್ಲಂಘಿಸಿದ್ದಾರೆ. ಒಮ್ಮೆ, ಫಿಕ್ಸಿಂಗ್ ಸಲುವಾಗಿ ಬುಕ್ಕಿಗಳು ಸಂಪರ್ಕಿಸಿದ್ದ ವಿಚಾರವನ್ನು ಪಿಸಿಬಿ ಭ್ರಷ್ಟಾಚಾರ ತಡೆ ಘಟಕದ ಗಮನಕ್ಕೆ ತರದೇ ಇದ್ದದ್ದು ಹಾಗೂ ಈ ವಿಚಾರವನ್ನು ಪಿಸಿಬಿ ಗಮನಕ್ಕೆ ತರದಿದ್ದುದು. ಏನಿದ್ದರೂ ಅಕ್ಮಲ್ ಭವಿಷ್ಯ ಮಾ. 31ರಂದು ನಿರ್ಧಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.