ಅಂಡರ್ 17 ವಿಶ್ವಕಪ್ ಯಶಸ್ವಿ
Team Udayavani, Oct 27, 2017, 8:28 AM IST
ಕೋಲ್ಕತಾ: ಫುಟ್ಬಾಲ್‌ನ ಗುಣಮಟ್ಟ ಮತ್ತು ಸಂಘಟನೆಯಲ್ಲಿ ಭಾರತ ಅತ್ಯಂತ ಯಶಸ್ವಿಯಾಗಿ ಅಂಡರ್ 17 ವಿಶ್ವಕಪ್ ಫುಟ್ಬಾಲ್ ಕೂಟವನ್ನು ಆಯೋಜಿಸಿದೆ ಎಂದು ಮುಕ್ತಕಂಠದಿಂದ ಹೊಗಳಿದ ಫಿಫಾ ಭವಿಷ್ಯದಲ್ಲಿ ಭಾರತ ಬೃಹತ್ ಜಾಗತಿಕ ಕೂಟದ ಆತಿಥ್ಯ ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದೆ.
ಅಖೀಲ ಭಾರತ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಪ್ರಫುಲ್ ಪಟೇಲ್ ಜತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫಿಫಾ ಸ್ಪರ್ಧೆಗಳ ಮುಖ್ಯಸ್ಥ ಜೇಮ್ ಯಾರ್ಝ ಅವರು ದೇಶದಲ್ಲಿ ಆಯೋಜಿಸಲಾದ ಚೊಚ್ಚಲ ಫಿಫಾ ಕೂಟಕ್ಕೆ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಮತ್ತು ಎಲ್ಲ ತಂಡಗಳು ಕೂಟದ ಸಂಘಟನೆಗೆ ಸಂತೋಷ ವ್ಯಕ್ತಪಡಿಸಿವೆ ಎಂದರು.
ಇದೊಂದು ಗರಿಷ್ಠ ಸಂಖ್ಯೆಯಲ್ಲಿ ವೀಕ್ಷಿಸಿದ ಅಂಡರ್ 17 ವಿಶ್ವಕಪ್ ಫುಟ್ಬಾಲ್ ಕೂಟವಾಗಿದೆ. ಮೈದಾನದಲ್ಲಿ ಎಲ್ಲ ಪಂದ್ಯಗಳೂ ಉನ್ನತ ಗುಣಮಟ್ಟದ ಸೌಕರ್ಯ ಗಳೊಂದಿಗೆ ನಡೆದಿವೆ. ತಾಂತ್ರಿಕವಾಗಿಯೂ ಉನ್ನತ ದರ್ಜೆಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದವರು ಹೇಳಿದರು.
ಪಂದ್ಯಗಳು ನಡೆದ ಆರು ತಾಣಗಳು ಮತ್ತು ವಿವಿಧ ತಂಡಗಳಿಗೆ ನೀಡಲಾದ ಅಭ್ಯಾಸ ಪಿಚ್‌ಗಳು ಉತ್ತಮ ಗುಣ ಮಟ್ಟದಿಂದ ಕೂಡಿತ್ತು. ಆತಿಥ್ಯ, ಊಟ ಮತ್ತು ಸಾರಿಗೆ ವ್ಯವಸ್ಥೆ ಬಗ್ಗೆ ಎಲ್ಲ ತಂಡಗಳ ಆಟಗಾರರು ಮತ್ತು ತರಬೇತುದಾರರು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಯಾರ್ಝ ವಿವರಿಸಿದರು.
ಫಿಫಾ ಅಧ್ಯಕ್ಷರಿಗೆ ಸಿದ್ಧವಾಗಿದೆ ಕುರ್ತಾ, ಪೈಜಾಮ!
ಕೋಲ್ಕತಾ: ಅಂತಾರಾಷ್ಟ್ರೀಯ ಫುಟ್‌ಬಾಲ್ ಒಕ್ಕೂಟ (ಫಿಫಾ) ಅಧ್ಯಕ್ಷ ಗಿಯಾನ್ನಿ ಇನಾ#ಂಟಿನೊ ಗುರುವಾರ ಬಿಗಿ ಭದ್ರತೆ ನಡುವೆ ಭಾರತಕ್ಕೆ ಬಂದಿಳಿದರು. ಫಿಫಾ ಕಿರಿಯರ ವಿಶ್ವಕಪ್ ಕೂಟದ ಫೈನಲ್ ವೀಕ್ಷಣೆಗಾಗಿ ಅವರು ಕೋಲ್ಕತಾಕ್ಕೆ ಆಗಮಿಸಿದ್ದಾರೆ. ಕೋಲ್ಕತಾದ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅವರಿಗೆ ಭಾರೀ ಸ್ವಾಗತ ಸಿಕ್ಕಿತು.
ಈ ವೇಳೆ ಮಾತನಾಡಿದ ಅವರು, ಭಾರತ ಈಗ ಫುಟ್‌ಬಾಲ್ ಆಡುವ ರಾಷ್ಟ್ರವಾಗಿದೆ ಎಂದು ತಿಳಿಸಲು ಸಂತಸವಾಗುತ್ತಿದೆ ಎಂದರು. ಫೈನಲ್ ವೀಕ್ಷಿಸಲು ಬಂದಿರುವ ಅವರಿಗಾಗಿ ಅಗ್ನಿಮಿತ್ರ ಪೌಲ್ ವಿನ್ಯಾಸಗೊಳಿಸಿರುವ ವಿಶೇಷ ಕುರ್ತಾ ಹಾಗೂ ಪೈಜಾಮ ಸಿದ್ಧಪಡಿಸಲಾಗಿದೆ. ಅಲ್ಲದೆ ವಿಶೇಷ ಮಾಂಸಾಹಾರದ ಭೋಜನದ ವ್ಯವಸ್ಥೆಯಾಗಿದೆ. ಫೈನಲ್ ಪಂದ್ಯದಂದು ಅವರು ಕುರ್ತಾ, ಪೈಜಾಮ ಧರಿಸಲಿದ್ದಾರೆ. ಅಕ್ಟೋಬರ್ 28ರಂದು ಕೋಲ್ಕತಾದ ಸಾಲ್ಟ್ಲೇಕ್‌ನಲ್ಲಿರುವ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.