Under-19 Asia Cup:ಇಂದು ಸೆಮಿಫೈನಲ್ಸ್: ಪಾಕಿಸ್ಥಾನ-ಯುಎಇ; ಭಾರತ-ಬಾಂಗ್ಲಾದೇಶ
Team Udayavani, Dec 15, 2023, 5:29 AM IST
ದುಬಾೖ: ಅಂಡರ್ – 19 ಏಷ್ಯಾಕಪ್ ಕ್ರಿಕೆಟ್ ಕೂಟದ ಸೆಮಿಫೈನಲ್ಸ್ ಶುಕ್ರವಾರ ಇಲ್ಲಿ ನಡೆಯಲಿದೆ. ದುಬಾೖ ಇಂಟರ್ನ್ಯಾಶನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬೆಳಗ್ಗೆ 11ಕ್ಕೆ ಆರಂಭವಾಗುವ ಮೊದಲ ಸೆಮಿಫೈನಲ್ನಲ್ಲಿ ಪಾಕಿಸ್ಥಾನ ತಂಡವು ಯುಎಇ ತಂಡವನ್ನು ಎದುರಿಸಲಿದೆ.
ಇದೇ ವೇಳೆ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆಯುವ ದ್ವಿತೀಯ ಸೆಮಿಫೈನಲ್ಸ್ ಭಾರತ ಮತ್ತು ಬಾಂಗ್ಲಾದೇಶ ನಡುವೆ ಜರಗಲಿದೆ. ಆಡಿದ ಮೂರು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದ ಪಾಕಿಸ್ಥಾನ ಅಂಡರ್-19 ತಂಡವು “ಎ’ ಬಣದ ಅಗ್ರಸ್ಥಾನಿಯಾಗಿ ಸೆಮಿಫೈನಲಿಗೇರಿದ್ದರೆ ಎರಡು ಪಂದ್ಯಗಳಲ್ಲಿ ಗೆದ್ದ ಭಾರತ ದ್ವಿತೀಯ ಸ್ಥಾನದೊಂದಿಗೆ ಸೆಮಿಫೈನಲ್ ತಲುಪಿತ್ತು.
ಭಾರತ ಲೀಗ್ನಲ್ಲಿ ಪಾಕಿಸ್ಥಾನ ವಿರುದ್ಧ ಸೋತಿತ್ತು. “ಬಿ’ ಬಣದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಬಾಂಗ್ಲಾದೇಶವು ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ತಲುಪಿತ್ತು. ಬಾಂಗ್ಲಾವು ಮೂರನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಆರು ವಿಕೆಟ್ಗಳಿಂದ ಸೋಲಿಸಿತ್ತು.
ಇದರಿಂದಾಗಿ ಶ್ರೀಲಂಕಾ ಹೊರಗೆ ಬೀಳುವಂತಾಯಿತು. ಆದೇ ದಿನ ನಡೆದ ಇನ್ನೊಂದು ಪಂದ್ಯದಲ್ಲಿ ಯುಎಇ ತಂಡವು ಜಪಾನ್ ತಡವನ್ನು 107 ರನ್ನಿನಿಂದ ಸೋಲಿಸಿ ಒಟ್ಟಾರೆ ನಾಲ್ಕಂಕ ಪಡೆದು ಸೆಮಿಫೈನಲಿಗೇರಲು ಯಶಸ್ವಿಯಾಯಿತು. ಡಿ. 17ರಂದು ಈ ಕೂಟದ ಫೈನಲ್ ಹೋರಾಟ ನಡೆಯಲಿದೆ. ಪಾಕಿಸ್ಥಾನ ಮತ್ತು ಭಾರತದ ನಡುವೆ ಫೈನಲ್ ನಡೆಯುವ ಸಾಧ್ಯತೆಯಿದೆ. ಈ ಪಂದ್ಯದಲ್ಲಿ ಭಾರತವು ಪಾಕ್ ವಿರುದ್ಧದ ಲೀಗ್ ಹಂತದ ಸೋಲಿಗೆ ತಿರುಗೇಟು ನೀಡಿ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.