ಅಂಡರ್-19; ಹಿರಿಯ ಸಾಧನೆಗೆ ಕಿರಿಯರು ಸಜ್ಜು: ಟಾಸ್ ಗೆದ್ದ ಬಾಂಗ್ಲಾ ಫೀಲ್ಡಿಂಗ್
Team Udayavani, Feb 9, 2020, 1:10 PM IST
ಪೊಚೆಫ್ ಸ್ಟ್ರೂಮ್ (ದಕ್ಷಿಣ ಆಫ್ರಿಕಾ): ಅಂಡರ್-19 ವಿಶ್ವಕಪ್ ಕೂಟದ ಫೈನಲ್ ಪಂದ್ಯಕ್ಕೆ ಭಾರತ ಮತ್ತು ಬಾಂಗ್ಲಾದೇಶ ಕಿರಿಯರ ತಂಡಗಳು ಸಜ್ಜಾಗಿವೆ. ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದೆ.
ಭಾರತಕ್ಕೆ ಇದು 7ನೇ ಫೈನಲ್. ಅತೀ ಹೆಚ್ಚು 4 ಸಲ ಚಾಂಪಿಯನ್ ಆಗಿರುವ ಭಾರತ, 2 ಸಲ ಎಡವಿದೆ. ಬಾಂಗ್ಲಾಕ್ಕೆ ಇದು ಮೊದಲ ಫೈನಲ್ ಸಂಭ್ರಮ. ಸಹಜವಾಗಿಯೇ ಇತಿಹಾಸ ನಿರ್ಮಿಸುವ ತವಕ.
ಭಾರತದ ಅಜೇಯ ಓಟ
ಕೂಟದುದ್ದಕ್ಕೂ ಅಮೋಘ ಪ್ರದರ್ಶನ ಕಾಯ್ದುಕೊಂಡ ಭಾರತ ಮಂಗಳವಾರದ ಸೆಮಿಫೈನಲ್‌ನಲ್ಲಿ ಪಾಕಿಸ್ಥಾನವನ್ನು 10 ವಿಕೆಟ್‌ಗಳಿಂದ ಕೆಡವಿ ಫೈನಲ್‌ಗೆ ಲಗ್ಗೆ ಇರಿಸಿತ್ತು. ಇನ್ನೊಂದೆಡೆ ಬಾಂಗ್ಲಾದೇಶ 6 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡನ್ನು ಪರಾಭವಗೊಳಿಸಿತ್ತು.
ಒತ್ತಡಮುಕ್ತ ಆಟ
ಬಾಂಗ್ಲಾದೇಶ ಪಾಲಿಗೆ ಇದೊಂದು “ಬಿಗ್ ಗೇಮ್’. 2018ರ ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ ಬಳಿಕ ಬಾಂಗ್ಲಾದ ಕಿರಿಯರ ಕ್ರಿಕೆಟ್ ಪ್ರಗತಿಯ ಪಥದಲ್ಲಿ ಸಾಗಿದೆ. ಒತ್ತಡ ಬಿಟ್ಟು ಬಿಂದಾಸ್ ಆಗಿ ಆಡಿದರೆ ಅದು ಭಾರತಕ್ಕೆ ಸವಾಲಾಗುವುದರಲ್ಲಿ ಅನುಮಾನವಿಲ್ಲ.
ಭಾರತ: ಯಶಸ್ವಿ ಜೈಸ್ವಾಲ್, ದಿವ್ಯಾಂಶ್ ಸಕ್ಸೇನಾ, ತಿಲಕ್ ವರ್ಮ, ಪ್ರಿಯಂ ಗರ್ಗ್ (ನಾಯಕ), ಧ್ರುವ ಜುರೆಲ್, ಸಿದ್ದೇಶ್ ವೀರ್, ಅಥರ್ವ ಅಂಕೋಲೆಕರ್, ರವಿ ಬಿಶ್ನೋಯ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್.
ಬಾಂಗ್ಲಾದೇಶ: ಪರ್ವೇಜ್ ಹೊಸೇನ್, ತಾಂಜಿದ್ ಹಸನ್, ಮಹಮದುಲ್ಲ ಹಸನ್ ಜಾಯ್, ತೌಹಿದ್ ಹೃದಯ್, ಶಹಾದತ್ ಹೊಸೇನ್, ಅಕºರ್ ಅಲಿ (ನಾಯಕ), ಶಮೀಮ್ ಹೊಸೇನ್, ರಖೀಬುಲ್ ಹಸನ್, ಶೋರಿಫುಲ್ ಇಸ್ಲಾಮ್, ತಾಂಜಿಮ್ ಹಸನ್ ಶಕಿಬ್, ಅವಿಶೇಕ್ ದಾಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.