ಅಂಡರ್-19 ಕ್ರಿಕೆಟ್: ಭಾರತ ಜಯಭೇರಿ
Team Udayavani, Aug 14, 2017, 12:15 PM IST
ಬ್ರಿಟನ್: ಅಂಡರ್-19 ಕ್ರಿಕೆಟ್ ಕೂಟದ ಮೂರನೇ ಪಂದ್ಯದಲ್ಲಿ ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಭಾರತವು ಇಂಗ್ಲೆಂಡ್ ತಂಡವನ್ನು 169 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ. ಈ ಗೆಲುವಿನಿಂದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಶುಭ್‌ಮನ್ ಗಿಲ್ ಅವರ ಏಕಾಂಗಿ ಸಾಹಸದಿಂದ 7 ವಿಕೆಟಿಗೆ 327 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಗಿಲ್ ಅವರ ಆಕರ್ಷಕ ಶತಕ ಈ ಪಂದ್ಯದ ಆಕರ್ಷಣೆಯಾಗಿತ್ತು. ಇದಕ್ಕುತ್ತರವಾಗಿ ಭಾರತೀಯ ದಾಳಿಗೆ ನೆಲಕಚ್ಚಿದ ಇಂಗ್ಲೆಂಡ್ 40.5 ಓವರ್‌ಗಳಲ್ಲಿ 158 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಈ ಗೆಲುವಿನಿಂದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿತು.
ಮೊದಲ ವಿಕೆಟ್ ಪತನದ ಬಳಿಕ ಕ್ರೀಸ್‌ಗೆ ಆಗಮಿಸಿದ ಶುಭ್‌ಮನ್ ಗಿಲ್ ಭರ್ಜರಿ ಆಟಕ್ಕೆ ಮುಂದಾದರು. ಹೆಟ್ ಪಟೇಲ್ ಜತೆ ಮೂರನೇ ವಿಕೆಟಿಗೆ 88 ರನ್ ಪೇರಿಸಿದ ಗಿಲ್ ಆಬಳಿಕ ಅಭಿಷೇಕ್ ಶರ್ಮ ಜತೆಗೂಡಿ ನಾಲ್ಕನೇ ವಿಕೆಟಿಗೆ 72 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. 127 ಎಸೆತ ಎದುರಿಸಿದ ಅವರು 19 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 147 ರನ್ ಹೊಡೆದರು.
ಬಿಗು ದಾಳಿ ಸಂಘಟಿಸಿದ ಮ್ಯಾಟಿ ಪಾಟ್ಸ್ ತನ್ನ 10 ಓವರ್‌ಗಳ ದಾಳಿಯಲ್ಲಿ 61 ರನ್ನಿಗೆ 4 ವಿಕೆಟ್ ಕಿತ್ತರು. ಸಂಕ್ಷಿಪ್ತ ಸ್ಕೋರು: ಭಾರತ ಅಂಡರ್-19: 7 ವಿಕೆಟಿಗೆ 327 (ಪೃಥ್ವಿ ಶಾ 26, ಶುಭ್‌ಮನ್ ಗಿಲ್ 147, ಹೆಟ್ ಪಟೇಲ್ 38, ಅಭಿಷೇಕ್ ಶರ್ಮ 31, ಸಲ್ಮಾನ್ ಖಾನ್ 26, ಮ್ಯಾಟಿ ಪಾಟ್ಸ್ 61ಕ್ಕೆ 4); ಇಂಗ್ಲೆಂಡ್ ಅಂಡರ್ 19: 40.5 ಓವರ್‌ಗಳಲ್ಲಿ 158 ಆಲೌಟ್ (ಟಾಮ್ ಬಾಟನ್ 59, ಟಾಮ್ ಲೆಮನ್‌ಬಿ 24, ಕಮಲೇಶ್ ನಗರ್‌ಕೋಟಿ 20ಕ್ಕೆ 3, ಅಭಿಷೇಕ್ ಶರ್ಮ 31ಕ್ಕೆ 2, ಶುಭ್‌ಮನ್ ಗಿಲ್ 9ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.