Under-19 ವಿಶ್ವಕಪ್ ಕ್ರಿಕೆಟ್: ಅಜೇಯ ಭಾರತಕ್ಕೆ ಆತಿಥೇಯರ ಸವಾಲು
Team Udayavani, Feb 6, 2024, 6:30 AM IST
ಬೆನೋನಿ (ದಕ್ಷಿಣ ಆಫ್ರಿಕಾ): ಉದಯ್ ಸಹಾರಣ್ ನಾಯಕತ್ವದ ಅಜೇಯ ಭಾರತ ತಂಡ ಮಂಗಳವಾರದ ಅಂಡರ್-19 ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಗುರುವಾರದ ಇನ್ನೊಂದು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ-ಪಾಕಿಸ್ಥಾನ ಸೆಣಸಲಿವೆ.
ಹಾಲಿ ಚಾಂಪಿಯನ್, ಅತ್ಯಧಿಕ 5 ಸಲ ಕಪ್ ಎತ್ತಿರುವ, ಈ ಕೂಟದ ಐದೂ ಪಂದ್ಯಗಳನ್ನು ಗೆದ್ದಿರುವ ಭಾರತ ಖಂಡಿತವಾಗಿಯೂ ಉಪಾಂತ್ಯದ ನೆಚ್ಚಿನ ತಂಡ. ಆದರೆ ದಕ್ಷಿಣ ಆಫ್ರಿಕಾ ಆತಿ ಥೇಯ ತಂಡವಾಗಿರುವ ಕಾರಣ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಭಾರತ ಲೀಗ್ ಹಂತದ 3 ಹಾಗೂ ಸೂಪರ್ ಸಿಕ್ಸ್ ವಿಭಾಗದ ಎರಡೂ ಪಂದ್ಯಗಳನ್ನು ಅಧಿಕಾರಯುತವಾಗಿ ಜಯಿಸಿತ್ತು. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಲೀಗ್ ಹಂತದಲ್ಲಿ ಒಂದು ಪಂದ್ಯದಲ್ಲಿ ಸೋಲಿನ ಆಘಾತಕ್ಕೆ ಸಿಲುಕಿದೆ.
ವಿಶ್ವಕಪ್ ಪಂದ್ಯಾವಳಿಗೂ ಮೊದಲು ಆಡಲಾದ ತ್ರಿಕೋನ ಸರಣಿಯ ಎರಡೂ ಏಕದಿನ ಪಂದ್ಯಗಳಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿತ್ತು. ಸೆಮಿಫೈನಲ್‌ನಲ್ಲಿ ಭಾರತಕ್ಕೆ ಇದು ಸ್ಫೂರ್ತಿ ಆಗಬೇಕಿದೆ. ತ್ರಿಕೋನ ಸರಣಿಯ ಫೈನಲ್‌ನಲ್ಲಿ ಮತ್ತೆ ಭಾರತ-ದಕ್ಷಿಣ ಆಫ್ರಿಕಾ ಎದುರಾದರೂ ಮಳೆಯಿಂದಾಗಿ ಈ ಪಂದ್ಯ ನಡೆಯಲಿಲ್ಲ.
ಅಮೋಘ ಪ್ರದರ್ಶನ
ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದಿದೆ. 2 ಶತಕ ಹಾಗೂ ಒಂದು ಅರ್ಧ ಶತಕ ಹೊಡೆದಿರುವ ಮುಶೀರ್ ಖಾನ್ ಕಿರಿಯರ ತಂಡದ ರನ್‌ಯಂತ್ರವಾಗಿ ಮಾರ್ಪಟ್ಟಿದ್ದಾರೆ. 334 ರನ್ ಗಳಿಸಿದ ಹೆಗ್ಗಳಿಕೆ ಇವರದು. ನಾಯಕ ಉದಯ್ ಸಹಾರಣ್ ಕೂಡ ಸೆಂಚುರಿ ಬಾರಿಸಿದ್ದಾರೆ. ಜತೆಗೆ 2 ಅರ್ಧ ಶತಕ ಸೇರಿದೆ. 304 ರನ್ ಬಾರಿಸಿದ ಹಿರಿಮೆ ಇವರದು. ನೇಪಾಲ ವಿರುದ್ಧದ ಸೂಪರ್ ಸಿಕ್ಸ್ ಪಂದ್ಯದಲ್ಲಿ 116 ರನ್ ಬಾರಿಸಿದ ಸಚಿನ್ ದಾಸ್ ಕೂಡ ಬ್ಯಾಟಿಂಗ್ ಸರದಿಯ ಬೆನ್ನೆಲುಬಾಗಿದ್ದಾರೆ.
ಆರಂಭ: ಅ. 1.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.