Under-19 ತ್ರಿಕೋನ ಸರಣಿ ಅಫ್ಘಾನಿಸ್ಥಾನ ವಿರುದ್ಧ ಭಾರತಕ್ಕೆ 9 ವಿಕೆಟ್ ಗೆಲುವು
Team Udayavani, Jan 5, 2024, 1:00 AM IST
ಜೋಹಾನ್ಸ್‌ಬರ್ಗ್: ನಮನ್ ತಿವಾರಿ ಅವರ ಉತ್ತಮ ಬೌಲಿಂಗ್ ನಿರ್ವಹಣೆಯಿಂದಾಗಿ ಭಾರತ ತಂಡವು ಅಂಡರ್ -19 ತ್ರಿಕೋನ ಸರಣಿಯ ಪಂದ್ಯದಲ್ಲಿ ಅಫ್ಘಾನಿಸ್ಥಾನ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ನಲ್ಲಿ ಆಡುವ ಅವಕಾಶ ಪಡೆಯಿತು.
ಮೊದಲು ಫೀಲ್ಡಿಂಗ್ ನಡೆಸಿದ ಭಾರತ ತಂಡವು ಅಫ್ಘಾನಿಸ್ಥಾನ ತಂಡ ವನ್ನು 33 ಓವರ್‌ಗಳಲ್ಲಿ ಕೇವಲ 88 ರನ್ನಿಗೆ ನಿಯಂತ್ರಿಸಿತು. ತಿವಾರಿ ತನ್ನ ಏಳು ಓವರ್‌ಗಳ ದಾಳಿಯಲ್ಲಿ ಕೇವಲ 11 ರನ್ ನೀಡಿ ನಾಲ್ಕು ವಿಕೆಟ್ ಉರುಳಿಸಿದ್ದರು. ಅವರಿಗೆ ಉತ್ತಮ ಬೆಂಬಲ ನೀಡಿದ ಧನುಷ್ ಗೌಡ ಮತ್ತು ಆರಾಧ್ಯ ಶುಕ್ಲ ತಲಾ ಎಡರು ವಿಕೆಟ್ ಪಡೆದರು.
ಗೆಲ್ಲಲು ಸುಲಭ ಸವಾಲು ಪಡೆದ ಭಾರತ ತಂಡವು ಆದರ್ಶ್ ಸಿಂಗ್ ಅವರ ಅಜೇಯ 52 ರನ್ ನೆರವಿನಿಂದ ಕೇವಲ 12.1 ಓವರ್‌ಗಳಲ್ಲಿ ಒಂದು ವಿಕೆಟಿಗೆ 92 ರನ್ ಗಳಿಸಿ ಜಯಭೇರಿ ಬಾರಿಸಿತು. ಇದು ಈ ಸರಣಿಯಲ್ಲಿ ಭಾರತದ ಮೂರನೇ ಗೆಲುವು ಆಗಿದೆ. ಭಾರತ ಶನಿವಾರ ನಡೆಯುವ ಪಂದ್ಯ ದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಫೈನಲ್ ಪಂದ್ಯ ಬುಧವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರು: ಅಫ್ಘಾನಿಸ್ಥಾನ 33 ಓವರ್‌ಗಳಲ್ಲಿ 88 (ನಾಸಿರ್ ಹಸನ್ 31, ನಮನ್ ತಿವಾರಿ 11ಕ್ಕೆ 11, ಪ್ರಿಯಾಂಶು 15ಕ್ಕೆ 2, ಆರಾಧ್ಯ 20ಕ್ಕೆ 2, ಧನುಷ್ 23ಕ್ಕೆ 2); ಭಾರತ 12.1 ಓವರ್‌ಗಳಲ್ಲಿ ಒಂದು ವಿಕೆಟಿಗೆ 92 (ಆದರ್ಶ್ ಸಿಂಗ್ ಔಟಾಗದೆ 52).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.