ಅಂಡರ್-19 ವಿಶ್ವಕಪ್: ಇಂಗ್ಲೆಂಡ್ ನಾಕೌಟ್‌ಗೆ ಲಗ್ಗೆ
Team Udayavani, Jan 19, 2018, 12:01 PM IST
ಕ್ವೀನ್ಸ್‌ಟೌನ್: ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಮಣಿಸಿದ ಇಂಗ್ಲೆಂಡ್ ತಂಡ “ಸಿ’ ವಿಭಾಗದಿಂದ ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಗುರುವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 49.2 ಓವರ್‌ಗಳಲ್ಲಿ 175 ರನ್ನುಗಳಿಗೆ ಆಲೌಟಾದರೆ, ಇಂಗ್ಲೆಂಡ್ 29.3 ಓವರ್‌ಗಳಲ್ಲಿ 3 ವಿಕೆಟಿಗೆ 177 ರನ್ ಬಾರಿಸಿ ಸತತ 2ನೇ ಗೆಲುವನ್ನು ಒಲಿಸಿಕೊಂಡಿತು. ನಾಯಕ ಹ್ಯಾರಿ ಬ್ರೂಕ್ ಅವರ ಅಜೇಯ ಶತಕ ಇಂಗ್ಲೆಂಡ್ ಸರದಿಯ ವಿಶೇಷವಾಗಿತ್ತು. ಆರಂಭಿಕರಿಬ್ಬರು 19 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿದ ಬಳಿಕ ಇನ್ನಿಂಗ್ಸ್ ಕಟ್ಟತೊಡಗಿದ ಬ್ರೂಕ್, 84 ಎಸೆತ ಎದುರಿಸಿ 102 ರನ್ ಬಾರಿಸಿದರು. ಈ ಅವಧಿಯಲ್ಲಿ ಸಿಡಿಸಿದ್ದು 13 ಬೌಂಡರಿ ಹಾಗೂ 3 ಸಿಕ್ಸರ್. ಇವಾನ್ ವುಡ್ ಔಟಾಗದೆ 48 ರನ್ ಮಾಡಿದರು.
ಇದು 3 ಪಂದ್ಯಗಳಲ್ಲಿ ಬಾಂಗ್ಲಾಕ್ಕೆ ಎದುರಾದ ಮೊದಲ ಸೋಲು. ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇಂಗ್ಲೆಂಡಿಗೆ ಮೊದಲ ಸ್ಥಾನ. ಎರಡೂ ತಂಡಗಳು ತಲಾ 4 ಅಂಕಗಳನ್ನು ಹೊಂದಿವೆ. ಜ. 20ರಂದು ಇಂಗ್ಲೆಂಡ್-ಕೆನಾಡಾ ಪಂದ್ಯ ನಡೆಯಲಿದೆ.
ಕೆನಡಾಕ್ಕೆ ಮೊದಲ ಗೆಲುವು
ಲಿಂಕನ್: “ಸಿ’ ವಿಭಾಗದ ಮತ್ತೂಂದು ಪಂದ್ಯ ದಲ್ಲಿ ಕೆನಡಾ ತಂಡ ನಮೀಬಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಇದು ಕೆನಡಾಕ್ಕೆ ಒಲಿದ ಮೊದಲ ಜಯ. ನಮೀಬಿಯಾ 46 ಓವರ್‌ಗಳಲ್ಲಿ 193 ರನ್ನಿಗೆ ಆಲೌಟಾದರೆ, ಕೆನಡಾ 42 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 197 ರನ್ ಬಾರಿಸಿ ವಿಜಯಿಯಾಯಿತು. ಕೆನಡಾ ತನ್ನ ಕೊನೆಯ ಲೀಗ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಲಿದ್ದು, ಇದನ್ನು ಭಾರೀ ಅಂತರದಿಂದ ಗೆದ್ದರಷ್ಟೇ ನಾಕೌಟ್ ಪ್ರವೇಶಿಸೀತು. ಕಾರಣ, ಕೆನಡಾದ ರನ್‌ರೇಟ್ “ಮೈನಸ್’ನಲ್ಲಿದೆ (-0.277). ಬಾಂಗ್ಲಾದೇಶ 4 ಅಂಕಗಳೊಂದಿಗೆ 0.438 ರನ್‌ರೇಟ್ ಹೊಂದಿದ್ದು, ದ್ವಿತೀಯ ಸ್ಥಾನದಲ್ಲಿದೆ. ಹೀಗಾಗಿ ಮೂರೂ ಲೀಗ್ ಸ್ಪರ್ಧೆ ಮುಗಿಸಿರುವ ಬಾಂಗ್ಲಾದೇಶಕ್ಕೆ ನಾಕೌಟ್ ಟಿಕೆಟ್ ಸಾಧ್ಯತೆ ಹೆಚ್ಚು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.