ಸಾಟಿಯಿಲ್ಲದ ಸೇನ್; 3 ತಿಂಗಳಲ್ಲಿ 4 ಪ್ರಶಸ್ತಿ
Team Udayavani, Nov 26, 2019, 5:14 AM IST
ಗ್ಲಾಸೊY (ಸ್ಕಾಟ್ಲೆಂಡ್): ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್‌ಪಟು ಲಕ್ಷ್ಯ ಸೇನ್ ಮೂರೇ ತಿಂಗಳ ಅವಧಿಯಲ್ಲಿ 4ನೇ ಪ್ರಶಸ್ತಿಯನ್ನೆತ್ತಿ ಸಂಭ್ರಮಿಸಿದ್ದಾರೆ. ಇಲ್ಲಿ ನಡೆದ “ಸ್ಕಾಟಿಷ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ’ಯಲ್ಲಿ ಸೇನ್ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
ರವಿವಾರ ರಾತ್ರಿ ನಡೆದ ತೀವ್ರ ಪೈಪೋಟಿಯ ಪ್ರಶಸ್ತಿ ಸಮರದಲ್ಲಿ ಲಕ್ಷ್ಯ ಸೇನ್ ಬ್ರಝಿಲ್‌ನ ಎದುರಾಳಿ ವೈಗರ್ ಕೆಲೊ ಅವರನ್ನು 18-21, 21-18, 21-19 ಅಂತರ ದಿಂದ ಮಣಿಸುವಲ್ಲಿ ಯಶಸ್ವಿಯಾದರು.
4 ಪ್ರಶಸ್ತಿಗಳ ಸರದಾರ
18ರ ಹರೆಯದ, ಉತ್ತರಾಖಂಡ್‌ನ ಪ್ರತಿಭೆಯಾಗಿರುವ ಲಕ್ಷ್ಯ ಸೇನ್ ಕಳೆದ ಸೆಪ್ಟಂಬರ್ ತಿಂಗಳಿಂದೀಚೆ ಗೆದ್ದ 4ನೇ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪ್ರಶಸ್ತಿ ಇದಾಗಿದೆ.
ಇದಕ್ಕೂ ಮುನ್ನ ಸಾರ್ಲೋರ್‌ಲಕ್ಸ್ ಓಪನ್, ಡಚ್ ಓಪನ್ ಮತ್ತು ಬೆಲ್ಜಿಯನ್ ಓಪನ್ ಕೂಟಗಳಲ್ಲೂ ಸೇನ್ ಕಿರೀಟ ಏರಿಸಿಕೊಂಡಿದ್ದರು. ಆದರೆ ಸ್ಕಾಟಿಷ್ ಓಪನ್ ಟೂರ್ನಿಗೂ ಮೊದಲು ನಡೆದ ಐರಿಷ್ ಓಪನ್ ಕೂಟದಲ್ಲಿ ದ್ವಿತೀಯ ಸುತ್ತಿನಲ್ಲೇ ಸೋಲನುಭವಿಸಿದ್ದರು.
“ಸ್ಕಾಟಿಷ್ ಓಪನ್ ಪ್ರಶಸ್ತಿ ಜಯಿಸಿದ್ದಕ್ಕೆ ವಿಪ ರೀತ ಖುಷಿಯಾಗಿದೆ. ಗೆಳೆಯನೆದುರಿನ ಈ ಪಂದ್ಯ ಭಾರೀ ಪೈಪೋಟಿಯಿಂದ ಕೂಡಿತ್ತು. ಡೆನ್ಮಾರ್ಕ್ ನಲ್ಲಿ ಅಭ್ಯಾಸ ನಡೆಸಿದ್ದು ಫಲ ಕೊಟ್ಟಿತು’ ಎಂದು ಲಕ್ಷ್ಯ ಸೇನ್ ಪ್ರತಿಕ್ರಿಯಿಸಿದ್ದಾರೆ.
ಈ ಕೂಟದಲ್ಲಿ ಆಸ್ಟ್ರಿಯಾದ ಲುಕಾ ರ್ಯಾಬರ್ ಅವರನ್ನು ಸೋಲಿಸಿದ ಲಕ್ಷ್ಯ ಸೇನ್, ಬಳಿಕ ಭಾರತದವರೇ ಆದ ಕಿರಣ್ ಜಾರ್ಜ್ ಅವರಿಗೆ ಸೋಲುಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಇಲ್ಲಿ ಬ್ರಿಯಾನ್ ಯಾಂಗ್‌ಗೆ ಆಘಾತವಿಕ್ಕಿದರು. ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ನ ಕ್ರಿಸ್ಟೊ ಪೊಪೋವ್ ವಿರುದ್ಧ ಗೆದ್ದು ಬಂದರು.
ಭಾರತಕ್ಕೆ 5ನೇ ಪ್ರಶಸ್ತಿ
ಇದು ಭಾರತೀಯರಿಗೆ ಒಲಿದ 5ನೇ ಸ್ಕಾಟಿಷ್ ಓಪನ್ ಪ್ರಶಸ್ತಿ. ಆನಂದ್ ಪವಾರ್ 2 ಸಲ ಚಾಂಪಿಯನ್ ಆಗಿರುವುದು ದಾಖಲೆ(2010 ಮತ್ತು 2012). ಉಳಿದಿಬ್ಬರೆಂದರೆ ಅರವಿಂದ್ ಭಟ್ (2004) ಮತ್ತು ಪುಲ್ಲೇಲ ಗೋಪಿಚಂದ್ (1999).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.