SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್ ಬ್ಯಾಟರ್
ವಿಶ್ವ ದಾಖಲೆ ಬರೆದರೂ ಐಪಿಎಲ್‌ನಲ್ಲಿ ಅನ್ಸೋಲ್ಡ್.!
Team Udayavani, Nov 27, 2024, 6:01 PM IST
ಗುಜರಾತ್: ಟಿ-20 ಪಂದ್ಯದಲ್ಲಿ ವೇಗದ ಶತಕಗಳಿಸಿ ಭಾರತೀಯ ಬ್ಯಾಟರ್ ಒಬ್ಬ ವಿಶ್ವ ದಾಖಲೆ ಬರೆದಿದ್ದಾನೆ.
ಗುಜರಾತ್ ತಂಡದ ಉರ್ವಿಲ್ ಪಟೇಲ್ ಇಂದೋರ್‌ನ ಎಮರಾಲ್ಡ್ ಹೈಟ್ಸ್ ಇಂಟರ್‌ನ್ಯಾಶನಲ್ ಸ್ಕೂಲ್ ಗ್ರೌಂಡ್‌ನಲ್ಲಿ ಬುಧವಾರ (ನ.27 ರಂದು) ತ್ರಿಪುರಾ ವಿರುದ್ಧ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (Syed Mushtaq Ali Trophy) ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾನೆ.
ಈ ಹಿಂದೆ 2018 ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಹಿಮಾಚಲ ಪ್ರದೇಶ ವಿರುದ್ಧ ದೆಹಲಿ ಪರ 32 ಎಸೆತಗಳಲ್ಲಿ ರಿಷಭ್ ಪಂತ್ ಶತಕ ಸಿಡಿಸಿದ್ದು, ಭಾರತೀಯ ಬ್ಯಾಟರ್ ಒಬ್ಬನ ವೇಗದ ಶತಕದ ದಾಖಲೆ ಆಗಿತ್ತು. ಇದೀಗ ಈ ದಾಖಲೆಯನ್ನು ಉರ್ವಿಲ್ ಮುರಿದಿದ್ದಾರೆ.
35 ಎಸೆತಗಳಲ್ಲಿ ಔಟಾಗದೆ 113 ರನ್ ಸಿಡಿಸಿದ್ದಾರೆ. ಇವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ, 12 ಸಿಕ್ಸರ್ ಸೇರಿವೆ. 156ರ ಗುರಿಯನ್ನು 58 ಎಸೆತಗಳಲ್ಲಿ ಚೇಸ್ ಮಾಡಿ ಪಂದ್ಯವನ್ನು ಗುಜರಾತ್ ಗೆದ್ದಿದೆ.
ಪಟೇಲ್ ಟಿ20ಯಲ್ಲಿ ಎರಡನೇ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಆಟಗಾರರಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಎಸ್ಟೋನಿಯಾದ ಸಾಹಿಲ್ ಚೌಹಾನ್ ಸೈಪ್ರಸ್ ದೇಶದ ವಿರುದ್ಧ 27 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅತೀ ವೇಗದ ಟಿ-20 ಶತಕ ಸಿಡಿಸಿದ ದಾಖಲೆ ಸಾಹಿಲ್ ಚೌಹಾನ್ ಹೆಸರಿನಲ್ಲಿದೆ. ಎರಡನೇ ಸ್ಥಾನದಲ್ಲಿ ಉರ್ವಿಲ್ ಇದ್ದಾರೆ.
ಟಿ-20 ಮಾತ್ರವಲ್ಲದೆ ಉರ್ವಿಲ್ ನವೆಂಬರ್ 2023ರಲ್ಲಿ ಲಿಸ್ಟ್ ಎ (ಏಕದಿನ – ವಿಜಯ್ ಹಜಾರೆ ಟ್ರೋಫಿ) ಕ್ರಿಕೆಟ್‌ನಲ್ಲಿ ಎರಡನೇ ಅತಿವೇಗದ ಶತಕವನ್ನು ಸಿಡಿಸಿದ್ದರು. ಚಂಡೀಗಢದಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ನಡೆದ ಈ ಪಂದ್ಯದಲ್ಲಿ ಗುಜರಾತ್ ಪರ ಉರ್ವಿಲ್ ಕೇವಲ 41 ಎಸೆತಗಳಲ್ಲಿ 100 ರನ್ ಗಳಿಸಿದ್ದರು.
2010ರಲ್ಲಿ ಮಹಾರಾಷ್ಟ್ರದ ವಿರುದ್ಧ ಬರೋಡಾ ಪರ ಯೂಸುಫ್ ಪಠಾಣ್ 40 ಎಸೆತಗಳಲ್ಲಿ ಶತಕ ಗಳಿಸಿದ್ದು, ಇದು ಲಿಸ್ಟ್ ಎ ಏಕದಿನ ಕ್ರಿಕೆಟ್‌ನ ವೇಗದ ಶತಕವಾಗಿದೆ.
ಯಾರು ಈ ಉರ್ವಿಲ್: ಬರೋಡಾದ ಮೆಹ್ಸಾನಾ ಮೂಲದ ಉರ್ವಿಲ್ 2018 ರಲ್ಲಿ ರಾಜ್‌ಕೋಟ್‌ನಲ್ಲಿ ಮುಂಬೈ ವಿರುದ್ಧದ ಟಿ 20ನಲ್ಲಿ ಬರೋಡಾಗೆ ಪಾದಾರ್ಪಣೆ ಮಾಡಿದರು. ಅದೇ ವರ್ಷದಲ್ಲಿ ಅವರು ಲಿಸ್ಟ್ ಎ ಕ್ರಿಕೆಟ್‌ಗೆ ಪ್ರವೇಶಿಸಿದರು. ರಣಜಿ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದ ಬಳಿಕ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಅವರಿಗೆ 6 ವರ್ಷ ಕಾಯಬೇಕಾಯಿತು.
𝗔 𝟮𝟴-𝗯𝗮𝗹𝗹 💯
1️⃣1️⃣3️⃣* Runs
3️⃣5️⃣ Balls
7️⃣ Fours
1️⃣2️⃣ SixesGujarat batter Urvil Patel smashed the fastest hundred by an Indian in T20s against Tripura in Indore 🔥 🔥
Watch 🎥 snippets of his 𝙍𝙚𝙘𝙤𝙧𝙙-𝘽𝙧𝙚𝙖𝙠𝙞𝙣𝙜 𝙆𝙣𝙤𝙘𝙠 🔽#SMAT | @IDFCFIRSTBank | @GCAMotera pic.twitter.com/zjbsKpZkYv
— BCCI Domestic (@BCCIdomestic) November 27, 2024
ಐಪಿಎಲ್ ವಿಚಾರಕ್ಕೆ ಬಂದರೆ 2023ರಲ್ಲಿ ಉರ್ವಿಲ್ ಅವರನ್ನು ಗುಜರಾತ್ ತಂಡ 20 ಲಕ್ಷಕ್ಕೆ ಖರೀದಿ ಮಾಡಿತ್ತು. ಆದರೆ ಆ ವರ್ಷ ಅವರಿಗೆ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಗುಜರಾತ್‌ನಿಂದ ರಿಲೀಸ್ ಆದ ಬಳಿಕ ಈ ವರ್ಷದ ಐಪಿಎಲ್ ಹರಾಜಿನಲ್ಲಿ ಅವರನ್ನು ಯಾವ ತಂಡವೂ ಖರೀದಿ ಮಾಡಿಲ್ಲ.
ಇದುವರೆಗೆ 44 ಟಿ-20 ಪಂದ್ಯಗಳನ್ನಾಡಿರುವ ಉರ್ವಿಲ್ 23.52 ಸರಾಸರಿಯಲ್ಲಿ 988 ರನ್ ಗಳಿಸಿದ್ದಾರೆ. 1 ಶತಕ ನಾಲ್ಕು ಅರ್ಧಶತಕಗಳೊಂದಿಗೆ 164.11 ಸ್ಟ್ರೈಕ್-ರೇಟ್ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.