ಮರ್ರೆ-ಹಿಂಗಿಸ್‌ಗೆ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ
Team Udayavani, Sep 11, 2017, 6:30 AM IST
ನ್ಯೂಯಾರ್ಕ್: ಅಗ್ರ ಶ್ರೇಯಾಂಕದ ಜೆಮಿ ಮರ್ರೆ ಮತ್ತು ಮಾರ್ಟಿನಾ ಹಿಂಗಿಸ್ ಅವರು ಮೂರು ಸೆಟ್‌ಗಳ ಕಠಿನ ಹೋರಾಟದಲ್ಲಿ ಜಯ ಸಾಧಿಸಿ ಯುಎಸ್ ಓಪನ್‌ನ ಮಿಕ್ಸೆಡ್ ಡಬಲ್ಸ್‌ನ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇದು ಅವರ ಸತತ ಎರಡನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದೆ.
ಫೈನಲ್‌ನಲ್ಲಿ ಮೈಕಲ್ ವೀನಸ್ ಮತ್ತು ಚಾನ್ ಹಾವೊ ಚಿಂಗ್ ಅವರನ್ನು 6-1, 4-6, 10-8 ಸೆಟ್‌ಗಳಿಂದ ಉರುಳಿಸಿದ ಮರ್ರೆ-ಹಿಂಗಿಸ್ ಪ್ರಶಸ್ತಿ ಗೆದ್ದ ಸಂಭ್ರಮ ಆಚರಿಸಿದರು. ಅವರು ಈಗಾಗಲೇ ಕಳೆದ ಜುಲೈಯಲ್ಲಿ ನಡೆದ ವಿಂಬಲ್ಡನ್ ಕೂಟದ ಪ್ರಶಸ್ತಿ ಜಯಿಸಿದ್ದರು. ಸೂಪರ್ ಟೈಬ್ರೇಕರ್ ಮೂಲಕ ಜತೆಯಾಗಿ ಆಡುವುದು ಹೇಗೆಂದು ನಮಗೆ ತಿಳಿಯಿತು ಎಂದು ಪಂದ್ಯದ ಬಳಿಕ ಹಿಂಗಿಸ್ ನುಡಿದರು. ಹಿಂಗಿಸ್ ನ್ಯೂಯಾರ್ಕ್‌ನಲ್ಲಿ 16ರ ಬಾಲಕಿಯಾಗಿ ಸಿಂಗಲ್ಸ್ ಪ್ರಶಸ್ತಿ ಗೆದ್ದ 20ನೇ ವರ್ಷಾಚರಣೆಯ ಖುಷಿಯಲ್ಲಿದ್ದಾರೆ.
ಮೊದಲ ಸೆಟ್‌ನಲ್ಲಿ ನಾವು ಶ್ರೇಷ್ಠ ನಿರ್ವಹಣೆ ದಾಖಲಿಸಿದ್ದೇವೆ. ದ್ವಿತೀಯ ಸೆಟ್‌ನಲ್ಲಿ ನಾವು ನಿಖರವಾಗಿ ಆಡಿಲ್ಲ. ಆದರೆ ಸೂಪರ್ ಟೈಬ್ರೇಕರ್‌ನಲ್ಲಿ ಗ್ರೇಟ್ ಟೆನಿಸ್ ಆಟ ಮುಂದುವರಿಯಿತು ಎಂದು ಹಿಂಗಿಸ್ ಹೇಳಿದರು. ಹಿಂಗಿಸ್ 2015ರಲ್ಲಿ ಲಿಯಾಂಡರ್ ಪೇಸ್ ಜತೆಊಡಿ ಯುಎಸ್ ಓಪನ್‌ನ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ ಜಯಿಸಿದ್ದರೆ. 10 ವರ್ಷಗಳ ಹಿಂದೆ ಮರ್ರೆ ಜೆಲೆನಾ ಜಾಂಕೊವಿಕ್ ಜತೆಗೂಡಿ ವಿಂಬಲ್ಡನ್ ಕೂಟದ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು.
ಮುಂದಿನ ವರ್ಷದ ಆಸ್ಟ್ರೇಲಿಯನ್ ಓಪನ್‌ನಲ್ಲೂ ಜತೆಯಾಗಿ ಆಡಲಿದ್ದೇವೆ ಎಂದು ಸ್ವಿಸ್ ತಾರೆ ಹಿಂಗಿಸ್ ಮತ್ತು ಮರ್ರೆ ತಿಳಿಸಿದ್ದಾರೆ. ಮಾರ್ಟಿನಾ ಜತೆ ಸ್ಪರ್ಧಿಸುವ ಅವಕಾಶ ಸಿಕ್ಕಿರುವುದು ಗ್ರೇಟ್. ಅವರು ಟೆನಿಸ್ ಆಟದ ಬಲುದೊಡ್ಡ ಚಾಂಪಿಯನ್ ಎಂದು ಮರ್ರೆ ಹೇಳಿದರು.
ಹಿಂಗಿಸ್ ಇಲ್ಲಿ ಇನ್ನೊಂದು ಪ್ರಶಸ್ತಿ ಗೆಲ್ಲುವ ಸಾಧ್ಯತೆಯಿದೆ. ಅವರು ವನಿತೆಯರ ಡಬಲ್ಸ್ ಫೈನಲ್‌ನಲ್ಲಿ ಚಾನ್ ಯಂಗ್ ಜಾನ್ ಜತೆಗೂಡಿ ಆಡಲಿದ್ದು ಫೈನಲ್‌ನಲ್ಲಿ ಲೂಸಿ ಹೃಡೆಕ್ಕ ಮತ್ತು ಕ್ಯಾತರೀನಾ ಸಿನಿಯಕೋವಾ ಅವರನ್ನು ಎದುರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
Udupi: ಅಂಬಲಪಾಡಿ ಓವರ್‌ಪಾಸ್ ಕಾಮಗಾರಿ ಆರಂಭ
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
Wedding: ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ವರ… ನನಗೆ ಈ ಹುಡುಗ ಬೇಡವೆಂದ ವಧು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.