US Open-2024; ಮೂರನೇ ಸುತ್ತಿಗೆ ಸಿನ್ನರ್‌, ಸ್ವಿಯಾಟೆಕ್‌: ಅಲ್ಕರಾಜ್‌ಗೆ ಸೋಲಿನ ಆಘಾತ


Team Udayavani, Aug 31, 2024, 12:16 AM IST

1-aaaaaaa

ಬೋಟಿಲ್‌ ವಾನ್‌ ಡೆ ಝಾಂಡ್‌ಶಪ್‌

ನ್ಯೂಯಾರ್ಕ್‌: ವಿಶ್ವದ ಅಗ್ರ ರ್‍ಯಾಂಕ್‌ ಆಟಗಾರರಾದ ಜಾನಿಕ್‌ ಸಿನ್ನರ್‌ ಮತ್ತು ಇಗಾ ಸ್ವಿಯಾಟೆಕ್‌ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯ ಮೂರನೇ ಸುತ್ತು ತಲುಪಿದ್ದಾರೆ. ಆದರೆ ಮಾಜಿ ಚಾಂಪಿಯನ್‌ಗಳಾದ ಕಾರ್ಲೋಸ್‌ ಅಲ್ಕರಾಜ್‌ ಮತ್ತು ನವೋಮಿ ಒಸಾಕಾ ಅವರ ಆಟ ಕೊನೆಗೊಂಡಿದೆ.

ಇಗಾ ಸ್ವಿಯಾಟೆಕ್‌ ಜಪಾನಿನ ಅರ್ಹತಾ ಆಟ ಗಾರ್ತಿ ಎನಾ ಶಿಬಹಾರ ಅವರನ್ನು 6-0, 6-1ರಿಂದ ಸುಲಭದಲ್ಲಿ ಸೋಲಿಸಿದರು. ಆದರೆ ಜಪಾನಿನ ನವೋಮಿ ಒಸಾಕಾ ಅವರ ಆಟಕ್ಕೆ ಕ್ಯಾರೋಲಿನಾ ಮುಖೋವಾ 6-3, 7-6 (5)ರಿಂದ ತೆರೆ ಎಳೆದರು.

ಇಟಲಿಯ ಪ್ರತಿಭಾನ್ವಿತ ಆಟಗಾರ್ತಿ ಜಾಸ್ಮಿನ್‌ ಪೌಲಿನಿ ಕೂಡ ಮುನ್ನಡೆ ಸಾಧಿಸಿದ್ದಾರೆ. ಎದುರಾಳಿ ಕ್ಯಾರೋಲಿನಾ ಪ್ಲಿಸ್ಕೋವಾ ಪಂದ್ಯದ ನಡುವೆ ಗಾಯಾ ಳಾಗಿ ಹಿಂದೆ ಸರಿದ ಕಾರಣ ಪೌಲಿನಿ ಮುನ್ನಡೆ ಸುಗಮಗೊಂಡಿತು. 4ನೇ ಶ್ರೇಯಾಂಕದ ಎಲೆನಾ ರಿಬಾಕಿನಾ ಕೂಡ ದ್ವಿತೀಯ ಸುತ್ತಿನ ಸ್ಪರ್ಧೆಗೂ ಮುನ್ನ ಬೆನ್ನುನೋವಿನಿಂದಾಗಿ ಕೂಟದಿಂದ ಹಿಂದೆ ಸರಿದರು.

ಉಳಿದಂತೆ ಜೆಸ್ಸಿಕಾ ಪೆಗುಲಾ, ಅನ್ನಾ ಕಲಿನ್ಸ್‌ಕಾಯಾ, ಲುಡ್ಮಿಲಾ ಸಾಮೊÕàನೋವಾ, ಡಯಾನಾ ಶ್ನೆ„ಡರ್‌ ಕೂಡ ಎರಡನೇ ಸುತ್ತು ದಾಟಿದ್ದಾರೆ. ಪೆಗುಲಾ “ಆಲ್‌ ಅಮೆರಿಕನ್‌’ ಪಂದ್ಯವೊಂದರಲ್ಲಿ ಸೋಫಿಯಾ ಕೆನಿನ್‌ಗೆ ಸೋಲುಣಿಸಿದರು.

ಪುರುಷರ ಸಿಂಗಲ್ಸ್‌
ಪುರುಷರ ಸಿಂಗಲ್ಸ್‌ನಲ್ಲಿ ಜಾನಿಕ್‌ ಸಿನ್ನರ್‌ ಆತಿಥೇಯ ದೇಶದ ಅಲೆಕ್ಸ್‌ ಮೈಕಲ್‌ಸನ್‌ ವಿರುದ್ಧ 6-4, 6-0, 6-2ರಿಂದ ಗೆದ್ದು ಬಂದರು. 2021ರ ಚಾಂಪಿಯನ್‌, 5ನೇ ಶ್ರೇಯಾಂಕದ ಡ್ಯಾನಿಲ್‌ ಮೆಡ್ವೆಡೇವ್‌, 10ನೇ ಶ್ರೇಯಾಂಕದ ಅಲೆಕ್ಸ್‌ ಡಿ ಮಿನೌರ್‌ ಮೂಡ 3ನೇ ಸುತ್ತು ತಲುಪಿದ್ದಾರೆ. ಮೆಡ್ವೆಡೇವ್‌ ಹಂಗೇರಿಯ ಫ್ಯಾಬಿಯನ್‌ ಮರೊಝಾನ್‌ ಅವರನ್ನು 6-3, 6-2, 7-6 (7-5) ಅಂತರದಿಂದ, ಆಸ್ಟ್ರೇಲಿಯದ ಅಲೆಕ್ಸ್‌ ಡಿ ಮಿನೌರ್‌ ಫಿನ್ಲಂಡ್‌ನ‌ ಓಟೊ ವಿರ್ಟಾನೆನ್‌ ಅವರನ್ನು 7-5, 6-1, 7-6 (7-3)ರಿಂದ ಹಿಮ್ಮೆಟ್ಟಿಸಿದರು.

7ನೇ ಶ್ರೇಯಾಂಕದ ಹರ್ಬರ್ಟ್‌ ಹುರ್ಕಾಝ್ ಮತ್ತು 16ನೇ ಶ್ರೇಯಾಂಕದ ಸೆಬಾಸ್ಟಿಯನ್‌ ಕೋರ್ಡ ಪರಾಭವಗೊಂಡರು.

ಬೋಪಣ್ಣ-ಎಬ್ಡೆನ್‌ ದ್ವಿತೀಯ ಸುತ್ತಿಗೆ
ಕಳೆದ ವರ್ಷದ ಫೈನಲ್‌ನಲ್ಲಿ ಎಡವಿದ್ದ ರೋಹನ್‌ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್‌ (ಆಸ್ಟ್ರೇಲಿಯ) ಯುಎಸ್‌ ಓಪನ್‌ ಪುರುಷರ ಡಬಲ್ಸ್‌ ನಲ್ಲಿ ಮೊದಲ ಸುತ್ತನ್ನು ದಾಟಿದ್ದಾರೆ. ಇವರಿಬ್ಬರು ಸೇರಿಕೊಂಡು ನೆದರ್ಲೆಂಡ್ಸ್‌ನ ಸ್ಯಾಂಡರ್‌ ಆರೆಂಡ್ಸ್‌-ರಾಬಿನ್‌ ಹಾಸೆ ವಿರುದ್ಧ 6-3, 7-5 ಅಂತರದ ಗೆಲುವು ಸಾಧಿಸಿದರು.

ಅಲ್ಕರಾಜ್‌ಗೆ ಸೋಲಿನ ಆಘಾತ
ಸ್ಪೇನಿನ ನೆಚ್ಚಿನ ಆಟಗಾರ ಕಾರ್ಲೋಸ್‌ ಅಲ್ಕರಾಜ್‌ ಅವರ ಸತತ 15 ಪಂದ್ಯಗಳ ಗ್ರ್ಯಾನ್‌ಸ್ಲಾಮ್‌ ಗೆಲುವಿನ ಓಟಕ್ಕೆ ನ್ಯೂಯಾರ್ಕ್‌ನಲ್ಲಿ ತೆರೆ ಬಿದ್ದಿದೆ. ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅವರನ್ನು ನೆದರ್ಲೆಂಡ್ಸ್‌ನ, 74ನೇ ರ್‍ಯಾಂಕ್‌ ಆಟಗಾರ ಬೋಟಿಲ್‌ ವಾನ್‌ ಡೆ ಝಾಂಡ್‌ಶಪ್‌ 6-1, 7-5, 6-4 ಅಂತರದಿಂದ ಮಣಿಸಿ ಕೂಟದ ದೊಡ್ಡದೊಂದು ಏರುಪೇರಿನ ಫ‌ಲಿತಾಂಶ ದಾಖಲಿಸಿದರು.

ಟಾಪ್ ನ್ಯೂಸ್

9

Imran Khan: ದಂಗೆ ಏಳಲು ಪ್ರಚೋದನೆ; ಇಮ್ರಾನ್‌ ವಿರುದ್ಧ ಕೇಸು

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

1-mmm

Jammu and Kashmir ಉಗ್ರವಾದ ಕೊನೆಯುಸಿರೆಳೆಯುತ್ತಿದೆ : ಪ್ರಧಾನಿ ಮೋದಿ

1-ddsadsa

Hindi ಮತ್ತು ಇತರ ಭಾಷೆಗಳ ನಡುವೆ ಎಂದಿಗೂ ಸ್ಪರ್ಧೆ ಇರಬಾರದು: ಅಮಿತ್ ಶಾ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Sudden rise in cooking oil prices

Price Hike; ಅಡುಗೆ ಎಣ್ಣೆ ದರ ದಿಢೀರ್ ಏರಿಕೆ: ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಶಾಕ್

Mamath2

Doctors Protest: ಇದು ನನ್ನ ಕಡೇ ಪ್ರಯತ್ನ, ನಿಮ್ಮ ಅಕ್ಕನಾಗಿ ಬಂದಿರುವೆ ಎಂದ ಸಿಎಂ ಮಮತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Duleep Trophy: ಪ್ರಥಮ್‌ ಸಿಂಗ್‌, ತಿಲಕ್‌ ವರ್ಮ ಶತಕ

Duleep Trophy: ಪ್ರಥಮ್‌ ಸಿಂಗ್‌, ತಿಲಕ್‌ ವರ್ಮ ಶತಕ

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

Pakistan Cricket Board: ಪಾಕ್‌ ಕ್ರಿಕೆಟ್‌ ಸ್ಟೇಡಿಯಂ ನವೀಕರಣಕ್ಕೆ ದೊಡ್ಡ ಮೊತ್ತ

Pakistan Cricket Board: ಪಾಕ್‌ ಕ್ರಿಕೆಟ್‌ ಸ್ಟೇಡಿಯಂ ನವೀಕರಣಕ್ಕೆ ದೊಡ್ಡ ಮೊತ್ತ

Hockey; India dominated against Pakistan; captain Harman scored 2 goals

Hockey; ಪಾಕ್‌ ವಿರುದ್ದ ಪ್ರಾಬಲ್ಯ ಮೆರೆದ ಭಾರತ; 2 ಗೋಲು ಬಾರಿಸಿದ‌ ನಾಯಕ ಹರ್ಮನ್

Olympics; Vinesh Phogat never questioned the verdict of Sports Court: Harish Salve

Olympics; ವಿನೇಶ್ ಫೋಗಟ್ ಕ್ರೀಡಾನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲೇ ಇಲ್ಲ: ಹರೀಶ್‌ ಸಾಳ್ವೆ

MUST WATCH

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

ಹೊಸ ಸೇರ್ಪಡೆ

crime (2)

Indi; ನಾಲ್ವರು ದುಷ್ಕರ್ಮಿಗಳಿಂದ ಯುವಕನ ಬರ್ಬರ ಹ*ತ್ಯೆ

16

Kumble: ವಿದ್ಯಾರ್ಥಿಗೆ ಹಲ್ಲೆ

15

Belthangady: ನೇಣುಬಿಗಿದು ವ್ಯಕ್ತಿ ಸಾವು

Duleep Trophy: ಪ್ರಥಮ್‌ ಸಿಂಗ್‌, ತಿಲಕ್‌ ವರ್ಮ ಶತಕ

Duleep Trophy: ಪ್ರಥಮ್‌ ಸಿಂಗ್‌, ತಿಲಕ್‌ ವರ್ಮ ಶತಕ

Thekkatte: ಸುಟ್ಟು ಕರಕಲಾದ ಎರಡು ದ್ವಿಚಕ್ರ ವಾಹನ

Thekkatte: ಸುಟ್ಟು ಕರಕಲಾದ ಎರಡು ದ್ವಿಚಕ್ರ ವಾಹನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.