US ಓಪನ್ ಗ್ರ್ಯಾನ್‌ಸ್ಲಾಮ್ : ಜೊಕೋವಿಕ್, ಅಲ್ಕರಾಜ್ ಆಕರ್ಷಣೆ
Team Udayavani, Aug 26, 2023, 6:40 AM IST
ನ್ಯೂಯಾರ್ಕ್: ವರ್ಷದ ಕೊನೆಯ ಗ್ರ್ಯಾನ್‌ಸ್ಲಾಮ್ ಟೆನಿಸ್ ಪಂದ್ಯಾವಳಿಯಾಗಿರುವ ಯುಎಸ್ ಓಪನ್ ಆರಂಭಕ್ಕೆ ಇನ್ನುಳಿದಿರುವುದು ಎರಡೇ ದಿನ. ಪುರುಷರ ವಿಭಾಗದ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಮತ್ತು 24ನೇ ಗ್ರ್ಯಾನ್‌ಸ್ಲಾಮ್ ಮೇಲೆ ಕಣ್ಣಿಟ್ಟಿರುವ ನೊವಾಕ್ ಜೊಕೋವಿಕ್ ಕೂಟದ ಪ್ರಬಲ ಆಟಗಾರರಾಗಿ ಗೋಚರಿಸುತ್ತಿದ್ದಾರೆ.
ಈಗಾಗಲೇ ಪ್ರಕಟಗೊಂಡಿರುವ ಡ್ರಾ ಪ್ರಕಾರ ಕಾರ್ಲೋಸ್ ಅಲ್ಕರಾಜ್ ಜರ್ಮನಿಯ ಡೊಮಿನಿಕ್ ಕೋಫರ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಗೆಲ್ಲುತ್ತ ಹೋದರೆ 6ನೇ ಶ್ರೇಯಾಂಕದ ಇಟಲಿ ಆಟಗಾರ ಜಾನಿಕ್ ಸಿನ್ನರ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಎದುರಿಸುವ ಸಾಧ್ಯತೆ ಇದೆ. ಕಳೆದ ವರ್ಷವೂ ಇವರಿಬ್ಬರು ಕ್ವಾರ್ಟರ್ ಫೈನಲ್‌ನಲ್ಲಿ ಎದುರಾಗಿದ್ದರು. 5 ಸೆಟ್‌ಗಳ ಇವರಿಬ್ಬರ ಸಮರ 5 ಗಂಟೆ, 15 ನಿಮಿಷಗಳ ಕಾಲ ಸಾಗಿದ್ದು ಯುಎಸ್ ಓಪನ್ ದಾಖಲೆ ಎನಿಸಿತ್ತು.
2021ರ ಬಳಿಕ ಜೊಕೋ
2 ಬಾರಿ ಪ್ರಶಸ್ತಿ ಗೆದ್ದಿರುವ ದ್ವಿತೀಯ ಶ್ರೇಯಾಂಕದ ನೊವಾಕ್ ಜೊಕೋವಿಕ್ ಫ್ರಾನ್ಸ್‌ನ ಅಲೆಕ್ಸಾಂಡರ್ ಮುಲ್ಲರ್ ಅವನರು° ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಇದು 2021ರ ಫೈನಲ್‌ನಲ್ಲಿ ಡ್ಯಾನಿಲ್ ಮೆಡ್ವಡೇವ್‌ಗೆ ಶರಣಾದ ಬಳಿಕ ಯುಎಸ್ ಓಪನ್‌ನಲ್ಲಿ ಜೊಕೋವಿಕ್ ಆಡಲಿರುವ ಮೊದಲ ಪಂದ್ಯ. ಕಳೆದ ವರ್ಷ ಕೊರೊನಾ ಲಸಿಕೆ ಹಾಕಿಸಿಕೊಳ್ಳದ ಕಾರಣ ಜೊಕೋಗೆ ನ್ಯೂಯಾರ್ಕ್ ಪ್ರವೇಶ ಸಾಧ್ಯವಾಗಿರಲಿಲ್ಲ.
ಮೊನ್ನೆಯಷ್ಟೇ ಸಿನ್ಸಿನಾಟಿ ಮಾಸ್ಟರ್ ಫೈನಲ್‌ನಲ್ಲಿ ಅಲ್ಕರಾಜ್ ಅವರನ್ನು ಮಣಿಸಿ ಹೊಸ ಜೋಶ್ ಪಡೆದಿರುವ ಜೊಕೋವಿಕ್, ಕ್ವಾರ್ಟರ್ ಫೈನಲ್‌ನಲ್ಲಿ ಸ್ಟೆಫನಸ್ ಸಿಸಿಪಸ್ ಅವರನ್ನು ಎದುರಿಸಬಹುದು ಎಂಬುದೊಂದು ಲೆಕ್ಕಾಚಾರ. ಆದರೆ ಸಿಸಿಪಸ್ ನ್ಯೂಯಾರ್ಕ್‌ನಲ್ಲಿನ್ನೂ 3ನೇ ಸುತ್ತು ದಾಟಿಲ್ಲ. ಉಳಿದ ಕ್ವಾರ್ಟರ್ ಫೈನಲ್‌ಗಳಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವೆಡೇವ್-ಆಂಡ್ರೇ ರುಬ್ಲೇವ್, ನಾರ್ವೆಯ ಕ್ಯಾಸ್ಪರ್ ರೂಡ್-ಕಳೆದ ವರ್ಷದ ರನ್ನರ್ ಅಪ್ ಹೋಲ್ಜರ್ ರುನೆ ಮುಖಾಮುಖಿ ಆಗುವ ಸಾಧ್ಯತೆ ಇದೆ.
ಟಾಪ್ ಹಾಫ್ ಡ್ರಾ
“ಟಾಪ್ ಹಾಫ್ ಡ್ರಾ” ಯಾದಿಯಲ್ಲಿ 2012ರ ಚಾಂಪಿಯನ್ ಆ್ಯಂಡಿ ಮರ್ರೆ, 2015ರ ವಿಜೇತ ಸ್ಟಾನಿಸ್ಲಾಸ್ ವಾವ್ರಿಂಕ, 2014ರ ರನ್ನರ್ ಅಪ್ ಕೀ ನಿಶಿಕೊರಿ, 2020ರ ಫೈನಲಿಸ್ಟ್ ಆಲೆಕ್ಸಾಂಡರ್ ಜ್ವೆರೇವ್ ಮೊದಲಾದವರಿದ್ದಾರೆ. ಇವರಲ್ಲಿ ಮರ್ರೆ 2016 ಬಳಿಕ ಯುಎಸ್ ಓಪನ್ 4ನೇ ಸುತ್ತು ಪ್ರವೇಶಿಸಿಲ್ಲ. ಮಾಜಿ ನಂ.1 ಆಟಗಾರನಾಗಿರುವ ಮರ್ರೆ ಫ್ರಾನ್ಸ್‌ನ ಕೊರಂಟಿನ್ ಮೌಟರ್ ವಿರುದ್ಧ ಪ್ರಥಮ ಪಂದ್ಯ ಆಡಲಿದ್ದಾರೆ. ಮುಂದುವರಿದರೆ ಗ್ರಿಗರ್ ಡಿಮಿಟ್ರೋವ್, ಅಲೆಕ್ಸಾಂಡರ್ ಜ್ವೆರೇವ್ ಎದುರಾಗಬಹುದು.
ಜೊಕೋವಿಕ್ “ಬಾಟಮ್ ಹಾಫ್ ಡ್ರಾ’ದಲ್ಲಿದ್ದಾರೆ. ಇಲ್ಲಿ ಸ್ಥಳೀಯ ಫೇವರಿಟ್‌ಗಳಾದ ಫ್ರಾನ್ಸೆಸ್ ಥಿಯಾಫೊ, ಟಾಮಿ ಪೌಲ್, ಟೇಲರ್ ಫ್ರಿಟ್ಜ್, ಬೆನ್ ಶೆಲ್ಟನ್, ಕ್ರಿಸ್ಟೋಫರ್ ಯೂಬ್ಯಾಂಕ್ಸ್ ಮೊದಲಾದವರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.