ಬ್ರಾಡಿ, ಒಸಾಕಾ ಕ್ವಾರ್ಟರ್ ಫೈನಲ್ ಪ್ರವೇಶ
Team Udayavani, Sep 7, 2020, 7:55 PM IST
ನ್ಯೂಯಾರ್ಕ್: ಅಮೆರಿಕದ ಜೆನ್ನಿಫರ್ ಬ್ರಾಡಿ ಮೊದಲ ಬಾರಿಗೆ ತವರಿನ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಅವರು 2016ರ ಯುಎಸ್ ಓಪನ್ ಚಾಂಪಿಯನ್, ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಅವರನ್ನು 6-1, 6-4ರಿಂದ ಕೆಡವಿ ಮುನ್ನಡೆ ಸಾಧಿಸಿದರು.
“ಕೆರ್ಬರ್ ಗ್ರೇಟ್ ಪ್ಲೇಯರ್. ಒಂದೊಂದು ಅಂಕಕ್ಕೂ ಅವರು ಭಾರೀ ಹೋರಾಟ ನಡೆಸುತ್ತಾರೆ. ಹೀಗಾಗಿ ಅವರೆದುರಿನ ಈ ಗೆಲುವು ನನ್ನ ಪಾಲಿಗೆ ಮಹತ್ವದ್ದಾಗಿದೆ’ ಎಂದು ಜೆನ್ನಿಫರ್ ಬ್ರಾಡಿ ಪ್ರತಿಕ್ರಿಯಿಸಿದ್ದಾರೆ.
ಕ್ವಾರ್ಟರ್ ಫೈನಲ್‌ನಲ್ಲಿ ಬ್ರಾಡಿ ಕಜಾಕ್‌ಸ್ಥಾನದ ಯುಲಿಯಾ ಪುಟಿನ್ಸೇವಾ ವಿರುದ್ಧ ಆಡಲಿದ್ದಾರೆ. ಇನ್ನೊಂದು ಮುಖಾಮುಖೀಯಲ್ಲಿ ಅವರು ಕ್ರೊವೇಶಿಯಾದ ಪೆಟ್ರಾ ಮಾರ್ಟಿಕ್ ವಿರುದ್ಧ 6-3, 2-6, 6-4 ಅಂತರದಿಂದ ಗೆದ್ದು ಬಂದರು.
ಒಸಾಕಾ ಓಟ
ಪೂರ್ತಿ ಫಿಟ್‌ನೆಸ್‌ಗೆ ಮರಳಿದಂತೆ ಕಂಡುಬಂದ 4ನೇ ಶ್ರೇಯಾಂಕದ ನವೋಮಿ ಒಸಾಕಾ ಎಸ್ತೋನಿಯಾದ ಅನೆಟ್ ಕೊಂಟಾವೀಟ್ ಅವರನ್ನು 6-3, 6-4 ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು. ಇದರೊಂದಿಗೆ ಕೊಂಟಾವೀಟ್ ವಿರುದ್ಧ ಆಡಿದ ಎಲ್ಲ 5 ಪಂದ್ಯಗಳನ್ನು ಒಸಾಕಾ ಗೆದ್ದಂತಾಯಿತು. 22ರ ಹರೆಯದ ಜಪಾನ್ ಆಟಗಾರ್ತಿ ಇನ್ನು ಅಮೆರಿಕದ ಶೆಲ್ಬಿ ರೋಜರ್ ಅವರನ್ನು ಎದುರಿಸಬೇಕಿದೆ. ಇನ್ನೊಂದು ಮುಖಾಮುಖೀಯಲ್ಲಿ ಶೆಲ್ಬಿ ರೋಜರ್ ಜೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾಗೆ 7-6 (7-5), 3-6, 7-6 (8-6) ಅಂತರದ ಸೋಲುಣಿಸಿದರು.
ನವೋಮಿ ಒಸಾಕಾ ವಿರುದ್ಧ ಆಡಿದ ಎಲ್ಲ 3 ಪಂದ್ಯಗಳನ್ನು ಗೆದ್ದ ದಾಖಲೆ ಶೆಲ್ಬಿ ರೋಜರ್ ಅವರದ್ದಾಗಿದೆ. ತವರಿನ ಆಟಗಾರ್ತಿಯ ಓಟಕ್ಕೆ ಒಸಾಕಾ ಬ್ರೇಕ್ ಹಾಕುವರೇ ಎಂಬುದೊಂದು ಕುತೂಹಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.