ನೂತನ ಚಾಂಪಿಯನ್ ನಿರೀಕ್ಷೆಯಲ್ಲಿ ನ್ಯೂಯಾರ್ಕ್
ಡೊಮಿನಿಕ್ ಥೀಮ್-ಅಲೆಕ್ಸಾಂಡರ್ ಜ್ವೆರೇವ್ ಫೈನಲ್ ಮುಖಾಮುಖಿ
Team Udayavani, Sep 12, 2020, 8:25 PM IST
ನ್ಯೂಯಾರ್ಕ್: ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ನೂತನ ಚಾಂಪಿಯನ್ ಒಬ್ಬನ ನಿರೀಕ್ಷೆಯಲ್ಲಿದೆ. ರವಿವಾರ ನಡೆಯುವ ಪ್ರಶಸ್ತಿ ಸಮರದಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಮತ್ತು ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಸೆಣಸಲಿದ್ದಾರೆ. ಇಲ್ಲಿ ಯಾರೇ ಗೆದ್ದರೂ ಅವರು ಮೊದಲ ಸಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವುದು ಕೂಡ ವಿಶೇಷ. ಈ ಅದೃಷ್ಟ ಯಾರದ್ದು ಎಂಬುದು ಟೆನಿಸ್ ಅಭಿಮಾನಿಗಳ ಕೌತುಕ.
ಶನಿವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯ 5ನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೇವ್ ಪಾಲಿಗೆ ಸಂಪೂರ್ಣ ಅದೃಷ್ಟದಾಟವಾಗಿತ್ತು. ಸ್ಪೇನಿನ 20ನೇ ಶ್ರೇಯಾಂಕದ ಪಾಬ್ಲೊ ಕರೆನೊ ಬುಸ್ಟ ವಿರುದ್ಧ ಮೊದಲೆರಡು ಸೆಟ್ ಕಳೆದುಕೊಂಡು ಇನ್ನೇನು ಗಂಟುಮೂಟೆ ಕಟ್ಟಬೇಕು ಎನ್ನುವ ಹಂತದಲ್ಲಿ ಜ್ವೆರೇವ್ ಆಟ ಒಮ್ಮೆಲೇ ಜೋರಾಯಿತು. ಅನಂತರದ ಮೂರೂ ಸೆಟ್‌ಗಳನ್ನು ವಶಪಡಿಸಿಕೊಂಡು ಮೊದಲ ಸಲ ಗ್ರ್ಯಾನ್‌ಸ್ಲಾಮ್ ಫೈನಲ್‌ಗೆ ಲಗ್ಗೆ ಇರಿಸಿದರು. ಜ್ವೆರೇವ್ ಗೆಲುವಿನ ಅಂತರ 3-6, 2-6, 6-3, 6-4, 6-3.
ದ್ವಿತೀಯ ಉಪಾಂತ್ಯದಲ್ಲಿ ಡೊಮಿನಿಕ್ ಥೀಮ್ ತೀವ್ರ ಪೈಪೋಟಿಯೊಡ್ಡಿದ ರಶ್ಯದ ಡ್ಯಾನಿಲ್ ಮೆಡ್ವೆಡೇವ್ ಅವರನ್ನು 6-2, 7-6 (9-7), 7-6 (7-5) ಅಂತರದಿಂದ ಪರಾಭ ವಗೊಳಿಸಿದರು. ಮೆಡ್ವೆಡೇವ್ ಕಳೆದ ವರ್ಷ ಇಲ್ಲಿ ಫೈನಲ್‌ಗೆ ಲಗ್ಗೆ ಹಾಕಿ ರಫೆಲ್ ನಡಾಲ್‌ಗೆ ಶರಣಾಗಿದ್ದರು.
1996 ಬಳಿಕ ಜರ್ಮನ್ ಟೆನಿಸಿಗ ನೋರ್ವನಿಗೆ ಗ್ರ್ಯಾನ್‌ಸ್ಲಾಮ್ ಒಲಿಯುವ ಹಂತದಲ್ಲಿದೆ. ಅಂದು ಬೋರಿಸ್ ಬೆಕರ್ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದ ರು. ಆದರೆ ಜ್ವೆರೇವ್ ಸವಾಲು ನಿರೀಕ್ಷಿಸಿದಷ್ಟು ಸುಲಭದ್ದಲ್ಲ. ಈ ವರ್ಷದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್ ತನಕ ಸಾಗಿದ್ದೇ ಜರ್ಮನಿಯ ಈ ಲಂಬೂ ಟೆನಿಸಿಗನ ಅತ್ಯುತ್ತಮ ಗ್ರ್ಯಾನ್‌ಸ್ಲಾಮ್ ಸಾಧನೆ ಆಗಿತ್ತು.
ಥೀಮ್‌ಗೆ ನಾಲ್ಕನೇ ಫೈನಲ್
ಆಸ್ಟ್ರಿಯಾದ ಡೊಮಿನಿಕ್ ಪಾಲಿಗೆ ಇದು 4ನೇ ಗ್ರ್ಯಾನ್‌ಸ್ಲಾಮ್ ಫೈನಲ್ ಆಗಿದೆ. ದುರದೃಷ್ಟವೆಂದರೆ, ಹಿಂದಿನ ಮೂರೂ ಪ್ರಶಸ್ತಿ ಸಮರಗಳಲ್ಲಿ ಇವರಿಗೆ ಸೋಲೇ ಸಂಗಾತಿಯಾಗಿತ್ತು. 2018 ಮತ್ತು 2019ರ ಫ್ರೆಂಚ್ ಓಪನ್ ಫೈನಲ್, ಈ ವರ್ಷದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲೆಲ್ಲ ಥೀಮ್ ಅವರದು ಸೋಲಿನದೇ ಗೇಮ್‌ಆಗಿತ್ತು. ಸಮಾಧಾನವೆಂದರೆ, ಎರಡೂ ಸಲ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಇವರನ್ನು ಸೋಲಿಸಿದ ರಫೆಲ್ ನಡಾಲ್ ಆಗಲಿ, ವರ್ಷಾರಂಭದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪರಾಭವಗೊಳಿಸಿದ ನೊವಾಕ್ ಜೊಕೋವಿಕ್ ಆಗಲಿ ಇವರ ಎದುರಾಳಿ ಅಲ್ಲ ಎಂಬುದು.
ಜೊನರೇವಾ-ಸಿಗ್ಮಂಡ್ ಜೋಡಿಗೆ ಡಬಲ್ಸ್ ಪ್ರಶಸ್ತಿ
ರಶ್ಯದ ವೆರಾ ಜೊನರೇವಾ ಮತ್ತು ಜರ್ಮನಿಯ ಲಾರಾ ಸಿಗ್ಮಂಡ್ ಜೋಡಿ ಯುಎಸ್ ಓಪನ್ ವನಿತಾ ಡಬಲ್ಸ್ ಪ್ರಶಸ್ತಿ ಜಯಿಸಿದೆ. ಫೈನಲ್ ಮುಖಾಮುಖಿಯಲ್ಲಿ ಇವರು ಕ್ಸು ಯಿಫಾನ್ (ಚೀನ) -ನಿಕೋಲ್ ಮೆಲಿಶರ್ (ಅಮೆರಿಕ)ವಿರುದ್ಧ 6-4, 6-4 ನೇರ ಸೆಟ್‌ಗಳಿಂದ ಗೆದ್ದು ಬಂದರು. 400,000 ಡಾಲರ್ ಬಹುಮಾನ ಮೊತ್ತವನ್ನು ತಮ್ಮ ಖಾತೆಗೆ ಸೇರಿಸಿದರು.5 ದಿನಗಳ ಹಿಂದಷ್ಟೇ 36ನೇ ವರ್ಷಕ್ಕೆ ಕಾಲಿಟ್ಟ ವೆರಾ ಜೊನರೇವಾ ಪಾಲಿಗೆ ಇದು 2ನೇ ಯುಎಸ್ ಓಪನ್ ವನಿತಾ ಡಬಲ್ಸ್ ಪ್ರಶಸ್ತಿಯಾಗಿದೆ. 2006ರಷ್ಟು ಹಿಂದೆ ನಥಾಲಿ ಡೆಶಿ ಜತೆಗೂಡಿ ಮೊದಲ ಸಲ ಚಾಂಪಿಯನ್ ಆಗಿದ್ದರು. 2012ರಲ್ಲಿ ಆಸ್ಟ್ರೇಲಿಯನ್ ಓಪನ್ ವನಿತಾ ಡಬಲ್ಸ್ ಪ್ರಸ್ತಿಯೂ ಜೊನರೇವಾಗೆ ಒಲಿದಿತ್ತು. 2016ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಜೊನರೇವಾ ಪಾಲಾದ ಪ್ರಮುಖ ಟೆನಿಸ್ ಪ್ರಶಸ್ತಿ ಇದಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.