ಸಾನಿಯಾ-ಪೆಂಗ್ ಪರಾಭವ
Team Udayavani, Sep 10, 2017, 7:35 AM IST
ನ್ಯೂಯಾರ್ಕ್: ಭಾರತದ ಸಾನಿಯಾ ಮಿರ್ಜಾ-ಚೀನದ ಶುಯಿ ಪೆಂಗ್ ಜೋಡಿಯ ಯುಎಸ್ ಓಪನ್ ವನಿತಾ ಡಬಲ್ಸ್ ಅಭಿಯಾನ ಸೆಮಿಫೈನಲಿಗೆ ಕೊನೆಗೊಂಡಿದೆ. 4ನೇ ಶ್ರೇಯಾಂಕದ ಇಂಡೋ-ಚೈನೀಸ್ ಜೋಡಿಯನ್ನು ದ್ವಿತೀಯ ಶ್ರೇಯಾಂಕದ ಮಾರ್ಟಿನಾ ಹಿಂಗಿಸ್ (ಸ್ವಿಜರ್‌ಲ್ಯಾಂಡ್)-ಯುಂಗ್ ಜಾನ್ ಚಾನ್ (ಚೈನೀಸ್ ತೈಪೆ) ಸೇರಿಕೊಂಡು 6-4, 6-4 ನೇರ ಸೆಟ್‌ಗಳಲ್ಲಿ ಮಣಿಸಿದರು.
ಇನ್ನೊಂದು ಸೆಮಿಫೈನಲ್‌ನಲ್ಲಿ ಜೆಕ್ ಗಣರಾಜ್ಯದ ಆಟಗಾರ್ತಿಯರೇ ಎದುರಾಗಿದ್ದರು. 7ನೇ ಶ್ರೇಯಾಂಕದ ಲೂಸಿ ರಡೆಕಾ-ಕ್ಯಾಥರಿನಾ ಸಿನಿಯಕೋವಾ 3ನೇ ಶ್ರೇಯಾಂಕದ ಲೂಸಿ ಸಫರೋವಾ-ಬಾಬೊìರಾ ಸ್ಟ್ರೈಕೋವಾ ವಿರುದ್ಧ 6-2, 7-5 ಅಂತರದ ಗೆಲುವು ಸಾಧಿಸಿದರು.
ಎರಡೂ ಸೆಟ್‌ಗಳಲ್ಲಿ ಸಾನಿಯಾ-ಪೆಂಗ್ ಜೋಡಿಯ ಆರಂಭ ಉತ್ತಮ ಮಟ್ಟದಲ್ಲೇ ಇತ್ತು. ಆದರೆ ನಿರ್ಣಾಯಕ ಹಂತದಲ್ಲಿ ಇವರಿಂದ ಒತ್ತಡವನ್ನು ನಿಭಾಯಿಸಲಾಗಲಿಲ್ಲ. 10 ಬ್ರೇಕ್ ಪಾಯಿಂಟ್‌ಗಳಲ್ಲಿ ಕೇವಲ ಎರಡನ್ನಷ್ಟೇ ಪರಿವರ್ತಿಸಲು ಸಾಧ್ಯವಾಯಿತು. ಇನ್ನೊಂದೆಡೆ ಹಿಂಗಿಸ್-ಚಾನ್ ಏಳರಲ್ಲಿ 4 ಬ್ರೇಕ್ ಪಾಯಿಂಟ್‌ಗಳ ಲಾಭವೆತ್ತಿದರು. ವಿನ್ನರ್ ಹೊಡೆತಗಳಲ್ಲೂ ಎದುರಾಳಿ ಜೋಡಿಯೇ ಮುಂದಿತ್ತು (44-22).
ದ್ವಿತೀಯ ಸೆಟ್‌ನಲ್ಲಿ ಸಾನಿಯಾ-ಪೆಂಗ್ 3-1ರ ಮುನ್ನಡೆ ಸಾಧಿಸಿದಾಗ ಸ್ಪರ್ಧೆ ಮುಂದಿನ ಸೆಟ್‌ಗೆ ವಿಸ್ತರಿಸಲ್ಪಡುತ್ತದೆಂದೇ ಭಾವಿಸಲಾಗಿತ್ತು. ಆದರೆ ಹಿಂಗಿಸ್ ದಿಟ್ಟ ಹೋರಾಟವೊಂದನ್ನು ತೋರ್ಪಡಿಸಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು.ಇದು ಈ ವರ್ಷ ಸಾನಿಯಾ ಮಿರ್ಜಾ ಅವರ ಅತ್ಯುತ್ತಮ ಗ್ರ್ಯಾನ್‌ಸ್ಲಾಮ್ ಪ್ರದರ್ಶನವಾಗಿದೆ. ಆಸ್ಟ್ರೇಲಿಯನ್ ಓಪನ್ ಮತ್ತು ವಿಂಬಲ್ಡನ್‌ನಲ್ಲಿ 3ನೇ ಸುತ್ತಿನಲ್ಲಿ ಸೋತಿದ್ದ ಸಾನಿಯಾ ಜೋಡಿ, ಫ್ರೆಂಚ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಎಡವಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.