US Open ಟೆನಿಸ್: ಸಿಸಿಪಸ್‌ಗೆ ಆಘಾತ; ಜೊಕೋವಿಕ್, ಸ್ವಿಯಾಟೆಕ್ ಮೂರನೇ ಸುತ್ತಿಗೆ
Team Udayavani, Aug 31, 2023, 11:56 PM IST
ನ್ಯೂಯಾರ್ಕ್: ಅಗ್ರ ಆಟಗಾರರಾದ ಸರ್ಬಿಯಾದ ನೊವಾಕ್ ಜೊಕೋವಿಕ್ ಮತ್ತು ಐಗಾ ಸ್ವಿಯಾಟೆಕ್ ಅವರು ತಮ್ಮ ಎದುರಾಳಿ ಯೆದುರು ಜಯ ಸಾಧಿಸಿ ಯುಎಸ್ ಓಪನ್ ಟೆನಿಸ್ ಕೂಟದಲ್ಲಿ ಮೂರನೇ ಸುತ್ತಿಗೇರಿದ್ದಾರೆ. ಇದೇ ವೇಳೆ ಗ್ರೀಕ್‌ನ ಏಳನೇ ಶ್ರೇಯಾಂಕದ ಸ್ಟೆಫನಸ್ ಸಿಸಿಪಸ್ ಐದು ಸೆಟ್‌ಗಳ ಮ್ಯಾರಥಾನ್ ಹೋರಾಟದಲ್ಲಿ ಸೋತು ಆಘಾತಕ್ಕೆ ಒಳಗಾದರು.
24ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಜೊಕೋವಿಕ್ ಸ್ಪೇನ್‌ನ ಬೆರ್ನಾಬೆ ಝಪಟ ಮಿರಾಲೆಸ್ ಅವರು° 6-4, 6-1, 6-1 ಸೆಟ್‌ಗಳಿಂದ ಕೆಡಹಿ ಮೂರನೇ ಸುತ್ತಿಗೇರಿದರು. ಮುಂದಿನ ಸುತ್ತಿನಲ್ಲಿ ಅವರು ತನ್ನ ದೇಶದವರೇ ದ ಲಾಸ್ಲೊ ಡಿಜರೆ ಅವರನ್ನು ಎದುರಿಸಲಿದ್ದಾರೆ.
ಸ್ಟ್ರೈಕರ್‌ಗೆ ಬಲುದೊಡ್ಡ ಗೆಲುವು
ಐದು ಸೆಟ್‌ಗಳ ಮ್ಯಾರಥಾನ್ ಹೋರಾಟದಲ್ಲಿ ಸ್ವಿಸ್‌ನ ಡೊಮಿನಿಕ್ ಸ್ಟ್ರೈಕರ್ ಅವರು ಏಳನೇ ಶ್ರೇಯಾಂಕದ ಸಿಸಿಪಸ್ ಅವರನ್ನು 7-5, 6-7 (2), 6-7 (5), 7-6 (6), 6-3 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದರು. ಇದು ಸ್ಟ್ರೈಕರ್ ಅವರ ಬಾಳ್ವೆಯ ಬಲುದೊಡ್ಡ ಗೆಲುವು ಆಗಿದೆ. ಇಲ್ಲಿ ಮುಖ್ಯ ಡ್ರಾದಲ್ಲಿ ಮೊದಲ ಬಾರಿ ಆಡಿದ ಸ್ಟ್ರೈಕರ್ ಅವರು ಅಮೋಘ ಸರ್ವ್ ಮತ್ತು ಕೌಶಲದ ಆಟದಿಂದಾಗಿ ಮೇಲುಗೈ ಸಾಧಿಸಿ ಗೆಲುವಿನ ಸಂಭ್ರಮ ಆಚರಿಸಿದರು.
ಝಾಂಗ್‌ಗೆ ಅಚ್ಚರಿಯ ಗೆಲುವು
ಕಳೆದ ವರ್ಷದ ರನ್ನರ್ ಅಪ್ ಕ್ಯಾಪ್ಸರ್ ರೂಡ್ ಅವರನ್ನು 6-4, 5-7, 6-2, 0-6, 6-2 ಸೆಟ್‌ಗಳಿಂದ ಸೋಲಿಸಿದ ಚೀನದ ಝಾಂಗ್ ಝಿಝೆನ್ ಅಚ್ಚರಿಯ ಗೆಲುವು ದಾಖಲಿಸಿದರು. 1973ರಲ್ಲಿ ಎಟಿಪಿ ರ್‍ಯಾಂಕಿಂಗ್ ಆರಂಭಿಸಿದ ಬಳಿಕ ಅಗ್ರ ಐವರೊಳಗಿನ ಎದರಾಳಿಯನ್ನು ಸೋಲಿಸಿದ ಮೊದಲ ಚೀನದ ಆಟಗಾರ ಎಂಬ ಗೌರವಕ್ಕೆ ಝಾಂಗ್ ಪಾತ್ರರಾಗಿದ್ದಾರೆ. ಇನ್ನುಳಿದ ಪಂದ್ಯಗಳಲ್ಲಿ ಫ್ರಾನ್ಸೆಸ್ ತಿಯಾಪೋಯಿ, ಟೇಲರ್ ಫ್ರಿಟ್ಜ್ ಮತ್ತು ಟಾಮಿ ಪಾಲ್ ಗೆಲುವಿನೊಂದಿಗೆ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಸ್ವಿಯಾಟೆಕ್ ಮುನ್ನಡೆ
ವಿಶ್ವದ ನಂಬರ್ ವನ್ ಐಗಾ ಸ್ವಿಯಾಟೆಕ್ ಅವರು ಆಸ್ಟ್ರೇಲಿಯದ ದಾರಿಯಾ ಸವಿಲ್ಲೆ ಅವರನ್ನು 6-3, 6-4 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತು ತಲುಪಿದರು. ಹದಿಹರೆಯದ ಅನುಭವಿಗಳ ಹೋರಾಟದಲ್ಲಿ ಅಮೆರಿಕದ ಆರನೇ ಶ್ರೇಯಾಂಕದ ಕೊಕೊ ಗಾಫ್ ಅವರು ರಷ್ಯಾದ ಮಿರ್ರಾ ಆ್ಯಂಡ್ರೀವಾ ಅವರನ್ನು 6-3, 6-2 ಸೆಟ್‌ಗಳಿಂದ ಉರುಳಿಸಿ ಮುನ್ನಡೆದರು. ಗಾಫ್ ಮುಂದಿನ ಸುತ್ತಿನಲ್ಲಿ ಬೆಲ್ಜಿಯಂನ ಎಲಿಸೆ ಮಾರ್ಟೆನ್ಸ್ ಅವರನ್ನು ಎದುರಿಸಲಿದ್ದಾರೆ.
ವೋಜ್ನಿಯಾಕಿಗೆ ದೊಡ್ಡ ಜಯ
11ನೇ ಶ್ರೇಯಾಂಕದ ಪೆಟ್ರಾ ಕ್ವಿಟೋವಾ ಅವರನ್ನು 7-5, 7-6 (5) ಸೆಟ್‌ಗಳಿಂದ ಮಣಿಸಿದ ಕ್ಯಾರೋಲಿನ್ ವೋಜ್ನಿಯಾಕಿ ಮುಂದಿನ ಸುತ್ತಿಗೆ ಮುನ್ನಡೆದರು. ಇದು ಅವರ ಬಾಳ್ವೆಯ ದೊಡ್ಡ ಗೆಲುವುಗಳಲ್ಲಿ ಒಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.