US Open ಟೆನಿಸ್‌ ಗ್ರ್ಯಾನ್‌ ಸ್ಲಾಮ್‌: ಜೊಕೋವಿಕ್‌, ಜ್ವರೇವ್‌ ಮೂರನೇ ಸುತ್ತಿಗೆ


Team Udayavani, Aug 30, 2024, 1:52 AM IST

1-aaarr

ನ್ಯೂಯಾರ್ಕ್‌: ಹಾಲಿ ಚಾಂಪಿಯನ್‌ ನೋವಾಕ್‌ ಜೊಕೋವಿಕ್‌ ಮತ್ತು ಜರ್ಮನಿಯ ಅಲೆಕ್ಸಾಂಡರ್‌ ಜ್ವರೇವ್‌ ಅವರು ಯುಎಸ್‌ ಓಪನ್‌ ಟೆನಿಸ್‌ ಕೂಟದಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ದಾಖಲೆ 25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿರುವ ಜೊಕೋವಿಕ್‌ 6-4, 6-4, 2-0 ಸೆಟ್‌ಗಳಿಂದ ಮುನ್ನಡೆಯಲ್ಲಿದ್ದಾಗ ಎದುರಾಳಿ ಸರ್ಬಿಯದ ಲಾಸ್ಲೊ ಡಿಜೆರೆ ಅವರು ಗಾಯಗೊಂಡು ಪಂದ್ಯ ತ್ಯಜಿಸಿದ್ದರಿಂದ ಮುಂದಿನ ಸುತ್ತಿಗೇರಿದರು. ಕಳೆದ ವರ್ಷ ಮೂರನೇ ಸುತ್ತಿನಲ್ಲಿ ಡಿಜೆರೆ ಅವರನ್ನು ಸೋಲಿಸಲು ಜೊಕೋವಿಕ್‌ ಅವರಿಗೆ ಐದು ಸೆಟ್‌ ಬೇಕಾಗಿತ್ತು. ಆದರೆ ಈ ಬಾರಿ ಜೊಕೋವಿಕ್‌ ಶ್ರೇಷ್ಠಮಟ್ಟದ ನಿರ್ವಹಣೆ ನೀಡಿ ಮುನ್ನಡೆ ಸಾಧಿಸಿ ಗೆಲುವಿನ ಉತ್ಸಾಹದಲ್ಲಿದ್ದರು.

ಈ ಗೆಲುವಿನಿಂದ ಜೊಕೋವಿಕ್‌ ಯುಎಸ್‌ ಓಪನ್‌ನಲ್ಲಿ ಇಷ್ಟರವರೆಗೆ 90 ಪಂದ್ಯ ಗೆದ್ದಂತಾಗಿದೆ. ಎಲ್ಲ ನಾಲ್ಕು ಗ್ರ್ಯಾನ್‌ ಸ್ಲಾಮ್‌ಗಳಲ್ಲಿ ಒಟ್ಟು 90 ಪಂದ್ಯ ಗೆದ್ದ ಮೊದಲ ಆಟಗಾರರೆಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಜೊಕೋವಿಕ್‌ ಮೂರನೇ ಸುತ್ತಿನಲ್ಲಿ 28ನೇ ಶ್ರೇಯಾಂಕದ ಅಲೆಕ್ಸಿ ಪೊಪಿರಿನ್‌ ಅವರನ್ನು ಎದುರಿಸಲಿದ್ದಾರೆ.

ಜ್ವರೇವ್‌ ಮುನ್ನಡೆ
ಜರ್ಮನಿಯ ಅಲೆಕ್ಸಾಂಡರ್‌ ಜ್ವರೇವ್‌ ಷವರು ಅಲೆಕ್ಸಾಂಡ್ರೆ ಮುಲ್ಲರ್‌ ಅವರನ್ನು 6-4, 7-6 (5), 6-1 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತಿಗೇರಿದ್ದಾರೆ. ಮುಂದಿನ ಸುತ್ತಿನಲ್ಲಿ ಅವರು ಆರ್ಜೆಂಟೀನದ ತೋಮಸ್‌ ಮಾರ್ಟಿನ್‌ ಎಚೆವೆರ್ರಿ ಅವರನ್ನು ಎದುರಿಸಲಿದ್ದಾರೆ. ಕಳೆದ ವರ್ಷದ ಫ್ರೆಂಚ್‌ ಓಪನ್‌ನಲ್ಲಿ ಜ್ವರೇವ್‌ ಅವರು ಎಚೆವೆರ್ರಿ ಅವರನ್ನು ನಾಲ್ಕು ಸೆಟ್‌ಗಳಲ್ಲಿ ಕೆಡಹಿದ್ದರು. ಇನ್ನೊಂದು ಪಂದ್ಯದಲ್ಲಿ ಆ್ಯಂಡ್ರೆ ರುಬ್ಲೆವ್‌ ಅವರು ಐದು ಸೆಟ್‌ಗಳ ಮ್ಯಾರಥಾನ್‌ ಹೋರಾಟ ನಡೆಸಿ ಸೋಲಿನಿಂದ ಪಾರಾಗಲು ಯಶಸ್ವಿಯಾದರು. ಮೊದಲ ಆರ್ಥರ್‌ ರಿಂಡರ್‌ನೆಕ್‌ ವಿರುದ್ಧದ ಈ ಪಂದ್ಯದಲ್ಲಿ ರುಬ್ಲೆವ್‌ ಮೊದಲ ಎರಡು ಸೆಟ್‌ ಕಳೆದುಕೊಂಡಿದ್ದರೂ ಆಬಳಿಕ ಅಮೋಘ ಹೋರಾಟ ಸಂಘಟಿಸಿಜ 4-6, 5-7, 6-1, 6-2, 6-2 ಸೆಟ್‌ಗಳಿಂದ ಪಂದ್ಯ ಗೆದ್ದರು.

ತಿಯಾಫೋಯಿಗೆ ಗೆಲುವು
ಶಕ್ತಿಶಾಲಿ ಸರ್ವ್‌ಗಳ ಫ್ರಾನ್ಸೆಸ್‌ ತಿಯಾಫೋಯಿ ಅವರು ಮೂರನೇ ಸುತ್ತಿಗೇರಿದರು. ಕಜಾಕ್‌ಸ್ಥಾನದ ಅಲೆಕ್ಸಾಂಡರ್‌ ಶೆವ್‌ಚೆಂಕೊ ಅವರು ಗಾಯಳಾಗಿ ಪಂದ್ಯ ತ್ಯಜಿಸಿದಾಗ ತಿಯಾಫೋಯಿ ಅವರು 6-4, 6-1, 1-0 ಸೆಟ್‌ಗಳಿಂದ ಮುನ್ನಡೆಯಲ್ಲಿದ್ದರು. 2022ರಲ್ಲಿ ಅವರು ಇಲ್ಲಿ ಸೆಮಿಫೈನಲ್‌ ತಲುಪಿದ್ದರು.

ಕೊಕೊ ಗಾಫ್ ಮುನ್ನಡೆ
ಹಾಲಿ ಚಾಂಪಿಯನ್‌ ಅಮೆರಿಕದ ಕೊಕೊ ಗಾಫ್ ಅವರು ಸುಲಭ ಜಯದೊಂದಿಗೆ ವನಿತೆಯರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತಿಗೇರಿದ್ದಾರೆ. ತಟಾjನಾ ಮರಿಯಾ ಅವರನ್ನು 6-4, 6-0 ನೇರ ಸೆಟ್‌ಗಳಿಂದ ಉರುಳಿಸಿದ ಗಾಫ್ ಮುಂದಿನ ಸುತ್ತಿನಲ್ಲಿ ಎಲಿನಾ ಸ್ವಿಟೋಲಿನಾ ಅವರ ಸವಾಲನ್ನು ಎದುರಿಸಲಿದ್ದಾರೆ. ಸ್ವಿಟೋಲಿನಾ ಇನ್ನೊಂದು ಪಂದ್ಯದಲ್ಲಿ ಅನ್ಹೆಲಿನಾ ಕಲಿನನಾ ಅವರನ್ನು 6-1, 6-2 ಸೆಟ್‌ಗಳಿಂದ ಉರುಳಿಸಿದ್ದರು.

ಇನ್ನೊಂದು ಪಂದ್ಯದಲ್ಲಿ ಅರಿನಾ ಸಬಲೆಂಕಾ ಅವರು ಇಟಲಿಯ ಲೂಸಿಯಾ ಬ್ರೋನ್‌ಝೆಟಿ ಅವರನ್ನು 6-3, 6-1 ಸೆಟ್‌ಗಳಿಂದ ಕೆಡಹಿ ಮೂರನೇ ಸುತ್ತು ಪ್ರವೇಶಿಸಿದರು. ಅವರು ಪ್ರಶಸ್ತಿ ಗೆಲ್ಲುವ ಫೇವರಿಟ್‌ಗಳಲ್ಲಿ ಒಬ್ಬರಾಗಿದ್ದಾರೆ. ವಿಕ್ಟೋರಿಯಾ ಅಜರೆಂಕಾ ಅವರು ಕ್ಲಾರಾ ಬುರೆಲ್‌ ವಿರುದ್ಧದ ಪಂದ್ಯದ ವೇಳೆ ಆರೋಗ್ಯ ಸಮಸ್ಯೆ ಎದುರಿಸಿದ್ದರೂ 6-1, 6-4 ಸೆಟ್‌ಗಳಿಂದ ಪಂದ್ಯ ಗೆಲ್ಲಲು ಯಶಸ್ವಿಯಾದರು.

ವನಿತೆಯರ ಇನ್ನುಳಿದ ಪಂದ್ಯಗಳಲ್ಲಿ ದರಿಯಾ ಕಸತ್ಕಿನಾ ಅವರು ಅಮೆರಿಕದ ಪೇಟನ್‌
ಸ್ಟೀರ್ನ್ಸ್ ಕೈಯಲ್ಲಿ 6-1, 7-6 (7-3) ಸೆಟ್‌ಗಳಿಂದ ಸೋಲನ್ನು ಕಂಡರು.

ಬಾಲಾಜಿ, ಭಾಂಬ್ರಿ ದ್ವಿತೀಯ ಸುತ್ತಿಗೆ
ಭಾರತದ ಡಬಲ್ಸ್‌ ಆಟಗಾರರಾದ ಯುಎಸ್‌ ಓಪನ್‌ನ ಪುರುಷರ ಡಬಲ್ಸ್‌ನಲ್ಲಿ ದ್ವಿತೀಯ ಸುತ್ತಿಗೇರುವ ಮೂಲಕ ಭರವಸೆ ಮೂಡಿಸಿದ್ದಾರೆ. ಭಾರತದ ಡೇವಿಸ್‌ ಕಪ್‌ ಆಟಗಾರರಾದ ಎನ್‌. ಶ್ರೀರಾಮ್‌ ಬಾಲಾಜಿ ಮತ್ತು ಯೂಕಿ ಭಾಂಬ್ರಿ ಅವರು ತಮ್ಮ ಜತೆಗಾರರ ನೆರವಿನಿಂದ ಮೊದಲ ಸುತ್ತು ದಾಟಿದ್ದಾರೆ.

ಆರ್ಜೆಂಟೀನಾದ ಗೈಡೊ ಆ್ಯಂಡ್ರಿಯೊಝಿ ಅವರ ಜತೆಗೂಡಿ ಆಡಿದ ಬಾಲಾಜಿ ಅವರು ನ್ಯೂಜಿಲ್ಯಾಂಡಿನ ಮಾರ್ಕಸ್‌ ಡೇನಿಯಲ್‌ ಮತ್ತು ಮೆಕ್ಸಿಕೊದ ಮಿಗ್ಯುಲ್‌ ರೆಯಿಸ್‌ ವರೆಲ ಅವರನ್ನು 5-7, 6-1, 7-6 (12-6) ಸೆಟ್‌ಗಳಿಂದ ಸೋಲಿಸಿ ದ್ವಿತೀಯ ಸುತ್ತಿಗೇರಿದರು.
ಇದೇ ವೇಳೆ ಫ್ರಾನ್ಸ್‌ನ ಅಲಾºನೊ ಒಲಿವೆಟ್ಟಿ ಅವರ ಜತೆಗೂಡಿ ಆಡುತ್ತಿರುವ ಯೂಕಿ ಭಾಂಬ್ರಿ ಅವರು ರಿಯಾನ್‌ ಸೆಗ್ಗರ್‌ಮ್ಯಾನ್‌ ಮತ್ತು ಪ್ಯಾಟ್ರಿಕ್‌ ಟ್ರಿಹಾಕ್‌ ಅವರನ್ನು 6-3, 6-4 ನೇರ ಸೆಟ್‌ಗಳಿಂದ ಸೋಲಿಸಿ ಮುನ್ನಡೆದರು.

ಟಾಪ್ ನ್ಯೂಸ್

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.