Usain Bolt; ನನ್ನ ದಾಖಲೆಗಳಿಗೆ ಸದ್ಯ ಯಾವುದೇ ಗಂಡಾಂತರವಿಲ್ಲ
Team Udayavani, May 18, 2024, 6:30 AM IST
ಹೊಸದಿಲ್ಲಿ: ವಿಶ್ವದಾಖಲೆಯ ಓಟಗಾರ ಉಸೇನ್ ಬೋಲ್ಟ್ 8 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಮರಳುತ್ತಿದ್ದಾರೆ. ಅಂದಮಾತ್ರಕ್ಕೆ ಸಮಕಾಲೀನ ವೇಗಿಗಳು ಭಯಪಡುವ ಅಗತ್ಯವಿಲ್ಲ. ಬೋಲ್ಟ್ ಪ್ಯಾರಿಸ್‌ಗೆ ತೆರಳುತ್ತಿರುವುದು ಒಲಿಂಪಿಕ್ಸ್ ವೀಕ್ಷಿಸಲು!
ಐಸಿಸಿ ಟಿ20 ವಿಶ್ವಕಪ್ ರಾಯಭಾರಿಯೂ ಆಗಿರುವ ಬೋಲ್ಟ್, ಸದ್ಯ ನ್ಯೂಯಾರ್ಕ್‌ನಲ್ಲಿದ್ದಾರೆ. ಅಲ್ಲಿಂದ ಪಿಟಿಐಗೆ ದೂರವಾಣಿ ಮೂಲಕ ಸಂದರ್ಶನ ನೀಡಿದ್ದು, ಸದ್ಯ ನನ್ನ ದಾಖಲೆಗಳಿಗೆ ಯಾವುದೇ ಗಂಡಾಂತರ ಎದುರಾಗದು ಎಂದಿದ್ದಾರೆ.
“ನನ್ನ ವಿಶ್ವದಾಖಲೆಗೆ ಯಾವುದೇ ಭೀತಿ ಇದೆ ಎಂದು ಅನಿಸದು. ಸದ್ಯ ಯಾರಿಂದಲೂ ಇದನ್ನು ಮುರಿಯಲಾಗದು. ಇದಕ್ಕೆ ಇನ್ನೂ ಅನೇಕ ವರ್ಷ ಬೇಕಿದೆ’ ಎಂದು ನಗುತ್ತ ಹೇಳಿದರು.
2009ರ ಬರ್ಲಿನ್ ವಿಶ್ವ ಚಾಂಪಿಯನ್‌ಶಿಪ್‌ನ 100 ಮೀ. ಓಟ (9.58 ಸೆಕೆಂಡ್ಸ್) ಹಾಗೂ 200 ಮೀ. ಓಟದಲ್ಲಿ (19.19 ಸೆಕೆಂಡ್ಸ್) ಬೋಲ್ಟ್ ನಿರ್ಮಿಸಿದ ವಿಶ್ವದಾಖಲೆ ಈಗಲೂ ಊರ್ಜಿತದಲ್ಲಿದೆ. 3 ಸತತ ಒಲಿಂಪಿಕ್ಸ್ ಕೂಟಗಳಲ್ಲಿ 100 ಮೀ. ಹಾಗೂ 200 ಮೀ. ಸ್ಪರ್ಧೆಗಳೆರಡರಲ್ಲೂ ಚಿನ್ನ ಗೆದ್ದ ವಿಶ್ವದ ಏಕೈಕ ಸ್ಪ್ರಿಂಟರ್ ಎಂಬ ಹೆಗ್ಗಳಿಕೆ ಕೂಡ ಬೋಲ್ಟ್ ಅವರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.