ಗಾಳಿಯಲ್ಲೂ ಓಡಿ ಗೆದ್ದ ಉಸೇನ್ ಬೋಲ್ಟ್!
Team Udayavani, Sep 15, 2018, 6:25 AM IST
ಕಿಂಗ್‌ಸ್ಟನ್ (ಜಮೈಕಾ): ಉಸೇನ್ ಬೋಲ್ಟ್ ವಿಶ್ವ ವೇಗದ ಓಟಗಳ ಸರದಾರ. ಸಿಂಥೆಟಿಕ್ ಟ್ರ್ಯಾಕ್‌ಗಳಲ್ಲಿ ಚಿನ್ನದ ಹೆಜ್ಜೆ ಇಟ್ಟ ವೀರ. ಒಲಿಂಪಿಕ್ಸ್ ಇರಲಿ ಅಥವಾ ವಿಶ್ವ ಚಾಂಪಿಯನ್‌ಶಿಪ್ ಇರಲಿ, ಬೋಲ್ಟ್ ಅಂದರೆ ಜಿಂಕೆ. ಬೋಲ್ಟ್ ಅಂದರೆ ಚಿನ್ನ. ಈ ವಿಶ್ವ ಪರಾಕ್ರಮಿ ನಿವೃತ್ತಿಯ ಬಳಿಕವೂ ನಿರಂತರ ಸುದ್ದಿಯಾಗುತ್ತಲೇ ಇದ್ದಾರೆ.
ಇತ್ತೀಚಿಗೆ ಫುಟ್‌ಬಾಲ್ ಕ್ಲಬ್ ಪರ ಆಡಿ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದ ಬೋಲ್ಟ್ ಇದೀಗ ಹೊಸ ಕಸರತ್ತು ಮಾಡಿದ್ದಾರೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ “ಓಡಿ “(ತೇಲಾಡಿ) ಗೆದ್ದಿದ್ದಾರೆ!
ಶೂನ್ಯ ಗುರುತ್ವಾಕರ್ಷಣೆಯನ್ನು ಸೃಷ್ಟಿಸಲಾಗಿದ್ದ ಫ್ರಾನ್ಸ್ ವಿಮಾನದೊಳಗೆ ಬೋಲ್ಟ್ ಮೂವರೊಂದಿಗೆ ಓಡಿದ್ದಾರೆ; ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಓಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೋಲ್ಟ್ ಸಾಧನೆಗೆ ಅಭಿಮಾನಿಗಳಿಂದ ಶ್ಲಾಘನೆಯೂ ವ್ಯಕ್ತವಾಗಿದೆ.
ವಿಮಾನದೊಳಗೆ ಸಾಹಸ
ಫ್ರಾನ್ಸ್‌ನ ಮಧ್ಯ ತಯಾರಕ ಕಂಪೆನಿಯೊಂದು ಉಸೇನ್ ಬೋಲ್ಟ್ಗೆ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಓಡುವ ಸವಾಲನ್ನು ಒಡ್ಡಿತ್ತು. ಭವಿಷ್ಯದ ಬಾಹ್ಯಾಕಾಶ ಪ್ರವಾಸೋದ್ಯಮ ಅಭಿವೃದ್ದಿ ಪಡಿಸುವುದು, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಇಂಥದೊಂದು ಶೂನ್ಯ ಗುರುತ್ವಾಕರ್ಷಣೆಯನ್ನೂ ವಿಮಾನದೊಳಗೆ ಸೃಷ್ಟಿಸಲಾಗಿತ್ತು. ಬೋಲ್ಟ್ ಸಂಸ್ಥೆಯ ವಿಶೇಷ ಆಹ್ವಾನದ ಮೇರೆಗೆ “ಫ್ರಾನ್ಸ್ ಏರ್‌ಬಸ್ ಎ310′ ವಿಮಾನ ಏರಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಉಸೇನ್ ಬೋಲ್ಟ್ ಓಡಿದರು.
“ಮೂವರೊಂದಿಗೆ ಓಡುವ ಸವಾಲು ಪಡೆದಿದ್ದ ನಾನು ಆರಂಭದಲ್ಲಿ ಸ್ವಲ್ಪ ಆತಂಕಕ್ಕೆ ಒಳಗಾಗಿದ್ದೆ. ಅನಂತರ ಪ್ರಯತ್ನಿಸಿದೆ. ಓ…ದೇವರೆ ಏನಾಗುತ್ತಿದೆ ಎಂದು ನನಗೆ ನಾನೇ ಪ್ರಶ್ನಿಸಿಕೊಂಡಿದ್ದೆ. ಬಳಿಕ ಗಾಳಿಯಲ್ಲಿ ತೇಲಾಡಿಕೊಂಡು ಓಡಿದ ಕ್ಷಣ ವಾವ್ ಎನಿಸಿತು’ ಎಂದು ಬೋಲ್ಟ್ ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ವೃತ್ತಿಪರ ಫುಟ್ಬಾಲಿಗ ಬೋಲ್ಟ್
ಆ್ಯತ್ಲೀಟ್ ಆಗಿದ್ದ ಉಸೇನ್ ಬೋಲ್ಟ್ ಈಗ ವೃತ್ತಿಪರ ಫುಟ್ಬಾಲಿಗರಾಗಿ ಬದಲಾಗಿದ್ದಾರೆ. ಟ್ರ್ಯಾಕ್ ಸ್ಪರ್ಧೆಗೆ ವಿದಾಯ ಹೇಳಿದ ಬಳಿಕ ಅವರು ಆಸ್ಟ್ರೇಲಿಯದ ಸೆಂಟ್ರಲ್ ಕೋಸ್ಟ್ ಮ್ಯಾರಿನರ್ಸ್ ತಂಡದ ಜತೆ ಅಭ್ಯಾಸ ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ಜರ್ಮನಿಯ ಕ್ಲಬ್ ತಂಡದಲ್ಲಿ ತರಬೇತಿ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
Team Indiaಕ್ಕೆ ಆಸೀಸ್ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು
ICC ಇಂದು ಸಭೆ: ಚಾಂಪಿಯನ್ಸ್ ಟ್ರೋಫಿ; ಹೈಬ್ರಿಡ್ ಮಾದರಿಗೆ ಮತದಾನ?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.