ಬೆಲ್ಜಿಯಂನ ಡೊರೆನ್‌ಗೆ ಅವಳಿ ಪ್ರಶಸ್ತಿ
Team Udayavani, Feb 7, 2018, 7:30 AM IST
ಬರ್ಲಿನ್: ಬೆಲ್ಜಿಯಂನ ಆರ್ಥರ್ ವಾನ್ ಡೊರೆನ್ ಅವರು ಇಂಟರ್‌ನ್ಯಾಶನಲ್ ಹಾಕಿ ಫೆಡರೇಶನ್ (ಎಫ್ಐಎಚ್)ನ 2017ರ ಹಾಕಿ ಸ್ಟಾರ್ ಪ್ರಶಸ್ತಿಗಳಲ್ಲಿ ವರ್ಷದ ಶ್ರೇಷ್ಠ ಪುರುಷ ಆಟಗಾರ ಮತ್ತು ವರ್ಷದ ಉದಯೋನ್ಮುಖ ತಾರೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಡೊರೆನ್ ಸತತ ಎರಡನೇ ವರ್ಷ ಉದಯೋನ್ಮುಖ ತಾರೆ ಪ್ರಶಸ್ತಿ ಪಡೆದಿದ್ದಾರೆ.
ಸೋಮವಾರ ಬರ್ಲಿನ್‌ನ ಸ್ಟಿಲ್‌ವೆರ್ಕ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ಆರ್ಜೆಂಟೀನಾದ ಡೆಲ್ಫಿನಾ ಮೆರಿನೊ ವರ್ಷದ ವನಿತಾ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸತತ ಎರಡನೇ ವರ್ಷ ಆರ್ಜೆಂಟೀನಾದ ಮರಿಯಾ ಜೋಸ್ ಗ್ರ್ಯಾನಾಟೊ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇಂಗ್ಲೆಂಡಿನ ಮ್ಯಾಡೀ ಹಿಂಚ್ ಅವರು ವರ್ಷದ ವನಿತಾ ಗೋಲ್‌ಕೀಪರ್ ಪ್ರಶಸ್ತಿ ಪಡೆದರೆ ಬೆಲ್ಜಿಯಂ ವಿನ್ಸೆಂಟ್ ವನಸ್ಕ್ ವರ್ಷದ ಶ್ರೇಷ್ಠ ಪುರುಷ ಗೋಲ್‌ಕೀಪರ್ ಪ್ರಶಸ್ತಿ ಪಡೆದಿದ್ದಾರೆ. ಈ ವರ್ಷ ಭಾರತದಿಂದ ಯಾವುದೇ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಲಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್ ಮಾರ್ಮಿಕ ಮಾತು
Bengaluru:1 ಕಿ.ಮೀ. ಬೆನ್ನಟ್ಟಿ ಕಾಡುಪ್ರಾಣಿ ಬೇಟೆಗಾರರ ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
Bengaluru: ನಾಯಿ ಕಚ್ಚಿ 4 ವರ್ಷದ ಬಾಲಕನಿಗೆ ಗಾಯ: ಶ್ವಾನ ಮಾಲಿಕನ ವಿರುದ್ಧ ಪ್ರಕರಣ ದಾಖಲು
chikkamagaluru: ಹೆಬ್ಬಾಳ್ಕರ್ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ
Bengaluru: ಜಗಳ ಬಿಡಿಸಲು ಬಂದ ಮಾವನ ಕೊಂದ ಅಳಿಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.