ವನಿತಾ ಯೂರೋ ಕಪ್ ಫುಟ್ಬಾಲ್: ಹಾಲೆಂಡ್‌ಗೆ ಮೊದಲ ಪ್ರಶಸ್ತಿ
Team Udayavani, Aug 8, 2017, 11:40 AM IST
ಎನ್‌ಶೇಡ್ (ಹಾಲೆಂಡ್): ಹಾಲೆಂಡ್ ತಂಡ ಯೂರೋ ಕಪ್ ವನಿತಾ ಫುಟ್ಬಾಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಮೂಡಿಬಂದಿದೆ. ರವಿವಾರ ಎನ್‌ಶೇಡ್‌ನಲ್ಲಿ ನಡೆದ ಪ್ರಶಸ್ತಿ ಸಮರದಲ್ಲಿ ಅದು ಡೆನ್ಮಾರ್ಕ್ ವಿರುದ್ಧ 4-2 ಅಂತರದ ಜಯ ಸಾಧಿಸಿತು.
ಡೆನ್ಮಾರ್ಕ್‌ನ ಮುನ್ನಡೆ ಯೊಂದಿಗೆ ಈ ಹೋರಾಟ ಕಾವೇರಿಸಿಕೊಂಡಿತ್ತು. ನಾಡಿಯಾ ನಾದಿಮ್ ಪಂದ್ಯದ ಆರೇ ನಿಮಿಷದಲ್ಲಿ ಪೆನಾಲ್ಟಿ ಗೋಲೊಂದರ ಮೂಲಕ ಡೆನ್ಮಾರ್ಕ್ ಖಾತೆ ತೆರೆದರು. ಆದರೆ ಇದಾದ ನಾಲ್ಕೇ ನಿಮಿಷದಲ್ಲಿ ಹಾಲೆಂಡ್ ತಂಡದ ವಿವಿ ಯನ್ ಮೀಡೆಮಾ ಆಕರ್ಷಕ ಗೋಲಿನ ಮೂಲಕ 1-1 ಸಮಬಲ ತಂದಿತ್ತರು. ಪಂದ್ಯದ ಮುಕ್ತಾಯಕ್ಕೆ 2 ನಿಮಿಷ ಇರುವಾಗ ಮತ್ತೂಂದು ಮಹತ್ವದ ಗೋಲನ್ನು ಅವರು ಸಿಡಿಸಿದರು.
ಲೀಕೆ ಮಾರ್ಟೆನ್ಸ್ ಮತ್ತು ನಾಯಕಿ ಶೆರಿಡಾ ಸ್ಪಿಟ್ಸ್ ಉಳಿದೆರಡು ಗೋಲು ಹೊಡೆದರು. ಡೆನ್ಮಾರ್ಕ್‌ನ ಮತ್ತೂಂದು ಗೋಲು 33ನೇ ನಿಮಿಷದಲ್ಲಿ ನಾಯಕಿ ಪೆರ್ನಿಲ್ ಹಾರ್ಡರ್ ಅವರಿಂದ ದಾಖಲಾಯಿತು. ಆದರೆ ಈ 2 ಗೋಲು ಗಳಿಗೆ ಡೆನ್ಮಾರ್ಕ್ ಹೋರಾಟ ಸೀಮಿತಗೊಂಡಿತು.
ಹಾಲೆಂಡ್ ಯೂರೋ ಕಪ್ ಗೆದ್ದ ಕೇವಲ 4ನೇ ತಂಡವಾಗಿದೆ. ಜರ್ಮನಿ ಸರ್ವಾಧಿಕ 8 ಸಲ, ನಾರ್ವೆ ಮತ್ತು ಸ್ವೀಡನ್ ತಲಾ 2 ಸಲ ಚಾಂಪಿಯನ್ ಆಗಿವೆ. 1995ರಿಂದ 2013ರ ತನಕ ಜರ್ಮನಿ ಸತತ 6 ಸಲ ಪ್ರಶಸ್ತಿಯನ್ನೆತ್ತಿ ತನ್ನ ಪ್ರಾಬಲ್ಯ ಸ್ಥಾಪಿಸಿತ್ತು. ಈ ಪಂದ್ಯಾವಳಿಗೆ ಅಧಿಕೃತ ಮಾನ್ಯತೆ ಲಭಿಸುವ ಮುನ್ನ ಇಟಲಿ (1969) ಮತ್ತು ಡೆನ್ಮಾರ್ಕ್ (1979) ಚಾಂಪಿಯನ್ ಆಗಿದ್ದವು.
“ಇದೊಂದು ಓಪನ್ ಮ್ಯಾಚ್ ಆಗಿತ್ತು. ಎರಡೂ ತಂಡಗಳು ಅಮೋಘ ಹೋರಾಟ ಪ್ರದರ್ಶಿಸಿದವು. ಪ್ರಶಸ್ತಿ ಸಮರ ವೊಂದರಲ್ಲಿ 6 ಗೋಲು ದಾಖ ಲಾದದ್ದು ವನಿತಾ ಫುಟ್ಬಾಲ್ ಪಾಲಿಗೆ ಮಹತ್ವದ ಸಂಗತಿಯಾಗಿದೆ’ ಎಂದು ಹಾಲೆಂಡ್ ಕೋಚ್ ಸರಿನಾ ವೀಗ್‌ಮನ್ ಪ್ರತಿಕ್ರಿಯಿಸಿದ್ದಾರೆ.
“ನಾವು ಈ ಕೂಟದಲ್ಲಿ 6 ಆದ್ಭುತ ಪಂದ್ಯಗಳನ್ನು ಆಡಿದ್ದೇವೆ. ಹಿನ್ನಡೆ ಸಾಧಿಸಿ ದರೂ ಗೆದ್ದು ಬರುವ ತಾಕತ್ತು ನಮಗಿದೆ ಎಂಬುದನ್ನು ಫೈನಲ್‌ನಲ್ಲಿ ತೋರಿಸಿ ಕೊಟ್ಟಿದ್ದೇವೆ…’ ಎಂಬುದು ಹಾಲೆಂಡಿನ ಗೆಲುವಿನ ರೂವಾರಿ ವಿವಿಯನ್ ಮೀಡೆಮಾ ಅವರ ಹೇಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.