ಪ್ಲೇ ಆಫ್ ಪಂದ್ಯಗಳ ನಡುವೆ ವನಿತಾ ಐಪಿಎಲ್ ಟೂರ್ನಿ
Team Udayavani, Apr 9, 2019, 6:30 AM IST
ಹೊಸದಿಲ್ಲಿ: 12ನೇ ಆವೃತ್ತಿಯ ಪ್ಲೇ ಆಫ್ ಪಂದ್ಯಗಳ ವೇಳೆ 3 ತಂಡಗಳ ವನಿತಾ ಐಪಿಎಲ್ ಕೂಟ ನಡೆಸಲು ನಿರ್ಧರಿಸಲಾಗಿದೆ. ಪ್ಲೇ ಆಫ್ ಪಂದ್ಯಗಳ ತಾಣಗಳಾದ ಚೆನ್ನೈ, ಹೈದರಾಬಾದ್ ಮತ್ತು ವಿಶಾಖಪಟ್ಟಣದಲ್ಲೇ ವನಿತಾ ಪಂದ್ಯಗಳು ನಡೆಯಲಿವೆ.
ಪುರುಷರ ಪಂದ್ಯಗಳು ರಾತ್ರಿ 8 ಗಂಟೆಗೆ ನಡೆದರೆ, ಸಂಜೆ 4 ಗಂಟೆ ವನಿತೆಯರ ಪಂದ್ಯಗಳನ್ನಾಡಿಸಲು ಬಿಸಿಸಿಐ ತೀರ್ಮಾನಿಸಿದೆ. ರೌಂಡ್ ರಾಬಿನ್ ರೀತಿಯಲ್ಲಿ ಪಂದ್ಯಗಳು ನಡೆಯಲಿದ್ದು, ಅಗ್ರ 2 ತಂಡಗಳು ಫೈನಲ್ ಪ್ರವೇಶಿಸಲಿವೆ. ಫೈನಲ್ ಕೂಡ ಪುರುಷರ ಫೈನಲ್ಸ್ ದಿನವೇ (ಮೇ 12) ಸಂಜೆ 4 ಗಂಟೆಗೆ ನಡೆಯಲಿದೆ.
ವನಿತಾ ಬಿಗ್ ಬಾಶ್ ಲೀಗ್, ಕಿಯಾ ಸೂಪರ್ ಲೀಗ್‌ನಂತೆ ಪಂದ್ಯಾವಳಿ ನಡೆಸುವುದು ಬಿಸಿಸಿಐ ಯೋಜನೆಯಾಗಿದೆ. ಆದರೆ ಇದು ಯಾವಾಗ ಕಾರ್ಯರೂಪಕ್ಕೆ ಬಂದೀತು ಎಂಬುದು ಕ್ರಿಕೆಟ್ ಅಭಿಮಾನಿಗಳ ಕುತೂಹಲ.
6 ದೇಶಗಳ ಆಟಗಾರ್ತಿಯರು
ಕಳೆದ ವರ್ಷ ಮುಂಬಯಿನಲ್ಲಿ 2 ತಂಡಗಳ ಪ್ರದರ್ಶನ ಪಂದ್ಯ ಆಯೋಜಿಸಲಾಗಿತ್ತು. ಈ ವರ್ಷ 14 ಆಟಗಾರ್ತಿಯರನ್ನು ಒಳಗೊಂಡ 3 ತಂಡಗಳು ಈ ಪ್ರದರ್ಶನ ಕೂಟದಲ್ಲಿ ಸ್ಪರ್ಧಿಸಲಿವೆ. 6 ದೇಶಗಳ ಆಟಗಾರ್ತಿಯರು ಈ ಬಾರಿಯ ಕೂಟದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಕಳೆದ ವರ್ಷ ಕೂಟದಲ್ಲಿ ಭಾಗವಹಿಸಿದ ಅಗ್ರ ಆಟಗಾರ್ತಿಯರಾದ ಡೇನ್ ವಾನ್ ನೀಕರ್ಕ್, ಡಿಯಾಂಡ್ರಾ ಡಾಟಿನ್, ಮರಿಜಾನ್ ಕಾಪ್, ಚಾಮರಿ ಅತ್ತಪಟ್ಟು ಈ ಬಾರಿಯೂ ಪಾಲ್ಗೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.