ವನಿತಾ ವಿಶ್ವ ಬಾಕ್ಸಿಂಗ್: ಮಂಜುರಾಣಿಗೆ ರಜತ ಗೌರವ
Team Udayavani, Oct 14, 2019, 5:18 AM IST
ಹೊಸದಿಲ್ಲಿ: ಭಾರತದ ಯುವ ಬಾಕ್ಸರ್ ಮಂಜುರಾಣಿ ರಶ್ಯದಲ್ಲಿ ನಡೆದ ವನಿತಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರಜತ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಇದೇ ಮೊದಲ ಸಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಣಕ್ಕಿಳಿದ ಮಂಜುರಾಣಿ 48 ಕೆಜಿ ಫ್ಲೈವೇಟ್ ವಿಭಾಗದ ಫೈನಲ್‌ನಲ್ಲಿ ಆತಿಥೇಯ ದೇಶದ ಎಕಟೆರಿನಾ ಪಲ್ಸೇವಾ ವಿರುದ್ಧ 1-4 ಅಂಕಗಳ ಸೋಲನುಭವಿಸಿದರು.
ಶನಿವಾರವಷ್ಟೇ 20ರ ಹರೆಯಕ್ಕೆ ಕಾಲಿಟ್ಟ ಹರ್ಯಾಣದ ರೋಹrಕ್ ಜಿಲ್ಲೆಯ ರಿಠಾಲ್ ಪೋಗಟ್ ಗ್ರಾಮದವರಾದ ಮಂಜುರಾಣಿ, ಈ ಕೂಟದಲ್ಲಿ ಫೈನಲ್ ತಲುಪಿದ ಭಾರತದ ಏಕೈಕ ಸ್ಪರ್ಧಿ ಎಂಬ ಹೆಗ್ಗಳಿಕೆ ಹೊಂದಿದ್ದರು. ಇವರ ಮೇಲೆ ಚಿನ್ನದ ನಿರೀಕ್ಷೆ ಇತ್ತಾದರೂ ರಶ್ಯದ ಎದುರಾಳಿ ಹೆಚ್ಚು ಬಲಿಷ್ಠ ಹಾಗೂ ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಹೆಚ್ಚಿನ ಅನುಭವ ಹೊಂದಿದ್ದ ಕಾರಣ ನೆಚ್ಚಿನ ಸ್ಪರ್ಧಿಯಾಗಿ ಹೋರಾಟ ಆರಂಭಿಸಿದ್ದರು.
ಈ ಕೂಟದ ನೆಚ್ಚಿನ ಸ್ಪರ್ಧಿ ಆಗಿದ್ದ, 6 ಬಾರಿಯ ಚಾಂಪಿಯನ್ ಮೇರಿ ಕೋಮ್ (51 ಕೆಜಿ) ಸಹಿತ ಭಾರತದ ಉಳಿದೆಲ್ಲ ಬಾಕ್ಸರ್ ಸೆಮಿಫೈನಲ್‌ನಲ್ಲೇ ಎಡವಿದ್ದರು. ಜಮುನಾ ಬೋರೊ (54 ಕೆಜಿ), ಲವಿÉನಾ ಬೊರ್ಗೊಹೈನ್ (69 ಕೆಜಿ) ಕಂಚಿನ ಪದಕ ಜಯಿಸಿದ್ದರು.
ಹರ್ಯಾಣದಿಂದ ಪಂಜಾಬ್‌ಗ…
ಈ ವರ್ಷದ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ ವೇಳೆ ಹರ್ಯಾಣವನ್ನು ಪ್ರತಿನಿಧಿಸಲು ಸಾಧ್ಯವಾಗದ ಕಾರಣ ಮಂಜುರಾಣಿ ಪಂಜಾಬ್ ತಂಡವನ್ನು ಸೇರಿಕೊಂಡಿದ್ದರು. ಇಲ್ಲಿ ಪ್ರಶಸ್ತಿ ಗೆದ್ದ ಬಳಿಕ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗಿದ್ದರು. ಪ್ರತಿಷ್ಠಿತ “ಸ್ಟ್ರಾಂಜಾ ಮೆಮೋರಿಯಲ್ ಟೂರ್ನಿ’ಗೆ ಪದಾರ್ಪಣೆಗೈದು ಬೆಳ್ಳಿ ಪದಕ ಗೆದ್ದದ್ದು ಮಂಜುರಾಣಿಯ ಮಹತ್ವದ ಸಾಧನೆಯಾಗಿದೆ. ಬಿಎಸ್‌ಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ತಂದೆ 9 ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ಬಲಿಯಾದ ಬಳಿಕ ಮಂಜುರಾಣಿ ಬಾಕ್ಸಿಂಗ್ ಕ್ಷೇತ್ರದಲ್ಲಿ ಮೇಲೆದ್ದು ಬಂದ ಪರಿ ಅಮೋಘ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Washington: ಅಮೆರಿಕದ ಭರವಸೆಯಬೆಳಕು ಜೀವಂತವಿರಲಿದೆ: ಕಮಲಾ ಭಾವುಕ ಭಾಷಣ
MUDA CASE: ಸಿಎಂ, ಪತ್ನಿಗೆ ಇ.ಡಿ. ನೋಟಿಸ್?
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.