8.4 ಕೋಟಿ ರೂ. ಗಳಿಸಿದ ಚಕ್ರವರ್ತಿಯ ರೋಚಕ ಕಥೆ!
Team Udayavani, Dec 19, 2018, 11:39 AM IST
ಪ್ರತೀ ಬಾರಿ ಐಪಿಎಲ್ ಹರಾಜು ನಡೆದಾಗಲೂ ಅದ್ಭುತ, ಅಚ್ಚರಿಯ ಕಥನಗಳು ಬೆಳಕಿಗೆ ಬರುತ್ತವೆ. ಈ ಬಾರಿ ಎಲ್ಲರನ್ನೂ ವಿಸ್ಮಯಕ್ಕೆ ದೂಡಿರುವುದು ವರುಣ್ ಚಕ್ರವರ್ತಿ ಎಂಬ 27 ವರ್ಷದ ತಮಿಳುನಾಡು ಸ್ಪಿನ್ನರ್ ಕಥೆ. ಭಾರೀ ಪೈಪೋಟಿಯ ನಡುವೆ ಕಿಂಗ್ಸ್ ಪಂಜಾಬ್ ತಂಡ ಚಕ್ರವರ್ತಿಯನ್ನು 8.4 ಕೋಟಿ ರೂ. ಖರೀದಿಸಿದಾಗ, ಈತ ಯಾರು ಎಂಬ ಪ್ರಶ್ನೆ ದಿಢೀರ್ ಹುಟ್ಟಿಕೊಂಡಿತು. 7 ರೀತಿ ಸ್ಪಿನ್ ಮಾಡಬಲ್ಲ ಈ ಜಾದೂಗಾರನ ರೋಚಕ ಕಥೆ ಇಲ್ಲಿದೆ.
13ನೇ ವಯಸ್ಸಿಗೆ ಕ್ರಿಕೆಟ್ ಆಡಲು ಶುರು ಮಾಡಿದ ವರುಣ್ 17ನೇ ವಯಸ್ಸಿಗೆ ಬರುವಷ್ಟರಲ್ಲಿ ಕ್ರಿಕೆಟ್ ಸಾಕು ಅನ್ನುವ ಮಟ್ಟಕ್ಕೆ ತಲುಪಿದ್ದರು. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿದ್ದರೂ ತಂಡಗಳಿಗೆ ಪ್ರವೇಶ ಪಡೆಯಲು ಹರಸಾಹಸ ಪಡುತ್ತಿದ್ದರು. ಇದನ್ನೆಲ್ಲ ನೋಡಿ ರೋಸಿ ಹೋಗಿ ಕ್ರಿಕೆಟ್ ಬಿಟ್ಟು ಎಸ್‌ಆರ್‌ಎಂ ವಿವಿ ಸೇರಿ ಆರ್ಕಿಟೆಕ್ಚರ್‌ನಲ್ಲಿ 5 ವರ್ಷ ಓದಿ ಪದವಿ ಪಡೆದರು. ನಂತರ ಗೃಹನಿರ್ಮಾಣ ತಜ್ಞರಾಗಿ ವೃತ್ತಿ ಶುರು ಮಾಡಿದರು.
ಈ ಹಂತದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಲು ಶುರು ಮಾಡಿದರು. ಆಗ ಮತ್ತ ಕ್ರಿಕೆಟ್ ಆಸಕ್ತಿ ಶುರುವಾಗಿ ಕ್ರಾಮ್ ಬೆಸ್ಟ್ ಕ್ರಿಕೆಟ್ ಕ್ಲಬ್ ಸೇರಿಕೊಂಡರು. ಅಷ್ಟರಲ್ಲಿ ಅವರು ವಿಕೆಟ್ ಕೀಪಿಂಗ್ ಬಿಟ್ಟು, ವೇಗದ ಬೌಲರ್ ಆಗಿದ್ದರು! ಇಲ್ಲಿಯೂ ದುರದೃಷ್ಟ ಕಾಡಿತು. ಆಡಿದ 2ನೇ ಪಂದ್ಯದಲ್ಲಿಯೇ ಮಂಡಿ ನೋವು ಮಾಡಿಕೊಂಡರು. ಇದರಿಂದ
ತಲೆಬಿಸಿಯಾಗಿ ವೇಗದ ಬೌಲಿಂಗನ್ನೂ ಬಿಟ್ಟು ಸ್ಪಿನ್ ಬೌಲಿಂಗ್ ಶುರು ಮಾಡಿದರು. ಇಲ್ಲಿಂದ ಶುರುವಾಗಿದ್ದು ಅವರ ನಿಜ ಯಶೋಗಾಥೆ.
ಟಿಎನ್‌ಪಿಎಲ್ ಕಿರೀಟವನ್ನೇ ಗೆಲ್ಲಿಸಿದರು!: ಗಾಯ ವಾಸಿಯಾದ ನಂತರ ಜುಬಿಲಿ ಕ್ರಿಕೆಟ್ ಕ್ಲಬ್ ಆಟ ಆರಂಭಿಸಿದರು. ರೊಬಸ್ಟ್ ಚೆನ್ನೈ ಸೂಪರ್ ಲೀಗ್‌ನಲ್ಲಿ ಇವರ ಜಾದೂ ತಮಿಳುನಾಡು ಪ್ರೀಮಿಯರ್ ಲೀಗ್ ತಂಡಗಳನ್ನು ಸೆಳೆಯಿತು. ಮದುರೈ ಪ್ಯಾಂಥರ್ಸ್ ತಂಡ ಸೇರಿಕೊಂಡರು. ಟಿಎನ್‌ಪಿಎಲ್‌ನ ಮೊದಲೆರಡು ಆವೃತ್ತಿಗಳಲ್ಲಿ ಒಂದೂ ಪಂದ್ಯ ಗೆಲ್ಲದೇ ವಿಲವಿಲ ಒದ್ದಾಡುತ್ತಿದ್ದ ಮದುರೈ, 2018ರಲ್ಲಿ ನಡೆದ 3ನೇ
ಆವೃತ್ತಿಯ ಮೊದಲ ಪಂದ್ಯವನ್ನೇ ಸೋತು ಹೋಯಿತು. ಮುಂದಿನ ಪಂದ್ಯದಿಂದ ತಂಡದ ಹಣೆಬರಹವನ್ನೇ ಬದಲಿಸಿ, ಟ್ರೋಫಿಯನ್ನೇ ಗೆಲ್ಲಿಸಲು ನೆರವಾದ ಖ್ಯಾತಿ ವರುಣ್‌ರದ್ದು. ಒಟ್ಟು 40 ಓವರ್ ಬೌಲಿಂಗ್ ಮಾಡಿದ್ದ ಅವರು ಅದರಲ್ಲಿ 125 ಎಸೆತಗಳಿಗೆ ರನ್ ನೀಡಿರಲಿಲ್ಲ!
ವಿಜಯ್ ಹಜಾರೆ ದಿಗ್ವಿಜಯ: ಟಿಎನ್‌ಪಿಎಲ್ ಅವರಿಗೆ ದೇಶೀಯ ಏಕದಿನ ಕೂಟವಾದ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ವೇದಿಕೆ ನೀಡಿತು. ತಮಿಳುನಾಡು ಪರ ಆಡಿದ ಅವರು ಗುಂಪು ಹಂತದಲ್ಲಿ ಇಡೀ ದೇಶದಲ್ಲೇ ಗರಿಷ್ಠ 22 ವಿಕೆಟ್ ಪಡೆದರು. ಇದರಿಂದ ತಮಿಳುನಾಡು ರಣಜಿ ತಂಡಕ್ಕೆ ಪ್ರವೇಶ ಪಡೆದರು. ಅಲ್ಲಿಯೂ ಮಿಂಚಿದ್ದಾರೆ.
7 ರೀತಿ ಬೌಲಿಂಗ್ ಮಾಡಬಲ್ಲ ಮೋಡಿಗಾರ
ಒಬ್ಬ ಸ್ಪಿನ್ ಬೌಲರ್ ಯಾವ್ಯಾವ ರೀತಿಯ ಬೌಲಿಂಗ್ ವೈವಿಧ್ಯಗಳಿರಬಹುದು? ವರುಣ್ ಚಕ್ರವರ್ತಿ 7 ರೀತಿಯಾಗಿ ಚೆಂಡನ್ನು ಸ್ಪಿನ್ ಮಾಡಬಲ್ಲರು. ಆಫ್ಬ್ರೇಕ್, ಲೆಗ್‌ಬ್ರೇಕ್, ಗೂಗ್ಲಿ, ಕೇರಮ್ ಬಾಲ್,ಫ್ಲಿಪ್ಪರ್, ಟಾಪ್‌ಸ್ಪಿನ್, ಸ್ಲೆ„ಡರ್! ಈ ವೈವಿಧ್ಯಗಳ ಬ್ಯಾಟಿಂಗ್ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಕಂಗಾಲು ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.