Wimbledon -2024: ಸೆಮಿಫೈನಲ್ ತಲುಪಿದ ವೆಕಿಕ್, ಮೆಡ್ವೆಡೇವ್
Team Udayavani, Jul 9, 2024, 11:55 PM IST
ಲಂಡನ್: ಕ್ರೊವೇಶಿಯಾದ ಡೋನಾ ವೆಕಿಕ್ 2024ರ ವಿಂಬಲ್ಡನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಂಗಳವಾರದ ವನಿತಾ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಡೋನಾ ವೆಕಿಕ್ 5-7, 6-4, 6-1 ಅಂತರದಿಂದ ನ್ಯೂಜಿಲ್ಯಾಂಡ್‌ನ ಲುಲು ಸುನ್ ಆಟವನ್ನು ಕೊನೆಗೊಳಿಸಿದರು. ಇದು ವೆಕಿಕ್ ಅವರ ಮೊದಲ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ಎಂಬುದು ವಿಶೇಷ.
ಪುರುಷರ ವಿಭಾಗದಲ್ಲಿ ಡ್ಯಾನಿಲ್ ಮೆಡ್ವೆಡೇವ್ 6-7 (7-9), 6-4, 7-6 (7-4), 2-6, 6-3ರಿಂದ ನಂ.1 ಜಾನಿಕ್ ಸಿನ್ನರ್ ಅವರನ್ನು ಮಣಿಸಿದರು.
ಜೊಕೋ, ಫ್ರಿಟ್ಜ್, ಡಿ ಮಿನೌರ್ ಗೆಲುವು
ಕಳೆದ ತಡ ರಾತ್ರಿಯ ಪಂದ್ಯಗಳಲ್ಲಿ 7 ಬಾರಿಯ ಚಾಂಪಿಯನ್ ನೊವಾಕ್ ಜೊಕೋವಿಕ್, ಟೇಲರ್ ಫ್ರಿಟ್ಜ್ ಮತ್ತು ಅಲೆಕ್ಸ್ ಡಿ ಮಿನೌರ್ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಈ ವಿಂಬಲ್ಡನ್‌ನಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಜೊಕೋವಿಕ್ ಡೆನ್ಮಾರ್ಕ್‌ನ 21 ವರ್ಷದ ಹೋಲ್ಜರ್ ರುನೆ ಅವರನ್ನು 6-3, 6-4, 6-2ರಿಂದ ಮಣಿಸಿದರು. ಬುಧವಾರದ ಕ್ವಾರ್ಟರ್ ಫೈನಲ್‌ನಲ್ಲಿ ಜೊಕೋ ಎದುರಾಳಿಯಾಗಿ ಕಣಕ್ಕಿಳಿಯುವವರು ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್. ಇನ್ನೊಂದು ಪಂದ್ಯದಲ್ಲಿ ಡಿ ಮಿನೌರ್ ಫ್ರಾನ್ಸ್‌ನ ಆರ್ಥರ್ ಫಿಲ್ಸ್ ವಿರುದ್ಧ 6-2, 6-4, 4-6, 6-3 ಅಂತರದ ಜಯ ಸಾಧಿಸಿದರು.
ಅಮೆರಿಕದ ಟೇಲರ್ ಫ್ರಿಟ್ಜ್ 5 ಸೆಟ್‌ಗಳ ಮ್ಯಾರಥಾನ್ ಹೋರಾಟದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್‌ಗೆ 4-6, 6-7 (4-7), 6-4, 7-6 (7-3), 6-3 ಅಂತರದ ಸೋಲುಣಿಸುವಲ್ಲಿ ಯಶಸ್ವಿಯಾದರು. ಇಲ್ಲಿ ಫ್ರಿಟ್ಜ್ 2 ಸೆಟ್‌ಗಳ ಹಿನ್ನಡೆಯ ಬಳಿಕ ತಿರುಗಿ ಬಿದ್ದ ರೀತಿ ಅಮೋಘವಾಗಿತ್ತು. ಟೇಲರ್ ಫ್ರಿಟ್ಜ್ ಎದುರಾಳಿ ಇಟಲಿಯ ಲೊರೆಂಜೊ ಮುಸೆಟ್ಟಿ.
ವನಿತಾ ವಿಭಾಗದಲ್ಲಿ ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಮತ್ತು ಜೆಕ್ ಗಣರಾಜ್ಯದ ಬಾಬೊìರಾ ಕ್ರೆಜಿಕೋವಾ ಕ್ವಾರ್ಟರ್ ಫೈನಲ್ ತಲುಪಿದರು. ಒಸ್ಟಾಪೆಂಕೊ 6-2, 6-3 ಅಂತರದಿಂದ ಕಜಾಕ್‌ಸ್ಥಾನದ ಯುಲಿಯಾ ಪುಟಿನ್ಸೇವಾ ಅವರನ್ನು ಮಣಿಸಿದರು. ಕ್ರೆಜಿಕೋವಾ ಅಮೆರಿಕದ ಡೇನಿಯೇಲಾ ಕಾಲಿನ್ಸ್ ವಿರುದ್ಧ 7-5, 6-3 ಅಂತರದ ಜಯ ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.