ಪಂಜಾಬ್‌ಗ ವೆಂಕಿ ಬೌಲಿಂಗ್ ಕೋಚ್
Team Udayavani, Mar 5, 2018, 6:05 AM IST
ಮೊಹಾಲಿ: ಕಿರಿಯರ ಆಯ್ಕೆ ಸಮಿತಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಭಾರತ ಮಾಜಿ ವೇಗಿ, ಕರ್ನಾಟಕದ ವೆಂಕಟೇಶ ಪ್ರಸಾದ್ ಬಾಲಿವುಡ್ ನಟಿ ಪ್ರೀತಿ ಜಿಂಟಾ ಮಾಲಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಪಂಜಾಬ್ ಫ್ರಾಂಚೈಸಿ ಈ ವಿಷಯವನ್ನು ತನ್ನ ಪ್ರಕಟನೆಯಲ್ಲಿ ಖಚಿತಪಡಿಸಿದೆ. ಇದೇ ವೇಳೆ ಆಸ್ಟ್ರೇಲಿಯದ ಅನುಭವಿ ಕ್ರಿಕೆಟಿಗ ಬ್ರಾಡ್ ಹಾಜ್ ಅವರನ್ನು ಮುಂದಿನ 3 ಆವೃತ್ತಿಗಳಿಗೆ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಾಗಿದೆ.
ವೆಂಕಟೇಶ ಪ್ರಸಾದ್ 33 ಟೆಸ್ಟ್ ಪಂದ್ಯಗಳನ್ನಾಡಿದ್ದು, 96 ವಿಕೆಟ್ ಕಬಳಿಸಿದ್ದಾರೆ. 161 ಏಕದಿನ ಪಂದ್ಯಗಳಿಂದ 196 ವಿಕೆಟ್ ಉರುಳಿಸಿದ್ದಾರೆ. ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಬ್ರಾಡ್ ಹಾಜ್ 6 ಟೆಸ್ಟ್‌ಗಳಿಂದ 502 ರನ್, 25 ಏಕದಿನ ಪಂದ್ಯಗಳಿಂದ 575 ರನ್ ಹಾಗೂ 15 ಟಿ20 ಪಂದ್ಯಗಳಿಂದ 183 ರನ್ ಬಾರಿಸಿದ್ದಾರೆ.
ಅನುಭವಿಗಳಿಬ್ಬರ ಸೇವೆ ತಂಡಕ್ಕೆ ಲಭ್ಯವಾಗುವುದರೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಜತೆಗೆ ವಿರೇಂದ್ರ ಸೆಹವಾಗ್ ಅವರ ಮಾರ್ಗದರ್ಶನ ತಂಡಕ್ಕೆ ಲಭ್ಯವಿರುವುದರಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ಹೊಸ ಹುರುಪಿನೊಂದಿಗೆ ನೂತನ ಐಪಿಎಲ್‌ಗೆ ಅಣಿಯಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.