![India US](https://www.udayavani.com/wp-content/uploads/2025/02/India-US-1-415x276.jpg)
![India US](https://www.udayavani.com/wp-content/uploads/2025/02/India-US-1-415x276.jpg)
Team Udayavani, Jul 19, 2017, 10:03 AM IST
ನಾಟಿಂಗಂ: ವೆರ್ನನ್ ಫಿಲಾಂಡರ್ ದಕ್ಷಿಣ ಆಫ್ರಿಕಾ ತಂಡದ “ನೂತನ ಕ್ಯಾಲಿಸ್’ ಆಗುವತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂದು ನಾಯಕ ಫಾಡು ಪ್ಲೆಸಿಸ್ ಹೇಳಿದ್ದಾರೆ. ಆತಿಥೇಯ ಇಂಗ್ಲೆಂಡ್ ವಿರುದ್ಧ ನಾಟಿಂಗಂ ಟೆಸ್ಟ್‌ನಲ್ಲಿ ಸಾಧಿಸಿದ 340 ರನ್ನುಗಳ ಅಮೋಘ ಗೆಲುವಿನಲ್ಲಿ ಫಿಲಾಂಡರ್ ವಹಿಸಿದ ಆಲ್‌ರೌಂಡರ್ ಪಾತ್ರವನ್ನು ಅವರು ಪ್ರಶಂಸಿಸುತ್ತಿದ್ದರು.
ಈ ಪಂದ್ಯದಲ್ಲಿ ಫಿಲಾಂಡರ್ 7ನೇ ಕ್ರಮಾಂಕದಲ್ಲಿ ಆಡಲಿಳಿದು ಕ್ರಮವಾಗಿ 54 ಹಾಗೂ 42 ರನ್ ಬಾರಿಸುವುದರ ಜತೆಗೆ 5 ವಿಕೆಟ್ ಕೂಡ ಉರುಳಿಸಿದ್ದರು. ಜಾಕ್ ಕ್ಯಾಲಿಸ್ ಅವರ ನಿವೃತ್ತಿಯ ಬಳಿಕ ದಕ್ಷಿಣ ಆಫ್ರಿಕಕ್ಕೆ ಸಮರ್ಥ ಆಲ್ ರೌಂಡರ್‌ನ ಕೊರತೆ ಕಾಡುತ್ತಿತ್ತು. ಈ ಸ್ಥಾನ ಫಿಲಾಂಡರ್ ತುಂಬಬಲ್ಲ ರೆಂಬುದು ಡು ಪ್ಲೆಸಿಸ್ ಆಶಯ.
“ಫಿಲಾಂಡರ್ ಬ್ಯಾಟಿಂಗ್ ಕಂಡಾಗ ಅವರು ನಮ್ಮ ತಂಡದ ನೂತನ ಜಾಕ್ ಕ್ಯಾಲಿಸ್ ಆಗುವ ಎಲ್ಲ ಲಕ್ಷಣ ತೋರಿಬರುತ್ತದೆ. ಅವ ರೋರ್ವ ಅದ್ಭುತ ಕ್ರಿಕೆಟಿಗ. ಪಿಚ್‌ನ ಸಂಪೂರ್ಣ ನೆರವು ಪಡೆಯುವ ಜಾಣ್ಮೆ ಫಿಲಾಂಡರ್ ಅವರಲ್ಲಿದೆ’ ಎಂದು ಮರಳಿ ತಂಡದ ನೇತೃತ್ವ ವಹಿಸಿದ ಡು ಪ್ಲೆಸಿಸ್ ಹೇಳಿದರು. ಮೊದಲ ಮಗುವಿನ ಜನನದ ಹಿನ್ನೆಲೆಯಲ್ಲಿ ಲಾರ್ಡ್ಸ್‌ನ ಪ್ರಥಮ ಟೆಸ್ಟ್ ಪಂದ್ಯದಿಂದ ಡು ಪ್ಲೆಸಿಸ್ ಹೊರಗುಳಿದಿದ್ದರು. ಈ ಪಂದ್ಯವನ್ನು ದಕ್ಷಿಣ ಆಫ್ರಿಕಾ 211 ರನ್ನುಗಳಿಂದ ಸೋತಿತ್ತು. 3ನೇ ಟೆಸ್ಟ್ ಜು. 27ರಿಂದ ಓವಲ್‌ನಲ್ಲಿ ಆರಂಭವಾಗಲಿದೆ.
“ಇಬ್ಬರು ಆಲ್‌ರೌಂಡರ್‌ಗಳಿಗಾಗಿ ನಾವು ಓರ್ವ ಬ್ಯಾಟ್ಸ್ ಮನ್‌ನನ್ನು ಹೊರಗಿಟ್ಟು ತಂಡವನ್ನು ಸಂಯೋಜಿಸಿದ್ದೆವು. ಇದು ಯಶಸ್ವಿ ಯಾಯಿತು…’ ಎಂಬುದಾಗಿ ಡು ಪ್ಲೆಸಿಸ್ ಹೇಳಿದರು. ತಂಡದಲ್ಲಿದ್ದ ಮತ್ತೂಬ್ಬ ಆಲ್‌ರೌಂಡರ್ ಕ್ರಿಸ್ ಮಾರಿಸ್.
ಎಕ್ಸ್‌ಟ್ರಾ ಇನ್ನಿಂಗ್ಸ್
* ಇಂಗ್ಲೆಂಡ್ ಈ ಪಂದ್ಯದಲ್ಲಿ ಒಟ್ಟು 96.1 ಓವರ್‌ಗಳನ್ನಷ್ಟೇ ಎದುರಿಸಿತು. ಅದು ತವರಿನ ಟೆಸ್ಟ್ ಪಂದ್ಯದಲ್ಲಿ ನೂರಕ್ಕೂ ಕಡಿಮೆ ಓವರ್ ಎದುರಿಸಿದ್ದು ಇದು 7ನೇ ಸಲವಾದರೆ, ದ್ವಿತೀಯ ಮಹಾಯುದ್ಧದ ಬಳಿಕ ಕೇವಲ 5ನೇ ಸಲ.
* ದಕ್ಷಿಣ ಆಫ್ರಿಕಾ ರನ್ ಅಂತರದಲ್ಲಿ 4ನೇ ಅತೀ ದೊಡ್ಡ ಗೆಲುವು ಸಾಧಿಸಿತು (340 ರನ್). ಇದು ತವರಿನಾಚೆ ಆಫ್ರಿಕಾ ದಾಖಲಿಸಿದ 2ನೇ ದೊಡ್ಡ ಗೆಲುವು. 1994ರ ಲಾರ್ಡ್ಸ್ ಟೆಸ್ಟ್‌ನಲ್ಲಿ 356 ರನ್ ಜಯಭೇರಿ ಮೊಳಗಿಸಿದ್ದು ದಾಖಲೆ.
* ಟ್ರೆಂಟ್‌ಬ್ರಿಜ್‌ನಲ್ಲಿ ಇಂಗ್ಲೆಂಡ್ ಸತತ 7 ಟೆಸ್ಟ್‌ಗಳ ಬಳಿಕ ಮೊದಲ ಸೋಲುಂಡಿತು. ಅದು ಇಲ್ಲಿ ಕೊನೆಯ ಸೋಲನುಭವಿಸಿದ್ದು ಭಾರತದ ವಿರುದ್ಧ, 2007ರಲ್ಲಿ. ಅನಂತರ 6 ಟೆಸ್ಟ್ ಜಯಿಸಿದ ಇಂಗ್ಲೆಂಡ್, ಒಂದನ್ನು ಡ್ರಾ ಮಾಡಿಕೊಂಡಿತ್ತು.
* ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪುನರ್ ಪ್ರವೇಶ ಪಡೆದ ಬಳಿಕ ಟ್ರೆಂಟ್‌ಬ್ರಿಜ್‌ನಲ್ಲಿ ಆಡಲಾದ 3 ಟೆಸ್ಟ್‌ಗಳಲ್ಲಿ ದಕ್ಷಿಣ ಆಫ್ರಿಕಾ ಮೊದಲ ಜಯ ಸಾಧಿಸಿತು. 1998 ಹಾಗೂ 2003ರಲ್ಲಿ ಸೋಲನುಭವಿಸಿತ್ತು.
* ಇಂಗ್ಲೆಂಡ್ 11 ರನ್ ಅಂತರದಲ್ಲಿ ಕೊನೆಯ 5 ವಿಕೆಟ್ ಕಳೆದುಕೊಂಡಿತು. 5ಕ್ಕೆ 122 ರನ್ ಮಾಡಿದ್ದ ಆಂಗ್ಲ ಪಡೆ ಐದೇ ಓವರ್‌ಗಳಲ್ಲಿ 133ಕ್ಕೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ತನ್ನ ಕೊನೆಯ 4 ವಿಕೆಟ್‌ಗಳನ್ನು 6 ರನ್ ಅಂತರದಲ್ಲಿ ಕಳೆದುಕೊಂಡಿತ್ತು.
* ವೆರ್ನನ್ ಫಿಲಾಂಡರ್ 6ನೇ ಸಲ, 2013ರ ಬಳಿಕ ಮೊದಲ ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.