ಮಗನಿಗಾಗಿ ವಿಂಬಲ್ಡನ್, ಆಸ್ಟ್ರೇಲಿಯನ್ ಟೆನಿಸ್ ಬಿಟ್ಟ ಅಜರೆಂಕಾ
Team Udayavani, Jan 17, 2018, 11:48 AM IST
ಕ್ಯಾಲಿಫೋರ್ನಿಯಾ: ಟೆನಿಸ್ ಪ್ರಿಯರೆಲ್ಲ ಬೆಲಾರಸ್‌ನ ಈ ಟೆನಿಸ್ ಸುಂದರಿ ವಿಕ್ಟೋರಿಯಾ ಅಜರೆಂಕಾ ಹೆಸರು ಕೇಳಿರುತ್ತಾರೆ. ಮಾಜಿ ವಿಶ್ವ ನಂ.1 ಸಿಂಗಲ್ಸ್ ಆಟಗಾರ್ತಿ. ಆಕೆ ಏಳೆಂಟು ತಿಂಗಳಿಂದ ಟೆನಿಸ್ ಅಂಕಣಕ್ಕೆ ಇಳಿದಿಲ್ಲ. ವಿಂಬಲ್ಡನ್, ಆಸ್ಟ್ರೇಲಿಯನ್ ಓಪನ್‌ನಂತಹ ಗ್ರ್ಯಾನ್‌ಸ್ಲಾಮ್‌ಗಳನ್ನು ತಪ್ಪಿಸಿಕೊಂಡಿದ್ದಾರೆ.
ಇದಕ್ಕೆ ಕಾರಣವೇನು ಗೊತ್ತಾ? ತನ್ನ 1 ವರ್ಷದ ಪುತ್ರನನ್ನು ತನ್ನದೇ ಸುಪರ್ದಿಯಲ್ಲಿ ಉಳಿಸಿಕೊಳ್ಳಬೇಕೆಂಬ ತಾಯ್ತನದ ತುಡಿತ! ವಿಕ್ಟೋರಿಯಾ ಮತ್ತು ಬಿಲ್ಲಿ ಮೆಕ್‌ಕೀಗ್ ಸಂಬಂಧದ ಪರಿಣಾಮ ಹುಟ್ಟಿದ್ದು ಲಿಯೊ ಎಂಬ ಗಂಡುಮಗು. ಈ ಮಗುವಿನ ವಾರಸುದಾರರು ಯಾರು ಎಂಬ ಪ್ರಕರಣ ಅಮೆರಿಕದ ಲಾಸ್ ಏಂಜಲೀಸ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಪ್ರಕರಣ ಇತ್ಯರ್ಥವಾಗುವರೆಗೆ ಕ್ಯಾಲಿ ಫೋರ್ನಿಯಾ ಬಿಟ್ಟು ಹೋಗುವಂತಿಲ್ಲ ಎಂದು ನ್ಯಾಯಾಲಯ ಹೇಳಿದ್ದರಿಂದ ವಿಕ್ಟೋರಿಯಾ ಇಕ್ಕಟ್ಟಿಗೆ ಸಿಕ್ಕಿದ್ದರು.
ಮಗನಿಗಾಗಿ ಟೆನಿಸ್ ಕೂಟಗಳನ್ನೇ ತ್ಯಜಿಸಿದರು. ಇದೀಗ ನ್ಯಾಯಾಲಯ ವಿಕ್ಟೋರಿಯಾ ಪರ ತೀರ್ಪು ನೀಡಿದೆ. ಆದ್ದರಿಂದ ಆಕೆ ನಿರಾಳರಾಗಿದ್ದಾರೆ. ವಾಸ್ತವವಾಗಿ ವಿಕ್ಟೋರಿಯಾ ಬೆಲಾರಸ್ ದೇಶದವರು. ಆ ದೇಶದ ನ್ಯಾಯಾಲಯ, ಮಗುವನ್ನು ವಿಕ್ಟೋರಿಯಾ ನೋಡಿ ಕೊಳ್ಳಬೇಕು ಎಂದೇ ತೀರ್ಪು ನೀಡಿತ್ತು. ಆದರೆ ವಿಕ್ಟೋರಿಯಾ ಅಮೆರಿಕದಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದರಿಂದ ಮೆಕ್‌ಕೀಗ್ ಲಾಸ್ ಏಂಜಲೀಸ್‌ನಲ್ಲಿ ಪ್ರಕರಣ ಹೂಡಿದ್ದರು. ಈಗ ನ್ಯಾಯಾಲಯ, ಪ್ರಸ್ತುತ ಪ್ರಕರಣ ಅಮೆರಿಕದ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಬೆಲಾರಸ್‌ನಲ್ಲೇ ಇತ್ಯರ್ಥ ಮಾಡಿಕೊಳ್ಳಿ ಎಂದಿದೆ. ಅದು ವಿಕ್ಟೋರಿಯಾ ಸಂತೋಷಕ್ಕೆ ಕಾರಣ. ಹಾಗೆಂದೇ ಕೂಡಲೇ ಎಲ್ಲವೂ ವಿಕ್ಟೋರಿಯಾ ಪರವಾಗಿದೆ ಎಂಬ ಸ್ಥಿತಿಯೇನಿಲ್ಲ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮೆಕ್ ಕೀಗ್‌ಗೆ 3 ವಾರಗಳ ಅವಕಾಶ ನೀಡಲಾಗಿದೆ. ಅಲ್ಲಿ ಏನೂ ಇಕ್ಕಟ್ಟು ಸಂಭವಿಸಲಿಕ್ಕಿಲ್ಲ ಎನ್ನುವುದು ಅಜರೆಂಕಾ ವಕೀಲರ ಭರವಸೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
ಕೊಹ್ಲಿ-ರೋಹಿತ್ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
BPL;ಅಂತಿಮ ಓವರಿನಲ್ಲಿ 30 ರನ್ ಸಿಡಿಸಿದ ನುರುಲ್
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.