ದೇವಧರ್‌ ಟ್ರೋಫಿ ಏಕದಿನ: ವಿದ್ವತ್‌ ದಾಳಿಗೆ ಉತ್ತರ ತತ್ತರ


Team Udayavani, Jul 24, 2023, 11:15 PM IST

1-asasas

ಪುದುಚೇರಿ: ದೇವಧರ್‌ ಟ್ರೋಫಿ ಏಕದಿನ ಪಂದ್ಯಾವಳಿನ್ನು ದಕ್ಷಿಣ ವಲಯ ಅಮೋಘ ಗೆಲುವಿ ನೊಂದಿಗೆ ಆರಂಭಿಸಿದೆ. ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಮಾಯಾಂಕ್‌ ಅಗರ್ವಾಲ್‌ ಪಡೆ ಡಿಎಲ್‌ಎಸ್‌ ನಿಯಮದಂತೆ 214 ರನ್ನುಗಳ ಜಯಭೇರಿ ಮೊಳಗಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ವಲಯ 8 ವಿಕೆಟಿಗೆ 303 ರನ್‌ ಪೇರಿಸಿ ಸವಾಲೊಡ್ಡಿತು. ಬಳಿಕ ಕರ್ನಾಟಕದ ಪ್ರತಿಭಾನ್ವಿತ ಬೌಲರ್‌ ವಿದ್ವತ್‌ ಕಾವೇರಪ್ಪ ದಾಳಿಗೆ ತತ್ತರಿಸಿದ ಉತ್ತರ ವಲಯ 23 ಓವರ್‌ಗಳಲ್ಲಿ 60 ರನ್ನಿಗೆ ಕುಸಿಯಿತು. ವಿದ್ವತ್‌ ಕೇವಲ 15 ರನ್‌ ನೀಡಿ 5 ವಿಕೆಟ್‌ ಹಾರಿಸಿದರು. ಕರ್ನಾಟಕದ ಮತ್ತೋರ್ವ ಬೌಲರ್‌ ವಿಜಯ್‌ಕುಮಾರ್‌ ವೈಶಾಖ್‌ 2 ವಿಕೆಟ್‌ ಕಿತ್ತರು. ಮಳೆಯಿಂದಾಗಿ ಉತ್ತರ ವಲಯಕ್ಕೆ 40 ಓವರ್‌ಗಳಲ್ಲಿ 275 ರನ್‌ ಗಳಿಸುವ ಗುರಿ ಎದುರಾಗಿತ್ತು.

ದಕ್ಷಿಣ ವಲಯದ ಬೃಹತ್‌ ಮೊತ್ತಕ್ಕೆ ಕಾರಣರಾದವರು ಆರಂಭಿಕರಾದ ರೋಹನ್‌ ಕುನ್ನುಮ್ಮಾಳ್‌ (70), ಮಾಯಾಂಕ್‌ ಅಗರ್ವಾಲ್‌ (64) ಮತ್ತು ಎನ್‌. ಜಗದೀಶನ್‌ (72). ಉತ್ತರ ವಲಯ ಪರ 18 ರನ್‌ ಮಾಡಿದ ಮನ್‌ದೀಪ್‌ ಸಿಂಗ್‌ ಅವರದೇ ಹೆಚ್ಚಿನ ಗಳಿಕೆ.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ವಲಯ-8 ವಿಕೆಟಿಗೆ 303 (ಜಗದೀಶನ್‌ 72, ಕುನ್ನುಮ್ಮಾಳ್‌ 70, ಅಗರ್ವಾಲ್‌ 64, ರಿಷಿ ಧವನ್‌ 30ಕ್ಕೆ 2, ಮಾರ್ಕಂಡೆ 53ಕ್ಕೆ 2). ಉತ್ತರ ವಲಯ-23 ಓವರ್‌ಗಳಲ್ಲಿ 60 (ಮನ್‌ದೀಪ್‌ ಔಟಾಗದೆ 18, ವಿದ್ವತ್‌ 17ಕ್ಕೆ 5, ವೈಶಾಖ್‌ 8ಕ್ಕೆ 2).

ಪಶ್ಚಿಮ ವಲಯಕ್ಕೆ ಜಯ
ಪ್ರಿಯಾಂಕ್‌ ಪಾಂಚಾಲ್‌ ನಾಯಕತ್ವದ ಪಶ್ಚಿಮ ವಲಯ ತಂಡ ಈಶಾನ್ಯ ವಲಯವನ್ನು 9 ವಿಕೆಟ್‌ಗಳಿಂದ ಸುಲಭ ದಲ್ಲಿ ಮಣಿಸಿತು. ಅನನುಭವಿಗಳ ತಂಡವಾದ ಈಶಾನ್ಯ ವಲಯ 47 ಓವರ್‌ಗಳಲ್ಲಿ 207ಕ್ಕೆ ಆಲೌಟಾದರೆ, ಪಶ್ಚಿಮ ವಲಯ 25.1 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 208 ರನ್‌ ಬಾರಿಸಿತು. ಆಗ ಪ್ರಿಯಾಂಕ್‌ ಪಾಂಚಾಲ್‌ 99 ರನ್‌ ಮಾಡಿ ಅಜೇಯರಾಗಿದ್ದರು. ಮತ್ತೋರ್ವ ಆರಂಭಕಾರ ಹಾರ್ವಿಕ್‌ ದೇಸಾಯಿ ಅವರಿಗೂ ಶತಕ ಒಲಿಯಲಿಲ್ಲ. ಅವರು 85 ರನ್‌ ಮಾಡಿ ಔಟಾದರು (71 ಎಸೆತ, 14 ಬೌಂಡರಿ). ಇವರಿಂದ ಮೊದಲ ವಿಕೆಟಿಗೆ 21.1 ಓವರ್‌ಗಳಿಂದ 167 ರನ್‌ ಒಟ್ಟುಗೂಡಿತು.

ಈಶಾನ್ಯ ವಲಯ ಪರ ಇಮ್ಲಿವಾಟಿ ಲೆಮು¤ರ್‌ ಸರ್ವಾಧಿಕ 38 ರನ್‌ ಮಾಡಿದರು. ಪಶ್ಚಿಮ ವಲಯದ ಬೌಲಿಂಗ್‌ ಸರದಿಯಲ್ಲಿ ಮಿಂಚಿದವರೆಂದರೆ ಅರ್ಜಾನ್‌ ನಗÌಸ್ವಾಲ (31ಕ್ಕೆ 3), ಶಮ್ಸ್‌ ಮುಲಾನಿ ಮತ್ತು ಶಿವಂ ದುಬೆ (ತಲಾ 2 ವಿಕೆಟ್‌).

ಪೂರ್ವ ವಲಯ ವಿಜಯ
ಮಧ್ಯ ವಲಯ ವಿರುದ್ಧದ ಮತ್ತೂಂದು ಪಂದ್ಯದಲ್ಲಿ ಪೂರ್ವ ವಲಯ 6 ವಿಕೆಟ್‌ಗಳ ಜಯ ಸಾಧಿಸಿತು. ಬ್ಯಾಟಿಂಗ್‌ ಕುಸಿತ ಅನುಭವಿಸಿದ ಮಧ್ಯ ವಲಯ ಸರಿ ಯಾಗಿ 50 ಓವರ್‌ಗಳಲ್ಲಿ 207ಕ್ಕೆ ಆಲೌಟ್‌ ಆಯಿತು. ಪೂರ್ವ ವಲಯ 46.1 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 208 ರನ್‌ ಮಾಡಿತು.

ಚೇಸಿಂಗ್‌ ವೇಳೆ ಆರಂಭಿಕರಾದ ಉತ್ಕರ್ಷ್‌ ಸಿಂಗ್‌ 89 ಹಾಗೂ ಅಭಿಮನ್ಯು ಈಶ್ವರನ್‌ 38 ರನ್‌ ಹೊಡೆದರು. ಮಧ್ಯ ವಲಯದ ಸರದಿಯಲ್ಲಿ ಮಿಂಚಿದವರೆಂದರೆ ರಿಂಕು ಸಿಂಗ್‌ (54) ಮತ್ತು ಆರ್ಯನ್‌ ಜುಯಲ್‌ (39). ಎಂ. ಮುರಾಸಿಂಗ್‌, ಆಕಾಶ್‌ ದೀಪ್‌ ಮತ್ತು ಶಾಬಾಜ್‌ ಅಹ್ಮದ್‌ ತಲಾ 3 ವಿಕೆಟ್‌ ಉರುಳಿಸಿದರು.

ಟಾಪ್ ನ್ಯೂಸ್

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Blind Chess World C’ships: ವಿಶ್ವ ಅಂಧರ ಚೆಸ್‌: ಪ್ರಶಸ್ತಿ ಸನಿಹಕ್ಕೆ ಲುಬೋವ್‌

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

13

Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ

ISSF Junior World Championship: ಕಿರಿಯರ ಶೂಟಿಂಗ್‌; ಭಾರತಕ್ಕೆ ಸಮಗ್ರ ಪ್ರಶಸ್ತಿ

ISSF Junior World Championship: ಕಿರಿಯರ ಶೂಟಿಂಗ್‌; ಭಾರತಕ್ಕೆ ಸಮಗ್ರ ಪ್ರಶಸ್ತಿ

ಗ್ವಾಲಿಯರ್‌ ಮಸೀದಿಗೆ ಭೇಟಿ ನೀಡದೆ ಹೋಟೆಲ್‌ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ

ಗ್ವಾಲಿಯರ್‌ ಮಸೀದಿಗೆ ಭೇಟಿ ನೀಡದೆ ಹೋಟೆಲ್‌ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Vaishnodevi-Temple

Famous Goddess Temple: ಗುಹಾಲಯ ಶ್ರೀಮಾತಾ ವೈಷ್ಣೋದೇವಿ ದೇಗುಲ, ಜಮ್ಮು-ಕಾಶ್ಮೀರ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

16

Ullal: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.