ವಿಜಯ್ ಹಜಾರೆ: ಫೈನಲ್‌ಗೆ ಮುಂಬಯಿ
Team Udayavani, Oct 18, 2018, 9:38 AM IST
ಬೆಂಗಳೂರು: ಮುಂಬಯಿ ತಂಡ “ವಿಜಯ್ ಹಜಾರೆ ಟ್ರೋಫಿ’ ಏಕದಿನ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದೆ. ಬುಧವಾರದ ಮಳೆ ಪೀಡಿತ ಪಂದ್ಯದಲ್ಲಿ ಅದು ಹೈದರಾಬಾದ್ ವಿರುದ್ಧ ವಿಜೆಡಿ ನಿಯಮದಂತೆ 60 ರನ್ನುಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ 50 ಓವರ್‌ಗಳಲ್ಲಿ 8 ವಿಕೆಟಿಗೆ 246 ರನ್ ಗಳಿಸಿದರೆ, ಮುಂಬಯಿ 25 ಓವರ್‌ಗಳಲ್ಲಿ 2 ವಿಕೆಟಿಗೆ 155 ರನ್ ಮಾಡಿದ ವೇಳೆ ಮಳೆ ಸುರಿಯಿತು. ಪಂದ್ಯ ಇಲ್ಲಿಗೇ ನಿಂತಿತು. ಈ ಅವಧಿಯಲ್ಲಿ ಮುಂಬಯಿ 96 ರನ್ ಮಾಡಿದರೆ ಸಾಕಿತ್ತು.
ಮುಂಬಯಿ ಪರ ಪೃಥ್ವಿ ಶಾ ಮಿಂಚಿನ ಆಟವಾಡಿ 44 ಎಸೆತಗಳಿಂದ 61 ರನ್ ಬಾರಿಸಿದರು (8 ಬೌಂಡರಿ, 2 ಸಿಕ್ಸರ್). ನಾಯಕ ಶ್ರೇಯಸ್ ಅಯ್ಯರ್ 55 ರನ್ ಮಾಡಿ ಔಟಾಗದೆ ಉಳಿದರು (53 ಎಸೆತ, 5 ಬೌಂಡರಿ, 2 ಸಿಕ್ಸರ್). ರೋಹಿತ್ ಶರ್ಮ ಮತ್ತು ಅಜಿಂಕ್ಯ ರಹಾನೆ ತಲಾ 17 ರನ್ ಮಾಡಿದರು.
ರೋಹಿತ್ ರಾಯುಡು ಶತಕ ವ್ಯರ್ಥ
ಹೈದರಾಬಾದ್ ಬ್ಯಾಟಿಂಗ್ ಸರದಿಯನ್ನು ವನ್‌ಡೌನ್ ಬ್ಯಾಟ್ಸ್‌ಮನ್ ಕೆ. ರೋಹಿತ್ ರಾಯುಡು ಆಕರ್ಷಕ ಶತಕದ ಮೂಲಕ ಏಕಾಂಗಿಯಾಗಿ ಆಧರಿಸಿ ನಿಂತರು. ರಾಯುಡು ಗಳಿಕೆ ಅಜೇಯ 121 ರನ್. 132 ರನ್ನುಗಳ ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ, 4 ಸಿಕ್ಸರ್ ಸೇರಿತ್ತು. ಹನುಮ ವಿಹಾರಿ ಬದಲು ಅಂಬಾಟಿ ರಾಯುಡು ಹೈದರಾಬಾದ್ ತಂಡ ವನ್ನು ಮುನ್ನಡೆಸಿದ್ದರು. 3 ವಿಕೆಟ್ ಕಿತ್ತ ತುಷಾರ್ ದೇಶಪಾಂಡೆ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.
ಸಂಕ್ಷಿಪ್ತ ಸ್ಕೋರ್: ಹೈದರಾಬಾದ್-50 ಓವರ್‌ಗಳಲ್ಲಿ 8 ವಿಕೆಟಿಗೆ 246 (ರೋಹಿತ್ ರಾಯುಡು ಔಟಾಗದೆ 121, ಬಿ.ಪಿ. ಸಂದೀಪ್ 29, ದೇಶಪಾಂಡೆ 55ಕ್ಕೆ 3, ಡಯಾಸ್ 43ಕ್ಕೆ 2). ಮುಂಬಯಿ-25 ಓವರ್‌ಗಳಲ್ಲಿ 2 ವಿಕೆಟಿಗೆ 155 (ಶಾ 61, ಅಯ್ಯರ್ ಔಟಾಗದೆ 55, ಹಸನ್ 23ಕ್ಕೆ 2). ಪಂದ್ಯಶ್ರೇಷ್ಠ: ತುಷಾರ್ ದೇಶಪಾಂಡೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.