ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ : ಪಡಿಕ್ಕಲ್ ಸತತ ಶತಕ; ಕೇರಳವನ್ನು ಕಾಡಿದ ಕರ್ನಾಟಕ
Team Udayavani, Feb 26, 2021, 11:34 PM IST
ಬೆಂಗಳೂರು: “ಟಾಪ್ ಫಾರ್ಮ್’ನಲ್ಲಿರುವ ಆರಂಭಕಾರ ದೇವದತ್ತ ಪಡಿಕ್ಕಲ್ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ 2ನೇ ಶತಕ ಬಾರಿಸಿದ್ದಾರೆ. ಕರ್ನಾಟಕ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಶುಕ್ರವಾರದ ಮುಖಾಮುಖೀಯಲ್ಲಿ ಆರ್. ಸಮರ್ಥ್ ಪಡೆ ಕೇರಳವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸಿತು.
ಕರ್ನಾಟಕದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡರೂ, ಮುಂದಿನ ಓವರಿನಲ್ಲೇ ಸಂಜು ಸ್ಯಾಮ್ಸನ್ (3) ಔಟಾದರೂ ಕೇರಳ 8 ವಿಕೆಟಿಗೆ 277 ರನ್ನುಗಳ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಜವಾಬಿತ್ತ ಕರ್ನಾಟಕ 45.3 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 279 ರನ್ ಬಾರಿಸಿ “ಸಿ’ ವಿಭಾಗದ ಅಗ್ರಸ್ಥಾನಿಯಾಯಿತು.
ಪಡಿಕ್ಕಲ್ ಪ್ರಚಂಡ ಬ್ಯಾಟಿಂಗ್ :
ಪ್ರಚಂಡ ಬ್ಯಾಟಿಂಗ್ ಮುಂದುವರಿಸಿದ ಪಡಿಕ್ಕಲ್ 126 ರನ್ ಬಾರಿಸಿ ಅಜೇಯರಾಗಿ ಉಳಿದರು (138 ಎಸೆತ, 13 ಬೌಂಡರಿ, 2 ಸಿಕ್ಸರ್). ನಾಯಕ ಆರ್. ಸಮರ್ಥ್ 51 ಎಸೆತ ಎದುರಿಸಿ 62 ರನ್ ಮಾಡಿದರು. ಇವರಿಂದ ಆರಂಭಿಕ ವಿಕೆಟಿಗೆ 99 ರನ್ ಒಟ್ಟುಗೂಡಿತು. ವನ್‌ಡೌನ್ ಬ್ಯಾಟ್ಸ್‌ಮನ್ ಕೆ. ಸಿದ್ಧಾರ್ಥ್ ಔಟಾಗದೆ 86 ರನ್ ಹೊಡೆದರು (84 ಎಸೆತ, 5 ಬೌಂಡರಿ, 3 ಸಿಕ್ಸರ್). ಮುರಿಯದ ದ್ವಿತೀಯ ವಿಕೆಟಿಗೆ 180 ರನ್ ಹರಿದು ಬಂತು.
ಪಡಿಕ್ಕಲ್ ಒಡಿಶಾ ವಿರುದ್ಧದ ಕಳೆದ ಪಂದ್ಯದಲ್ಲಿ 152 ರನ್ನುಗಳ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಕೂಟದ 4 ಪಂದ್ಯಗಳಿಂದ ಅವರ ರನ್ ಗಳಿಕೆ 427ಕ್ಕೆ ಏರಿದೆ.
ಕೇರಳ ಸರದಿಯಲ್ಲಿ ವತ್ಸಲ್ ಗೋವಿಂದ್ 95, ನಾಯಕ ಸಚಿನ್ ಬೇಬಿ 54, ಅಜರುದ್ದೀನ್ ಔಟಾಗದೆ 59 ರನ್ ಮಾಡಿದರು. ಉತ್ತಪ್ಪ ಅವರನ್ನು ಮೊದಲ ಎಸೆತದಲ್ಲೇ ಕೆಡವಿದ ಮಿಥುನ್ ಸಾಧನೆ 52ಕ್ಕೆ 5 ವಿಕೆಟ್. ಪ್ರಸಿದ್ಧ್ ಕೃಷ್ಣ 2 ವಿಕೆಟ್ ಕಿತ್ತರು.
ರವಿವಾರದ ಕೊನೆಯ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ರೈಲ್ವೇಸ್ ವಿರುದ್ಧ ಆಡಲಿದೆ.
ಸಂಕ್ಷಿಪ್ತ ಸ್ಕೋರ್: ಕೇರಳ-8 ವಿಕೆಟಿಗೆ 277 (ವತ್ಸಲ್ ಗೋವಿಂದ್ 95, ಅಜರುದ್ದೀನ್ ಔಟಾಗದೆ 59, ಸಚಿನ್ ಬೇಬಿ 54, ಮಿಥುನ್ 52ಕ್ಕೆ 5, ಪ್ರಸಿದ್ಧ್ ಕೃಷ್ಣ 65ಕ್ಕೆ 2). ಕರ್ನಾಟಕ-45.3 ಓವರ್‌ಗಳಲ್ಲಿ ಒಂದು ವಿಕೆಟಿಗೆ 279 (ಪಡಿಕ್ಕಲ್ ಔಟಾಗದೆ 126, ಸಿದ್ಧಾರ್ಥ್ ಔಟಾಗದೆ 86, ಸಮರ್ಥ್ 62, ಜಲಜ್ ಸಕ್ಸೇನಾ 34ಕ್ಕೆ 1).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.