ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಕರ್ನಾಟಕಕ್ಕೆ ಶರಣಾದ ಅಸ್ಸಾಮ್‌


Team Udayavani, Feb 9, 2018, 6:50 AM IST

Vijay-Mayank-Agarwal.jpg

ಬೆಂಗಳೂರು: ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಕರ್ನಾಟಕ ಸತತ 2ನೇ ಗೆಲುವು ದಾಖಲಿಸಿದೆ. ಗುರುವಾರ ಬೆಂಗಳೂರಿನಲ್ಲಿ ನಡೆದ ಮುಖಾಮುಖೀಯಲ್ಲಿ ಕರುಣ್‌ ನಾಯರ್‌ ಬಳಗ 111 ರನ್ನುಗಳಿಂದ ಅಸ್ಸಾಮ್‌ ತಂಡವನ್ನು ಉರುಳಿಸಿತು. ಮೊದಲ ಪಂದ್ಯದಲ್ಲಿ ರಾಜ್ಯ ತಂಡ ಬರೋಡಕ್ಕೆ ಸೋಲುಣಿಸಿತ್ತು.

ಕರ್ನಾಟಕದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಭವ, ಮಧ್ಯಮ ವೇಗಿ ಪ್ರಸಿದ್ಧ್ ಕೃಷ್ಣ ಅವರ 6 ವಿಕೆಟ್‌ ಬೇಟೆ… ಕರ್ನಾಟಕದ ಜಯದಲ್ಲಿ ಎದ್ದು ಕಂಡ ಅಂಶಗಳು. “ಜಸ್ಟ್‌ ಕ್ರಿಕೆಟ್‌ ಅಕಾಡೆಮಿ ಗ್ರೌಂಡ್‌’ನಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕರ್ನಾಟಕ 6 ವಿಕೆಟ್‌ ನಷ್ಟಕ್ಕೆ 303 ರನ್‌ ಪೇರಿಸಿ ಸವಾಲೊಡ್ಡಿತು. ಜವಾಬು ನೀಡಿದ ಅಸ್ಸಾಮ್‌ 47.2 ಓವರ್‌ಗಳಲ್ಲಿ 192 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಪ್ರಸಿದ್ಧ್ ಕೃಷ್ಣ 33 ರನ್‌ ನೀಡಿ 6 ವಿಕೆಟ್‌ ಉಡಾಯಿಸಿದರು.

ಕರ್ನಾಟಕದ ಬೃಹತ್‌ ಮೊತ್ತದಲ್ಲಿ ಮತ್ತೆ ಮಾಯಾಂಕ್‌ ಅಗರ್ವಾಲ್‌ ಸಿಂಹಪಾಲು ಸಲ್ಲಿಸಿದರು. ಬರೋಡ ವಿರುದ್ಧ ಶತಕ ಬಾರಿಸಿ ಮೆರೆದಿದ್ದ ಅಗರ್ವಾಲ್‌ ಇಲ್ಲಿ 84 ರನ್‌ ಹೊಡೆದರು (87 ಎಸೆತ, 10 ಬೌಂಡರಿ, 2 ಸಿಕ್ಸರ್‌). ಕರ್ನಾಟಕ ಸರದಿಯಲ್ಲಿ ಅಗರ್ವಾಲ್‌ ಅವರದೇ ಸರ್ವಾಧಿಕ ಗಳಿಕೆ. ನಾಯಕ ಕರುಣ್‌ ನಾಯರ್‌ 58 ರನ್‌ (57 ಎಸೆತ, 6 ಬೌಂಡರಿ, 1 ಸಿಕ್ಸರ್‌), ಆರ್‌. ಸಮರ್ಥ್ ಔಟಾಗದೆ 70 ರನ್‌ (61 ಎಸೆತ, 4 ಬೌಂಡರಿ, 1 ಸಿಕ್ಸರ್‌), ಪವನ್‌ ದೇಶಪಾಂಡೆ 43 ರನ್‌ ಹೊಡೆದರು. ಆರಂಭಕಾರ ಕೆ.ಎಲ್‌. ರಾಹುಲ್‌ 22 ರನ್‌ ಮಾಡಿ ಔಟಾದರು.

ಅಗರ್ವಾಲ್‌-ನಾಯರ್‌ ಜೋಡಿಯಿಂದ 2ನೇ ವಿಕೆಟಿಗೆ ಭರ್ತಿ 100 ರನ್‌ ಒಟ್ಟುಗೂಡಿತು. ಸಮರ್ಥ್-ದೇಶಪಾಂಡೆ 4ನೇ ವಿಕೆಟ್‌ ಜತೆಯಾಟದಲ್ಲಿ 88 ರನ್‌ ಪೇರಿಸಿದರು. ಅಸ್ಸಾಮ್‌ ಪರ ಅಬು ನೆಚಿಮ್‌ ಮತ್ತು ಮೃಣ್‌ಮೋಯ್‌ ದತ್ತ ತಲಾ 2 ವಿಕೆಟ್‌ ಹಾರಿಸಿದರು.

ಚೇಸಿಂಗ್‌ ವೇಳೆ ಅಸ್ಸಾಮ್‌ ಸರದಿಯಲ್ಲಿ ಮಿಂಚಿದ್ದು ಶಿಬಶಂಕರ್‌ ರಾಯ್‌ ಮಾತ್ರ. ರಾಯ್‌ 93 ಎಸೆತಗಳಿಂದ 64 ರನ್‌ ಹೊಡೆದರು (6 ಬೌಂಡರಿ, 1 ಸಿಕ್ಸರ್‌). ಪ್ರಸಿದ್ಧ್ ಕೃಷ್ಣ ಹೊರತುಪಡಿಸಿ ಮಿಂಚಿದ ಕರ್ನಾಟಕ ಬೌಲರ್‌ಗಳೆಂದರೆ ಟಿ. ಪ್ರದೀಪ್‌ ಮತ್ತು ಶ್ರೇಯಸ್‌ ಗೋಪಾಲ್‌. ಇಬ್ಬರೂ ತಲಾ 2 ವಿಕೆಟ್‌ ಉರುಳಿಸಿದರು.

8 ಅಂಕಗಳೊಂದಿಗೆ “ಎ’ ವಿಭಾಗದ ಅಗ್ರಸ್ಥಾನದಲ್ಲಿರುವ ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಶನಿವಾರ ಹರಿಯಾಣ ವಿರುದ್ಧ ಆಡಲಿದೆ.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-6 ವಿಕೆಟಿಗೆ 303 (ಅಗರ್ವಾಲ್‌ 84, ಸಮರ್ಥ್ ಔಟಾಗದೆ 70, ನಾಯರ್‌ 58, ದೇಶಪಾಂಡೆ 43, ಅಹ್ಮದ್‌ 51ಕ್ಕೆ 2, ದತ್ತ 67ಕ್ಕೆ 2). ಅಸ್ಸಾಮ್‌-47.2 ಓವರ್‌ಗಳಲ್ಲಿ 192 (ರಾಯ್‌ 64, ಅಹ್ಮದ್‌ 43, ಪರಾಗ್‌ 22, ಪ್ರಸಿದ್ಧ್ ಕೃಷ್ಣ 33ಕ್ಕೆ 6, ಗೋಪಾಲ್‌ 35ಕ್ಕೆ 2, ಪ್ರದೀಪ್‌ 43ಕ್ಕೆ 2).

ಟಾಪ್ ನ್ಯೂಸ್

leopard

leopard: ಮೂಲ್ಕಿ ಕೊಯ್ನಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

042174

WFI: ಕುಸ್ತಿಪಟುಗಳಿಗೆ ಡಬ್ಲ್ಯುಎಫ್ಐ ತಡೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

leopard

leopard: ಮೂಲ್ಕಿ ಕೊಯ್ನಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.