ODI; ವಿಜಯ್ ಹಜಾರೆ ಟ್ರೋಫಿ ಇಂದಿನಿಂದ:ಕರ್ನಾಟಕಕ್ಕೆ ಮುಂಬಯಿ ಸವಾಲು
Team Udayavani, Dec 21, 2024, 6:25 AM IST
ಅಹ್ಮದಾಬಾದ್: ಶನಿವಾರದಿಂದ ವಿಜಯ್ ಹಜಾರೆ ಟ್ರೋಫಿ ಲಿಸ್ಟ್ ಎ ಏಕದಿನ ಪಂದ್ಯಾವಳಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ಬಲಿಷ್ಠ ಮುಂಬಯಿ ಸವಾಲನ್ನು ಎದುರಿಸಲಿದೆ. ಇದು ಗ್ರೂಪ್ “ಸಿ’ ಪಂದ್ಯವಾಗಿದ್ದು, ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ.
ಮುಂಬಯಿ ತಂಡ ಈ ವರ್ಷದ ರಣಜಿ, ಇರಾನಿ ಹಾಗೂ ಇತ್ತೀಚೆಗಷ್ಟೇ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ತಂಡ. ನಾಯಕ ಶ್ರೇಯಸ್ ಅಯ್ಯರ್ ಅದೃಷ್ಟವನ್ನೇ ಹೊತ್ತುಕೊಂಡಂತಿದೆ. ಇದಕ್ಕೆ ಇನ್ನೊಂದು ಸಾಕ್ಷಿಯೆಂದರೆ ಇವರ ಸಾರಥ್ಯದಲ್ಲೇ ಕೆಕೆಆರ್ 2024ನೇ ಸಾಲಿನ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು. ಈ ಎಲ್ಲ ಗೆಲುವುಗಳಿಂದ ಶ್ರೇಯಸ್ ಪಡೆ ಭಾರೀ ಹುರುಪಿನಲ್ಲಿದೆ.
ಆದರೆ ಮಾಯಾಂಕ್ ಅಗರ್ವಾಲ್ ನಾಯ ಕತ್ವದ ಕರ್ನಾಟಕ ತಂಡ ಈ ಸೀಸನ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿಲ್ಲ. ಸಯ್ಯದ್ ಮುಷ್ತಾಕ್ ಅಲಿ ಕೂಟದ ಗ್ರೂಪ್ ಹಂತದಲ್ಲೇ ಹೊರಬಿದ್ದು ನಿರಾಸೆಗೀಡಾಗಿತ್ತು. ಇದಕ್ಕೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ.
ಮನೀಷ್ ಪಾಂಡೆ ತಂಡದಲ್ಲಿಲ್ಲ!
ಕರ್ನಾಟಕ ಪ್ರಮುಖ ಆಟಗಾರ ಮನೀಷ್ ಪಾಂಡೆ ಅವರನ್ನು ಹೊರಗಿರಿಸಿದ್ದೊಂದು ಅಚ್ಚರಿ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಪಾಂಡೆ ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ. ಅತ್ತ ಮುಂಬಯಿ ತಂಡದಲ್ಲಿ ಪೃಥ್ವಿ ಶಾ ಅವರಿಗೆ ಸ್ಥಾನ ಲಭಿಸಿಲ್ಲ. ಫಾರ್ಮ್ ಕೊರತೆ ಮತ್ತು ಅಶಿಸ್ತೇ ಇದಕ್ಕೆ ಕಾರಣ.
ತಾರಾ ಆಟಗಾರರು ಕಣಕ್ಕೆ
ಈ ಪಂದ್ಯಾವಳಿಯಲ್ಲಿ ಮೊಹಮ್ಮದ್ ಶಮಿ, ರಿಂಕು ಸಿಂಗ್, ಸಾಯಿ ಕಿಶೋರ್ ಮತ್ತಿತರ ತಾರಾ ಆಟಗಾರರು ಕಣಕ್ಕಿಳಿಯಲಿದ್ದಾರೆ. ಬಂಗಾಲ ತಂಡದಲ್ಲಿ ಮೊಹಮ್ಮದ್ ಶಮಿ ಹೆಸರಿದೆಯಾದರೂ ಆರಂಭಿಕ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದೆ.
ತಂಡಗಳು
ಕರ್ನಾಟಕ: ಮಾಯಾಂಕ್ ಅಗರ್ವಾಲ್ (ನಾಯಕ), ಶ್ರೇಯಸ್ ಗೋಪಾಲ್, ಎಸ್. ನಿಕಿನ್ ಜೋಸ್, ಕೆ.ವಿ. ಅನೀಶ್, ಆರ್. ಸ್ಮರಣ್, ಕೆ.ಎಲ್. ಶ್ರೀಜಿತ್, ಅಭಿನವ್ ಮನೋಹರ್, ಹಾರ್ದಿಕ್ ರಾಜ್, ವಿಜಯ್‌ಕುಮಾರ್ ವೈಶಾಖ್, ವಾಸುಕಿ ಕೌಶಿಕ್, ವಿದ್ಯಾಧರ ಪಾಟೀಲ್, ಕಿಶನ್ ಬೆಡಾರೆ, ಅಭಿಲಾಶ್ ಶೆಟ್ಟಿ, ಮನೋಜ್ ಭಾಂಡಗೆ, ಪ್ರವೀಣ್ ದುಬೆ, ಲವ್‌ನೀತ್ ಸಿಸೋಡಿಯಾ.
ಮುಂಬಯಿ: ಶ್ರೇಯಸ್ ಅಯ್ಯರ್ (ನಾಯಕ), ಆಯುಷ್ ಮ್ಹಾತ್ರೆ, ಅಂಗ್‌ಕೃಶ್ ರಘುವಂಶಿ, ಜಾಯ್ ಬಿಸ್ಟಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಸೂರ್‍ಯಾಂಶ್ ಶೆಡೆY, ಸಿದ್ದೇಶ್ ಲಾಡ್, ಹಾರ್ದಿಕ್ ತಮೋರೆ, ಪ್ರಸಾದ್ ಪವಾರ್, ಅಥರ್ವ ಅಂಕೋಲೆಕರ್, ತನುಷ್ ಕೋಟ್ಯಾನ್, ಶಾದೂìಲ್ ಠಾಕೂರ್, ರಾಯ್‌ಸ್ಟನ್ ಡಾಯಸ್, ಜುನೇದ್ ಖಾನ್, ಹರ್ಷ ತನ್ನಾ, ವಿನಾಯಕ್ ಭೋಯಿರ್.
ಕರ್ನಾಟಕದ ಪಂದ್ಯಗಳು
ದಿನಾಂಕ ಎದುರಾಳಿ
ಡಿ. 21 ಮುಂಬಯಿ
ಡಿ. 23 ಪುದುಚೇರಿ
ಡಿ. 26 ಪಂಜಾಬ್
ಡಿ. 28 ಅರುಣಾಚಲ ಪ್ರದೇಶ
ಡಿ. 31 ಹೈದರಾಬಾದ್
ಜ. 3 ಸೌರಾಷ್ಟ್ರ
ಜ. 5 ನಾಗಾಲ್ಯಾಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.