ವಿಜಯ್ ಹಜಾರೆ ಟ್ರೋಫಿ: ಇಂದು ಕರ್ನಾಟಕ-ಮಹಾರಾಷ್ಟ್ರ ಸೆಮಿಫೈನಲ್
Team Udayavani, Feb 24, 2018, 7:00 AM IST
ಹೊಸದಿಲ್ಲಿ: “ವಿಜಯ್ ಹಜಾರೆ ಟ್ರೋಫಿ’ ಏಕದಿನ ಕ್ರಿಕೆಟ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಶನಿವಾರ ಇಲ್ಲಿನ ಫಿರೋಜ್ ಷಾ ಕೋಟ್ಲಾ ಅಂಗಳದಲ್ಲಿ ನಡೆಯಲಿದ್ದು, ಕರ್ನಾಟಕ-ಮಹಾರಾಷ್ಟ್ರ ತಂಡಗಳು ಮುಖಾಮುಖಿಯಾಗಲಿವೆ. ಪ್ರಚಂಡ ಫಾರ್ಮ್ ಹಾಗೂ ಸ್ಥಿರ ಪ್ರದರ್ಶನ ನೀಡುತ್ತಲೇ ಬಂದಿರುವ ಕರ್ನಾಟಕ ನೆಚ್ಚಿನ ತಂಡವಾದರೂ ಮಹಾ ರಾಷ್ಟ್ರದಿಂದ ತೀವ್ರ ಪ್ರತಿರೋಧ ಎದು ರಾಗುವ ಎಲ್ಲ ಸಾಧ್ಯತೆಗಳೂ ಇವೆ.
ಎರಡೂ ತಂಡಗಳು ಲೀಗ್ ಹಂತದಲ್ಲಿ ಸಮಬಲದ ಸಾಧನೆ ಯೊಂದಿಗೆ ನಾಕೌಟ್ ಪ್ರವೇಶಿಸಿದ್ದವು. ಕರ್ನಾಟಕ “ಎ’ ವಿಭಾಗದಲ್ಲಿ 18 ಅಂಕದೊಂದಿಗೆ ದ್ವಿತೀಯ ಸ್ಥಾನಿ ಯಾದರೆ, ಮಹಾರಾಷ್ಟ್ರ “ಬಿ’ ವಿಭಾಗದಲ್ಲಿ ಇಷ್ಟೇ ಅಂಕ ಗಳಿಸಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡ ಹೈದರಾಬಾದನ್ನು ಉರುಳಿಸಿದರೆ, ಮಹಾರಾಷ್ಟ್ರ ಮುಂಬಯಿಗೆ ನೀರು ಕುಡಿಸಿತು.
ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕರ್ನಾಟಕದ ಬ್ಯಾಟಿಂಗ್ ಹೆಚ್ಚು ಬಲಿಷ್ಠ. ತ್ರಿವಳಿ ಶತಕವೀರ ಮಾಯಾಂಕ್ ಅಗರ್ವಾಲ್, ರವಿಕುಮಾರ್ ಸಮರ್ಥ್, ಪವನ್ ದೇಶಪಾಂಡೆ, ಕರುಣ್ ನಾಯರ್ ಬ್ಯಾಟಿಂಗ್ ಸರದಿಯ ಆಧಾರಸ್ತಂಭವಾಗಿದ್ದಾರೆ.
ಬೌಲಿಂಗ್‌ನಲ್ಲಿ ವಿನಯ್ ಕುಮಾರ್ ಇಲ್ಲದಿರುವುದೊಂದು ಕೊರತೆ. ಆದರೆ ಪ್ರಸಿದ್ಧ್ ಕೃಷ್ಣ, ಟಿ. ಪ್ರದೀಪ್, ರೋನಿತ್ ಮೋರೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಿ ದ್ದಾರೆ. ಆಲ್‌ರೌಂಡರ್‌ಗಳಾದ ಕೆ. ಗೌತಮ್, ಶ್ರೇಯಸ್ ಗೋಪಾಲ್ ಮತ್ತು ಸ್ಟುವರ್ಟ್ ಬಿನ್ನಿ ಅವರಿಂದ ಕರ್ನಾಟಕ ಹೆಚ್ಚು ಸಶಕ್ತವಾಗಿದೆ.
ಮಹಾರಾಷ್ಟ್ರವನ್ನು ರಾಹುಲ್ ತ್ರಿಪಾಠಿ ಮುನ್ನಡೆಸುತ್ತಿದ್ದಾರೆ. ಶ್ರೀಕಾಂತ್ ಮುಂಢೆ, ಅಂಕಿತ್ ಭವೆ° ಅವರ ಬ್ಯಾಟಿಂಗನ್ನು ಹೆಚ್ಚು ಅವಲಂಬಿಸಿದೆ. ಪ್ರದೀಪ್ ದಾಢೆ, ಪ್ರಶಾಂತ್ ಕೋರೆ ಪ್ರಮುಖ ಬೌಲರ್‌ಗಳಾಗಿದ್ದಾರೆ. ಮುಂಬಯಿಯನ್ನು ಮಣಿಸುವಲ್ಲಿ ಈ ಐವರ ಪಾಲು ಮಹತ್ವದ್ದಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.