Vijay Hazare Trophy; ರಾಜಸ್ಥಾನ, ಹರಿಯಾಣ ಕ್ವಾರ್ಟರ್ ಫೈನಲ್‌ಗೆ
Team Udayavani, Jan 9, 2025, 11:54 PM IST
ವಡೋದರ: ವಿಜಯ್ ಹಜಾರೆ ಟ್ರೋಫಿ ಲಿಸ್ಟ್ “ಎ’ ಏಕದಿನ ಪಂದ್ಯಾವಳಿಯಲ್ಲಿ ರಾಜಸ್ಥಾನ ಮತ್ತು ಹರಿಯಾಣ ತಂಡಗಳು ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿವೆ. ಗುರುವಾರ ವಡೋದರದಲ್ಲಿ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ತಂಡ ತಮಿಳುನಾಡು ವಿರುದ್ಧ ರೋಚಕ 19 ರನ್‌ಗಳಿಂದ ಗೆದ್ದರೆ, ಬೆಂಗಾಲ ವಿರುದ್ಧ ಹರಿಯಾಣ ತಂಡ 72 ರನ್‌ಗಳ ಜಯ ಸಾಧಿಸಿತು.
ರಾಜಸ್ಥಾನ ಪರ ಅಭಿಜಿತ್ ಶತಕ
ಎರಡನೇ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ ಪರ ಆರಂಭಿಕ ಬ್ಯಾಟರ್ ಅಭಿಜಿತ್ ತೋಮರ್ (111) ಶತಕ ಬಾರಿಸಿ ಭರ್ಜರಿ ಆರಂಭ ನೀಡಿದರು. ಮಹಿಪಾಲ್ ಲೋಮ್ರರ್ ಅವರ 60 ರನ್ ಕಾಣಿಕೆಯೊಂದಿಗೆ ತಂಡ 47.3 ಓವರ್‌ಗಳಲ್ಲಿ 267 ರನ್ ಬಾರಿಸಿ ಆಲೌಟ್ ಆಯಿತು. ಸ್ಪಿನ್ನರ್ ವರುಣ್ ಚಕ್ರವರ್ತಿ 52ಕ್ಕೆ 5 ವಿಕೆಟ್ ಉರುಳಿಸಿ ಗಮನ ಸೆಳೆದರು.
ಇದಕ್ಕೆ ಪ್ರತ್ಯುತ್ತರವಾಗಿ ತಮಿಳುನಾಡು, ಎನ್. ಜಗದೀಶನ್ 65 ರನ್‌ನೊಂದಿಗೆ 47.1 ಓವರ್‌ಗೆ 248 ಬಾರಿಸಿ ಪತನ ಕಂಡಿತು.
ಬೆಂಗಾಲಕ್ಕೆ ಸೋಲು
ಮೊದಲ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯ ದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹರಿ ಯಾಣ, ಪಾರ್ಥ ವತ್ಸ್ 62, ನಿಶಾಂತ್ ಸಿಂಧು ಗಣನೀಯ 64 ರನ್‌ನೊಂದಿಗೆ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 298 ರನ್ ಬಾರಿಸಿತು. ಗುರಿ ಬೆನ್ನತ್ತಿದ ಬೆಂಗಾಲ, ಅಭಿಷೇಕ್ ಪೊರೆಲ್ 57, ಸುದೀಪ್ ಕುಮಾರ್ ಮತ್ತು ಅನುಸ್ತೂಪ್ ಮಜುಮಾªರ್ ತಲಾ 36 ರನ್‌ನೊಂದಿಗೆ 43.1 ಓವರ್‌ಗೆ 226 ರನ್ ಬಾರಿಸಿ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಒಂದೇ ಓವರ್‌ನಲ್ಲಿ 6 ಬೌಂಡರಿ ಸಿಡಿಸಿದ ಜಗದೀಶನ್
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ತಮಿಳುನಾಡಿನ ಆರಂಭಿಕ ಬ್ಯಾಟರ್ ಎನ್.ಜಗದೀಶನ್ ಒಂದೇ ಓವರ್‌ನಲ್ಲಿ ಸತತ 6 ಬೌಂಡರಿ ಸಿಡಿಸಿ ಗಮನ ಸೆಳೆದರು. ತಮಿಳುನಾಡು ಇನ್ನಿಂಗ್ಸ್‌ನ 2ನೇ ಓವರ್‌ನಲ್ಲಿ ವೇಗಿ ಅಮನ್ ಸಿಂಗ್ ಶೇಖಾವತ್ ಅವರ ಎಲ್ಲ ಎಸೆತಗಳನ್ನೂ ಜಗದೀಶನ್ ಬೌಂಡರಿ ಗೆರೆ ದಾಟಿಸಿದ್ದು ವಿಶೇಷವೆನಿಸಿತು.
ಕ್ವಾರ್ಟರ್ ಕದನಕ್ಕೆ 8 ತಂಡಗಳು ನಿಗದಿ
ಪಂದ್ಯಾವಳಿಯ ನಾಲ್ಕು ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಕಣಕ್ಕಿಳಿಯುವ 8 ತಂಡಗಳು ಗುರುವಾರ ನಿಗದಿಯಾಯಿತು. ಜ.11ರ ಶನಿವಾರ ವಡೋದರದಲ್ಲಿ ನಡೆಯುವ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಮತ್ತು ಪಂಜಾಬ್ ಮುಖಾಮುಖೀಯಾದರೆ, ಅದೇ ದಿನದ ನಾಲ್ಕನೇ ಕ್ವಾರ್ಟರ್ ಫೈನಲ್‌ನಲ್ಲಿ ಬರೋಡಾಕ್ಕೆ ಕರ್ನಾಟಕ ಸವಾಲೆಸೆಯಲಿದೆ. ಜ.12ರ ರವಿವಾರ ನಡೆಯುವ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಗುಜರಾತ್-ಹರಿಯಾಣ ಸೆಣಸಾಡಿದರೆ, ಎರಡನೇ ಕ್ವಾರ್ಟರ್ ಫೈನಲ್‌ನಲ್ಲಿ ವಿದರ್ಭ-ರಾಜಸ್ಥಾನ ಅದೃಷ್ಟ ಪರೀಕ್ಷೆಗೆ ಒಳಗಾಗಲಿವೆ. ಜ. 15, 16ಕ್ಕೆ ಸೆಮಿಫೈನಲ್ಸ್ ನಡೆದರೆ, ಜ. 18ಕ್ಕೆ ಫೈನಲ್ ಕದನ ಏರ್ಪಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.