ವಿಜಯ್ ಹಜಾರೆ: ಕರ್ನಾಟಕಕ್ಕೆ ಯುಪಿ ಎದುರಾಳಿ
Team Udayavani, Feb 20, 2021, 7:30 AM IST
ಬೆಂಗಳೂರು: ದೇಶಿ ಮಟ್ಟದ ಅತ್ಯುನ್ನತ ಏಕದಿನ ಕ್ರಿಕೆಟ್ ಟೂರ್ನಿಯಾದ “ವಿಜಯ್ ಹಜಾರೆ ಟ್ರೋಫಿ’-2021ರ ಆವೃತ್ತಿ ಶನಿವಾರದಿಂದ ಆರಂಭವಾಗಲಿದೆ. ಎಲೈಟ್ ಗ್ರೂಪ್ “ಸಿ’ಯಲ್ಲಿ ಸ್ಥಾನ ಪಡೆದಿರುವ ಹಾಲಿ ಚಾಂಪಿಯನ್ ಕರ್ನಾಟಕ ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಸೆಣಸಲಿದೆ. ಶನಿವಾರ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಈ ಪಂದ್ಯ ನಡೆಯಲಿದೆ.
ಟೂರ್ನಿಯಲ್ಲಿ 50 ಓವರ್‌ಗಳ 103 ಪಂದ್ಯಗಳು ನಡೆಯಲಿದ್ದು, ಒಟ್ಟು 38 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಸೂರತ್, ಇಂದೋರ್, ಬೆಂಗಳೂರು, ಜೈಪುರ, ಕೋಲ್ಕತಾ ಮತ್ತು ಚೆನ್ನೈ ಈ ಪಂದ್ಯದ ತಾಣಗಳು. ಸಯ್ಯದ್ ಮುಷ್ತಾಕ್ ಅಲಿ ಟಿ20 ಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬಿಸಿಸಿಐಗೆ, ಈ ಟೂರ್ನಿಯೂ ಯಶಸ್ಸು ಕಾಣುವ ವಿಶ್ವಾಸವಿದೆ.
ಸ್ಟಾರ್ ಆಟಗಾರರು ಕಣಕ್ಕೆ :
ಭಾರತ ತಂಡದ ಸ್ಟಾರ್ ಆಟ ಗಾರರಾದ ಹನುಮ ವಿಹಾರಿ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಮೊದಲಾದ ಆಟಗಾರರು ಇಲ್ಲಿ ಕಣಕ್ಕಿಳಿಯಲ್ಲಿದ್ದಾರೆ. ಮುಂಬರುವ ಏಕದಿನ ಸರಣಿ ಹಿನ್ನೆಲೆಯಲ್ಲಿ ಇವರಿಗೆಲ್ಲ ಇದು ಮಹತ್ವದ ಪಂದ್ಯಾವಳಿ. ಜತೆಗೆ ಈ ಬಾರಿಯ ಐಪಿಎಲ್‌ಗೆ ಬೃಹತ್ ಮೊತ್ತಕ್ಕೆ ಹರಾಜಾದ ಕನ್ನಡಿಗ ಕೆ. ಗೌತಮ್, ಶಾರೂಖ್ ಖಾನ್ ಅವರೆಲ್ಲ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎನ್ನುವ ಕುತೂಹಲವೂ ಇದೆ.
ಕರ್ನಾಟಕದ ಪಂದ್ಯಗಳು :
ಫೆ. 20 : ಕರ್ನಾಟಕ-ಉ. ಪ್ರದೇಶ
ಫೆ. 22 : ಕರ್ನಾಟಕ-ಬಿಹಾರ
ಫೆ. 24 : ಕರ್ನಾಟಕ-ಒಡಿಶಾ
ಫೆ. 26 : ಕರ್ನಾಟಕ-ರೈಲ್ವೇಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.