ವಿಜೇಂದರ್-ಜುಲ್ಫಿಕರ್ ಕಾದಾಟ ವೀಕ್ಷಿಸಲು ಸಚಿನ್‌ಗೆ ಆಹ್ವಾನ
Team Udayavani, Jun 29, 2017, 3:35 AM IST
ಮುಂಬಯಿ: ಭಾರತದ ಖ್ಯಾತ ವೃತ್ತಿಪರ ಬಾಕ್ಸರ್ ಮತ್ತು ಒಲಿಂಪಿಕ್ ಕಂಚು ವಿಜೇತ ವಿಜೇಂದರ್ ಸಿಂಗ್ ಅವರು ಆಗಸ್ಟ್ 5ರಂದು ಚೀನದ ಸೋಲರಿಯದ ಎಡಗೈ ಬಾಕ್ಸರ್ ಜುಲ್ಫಿಕರ್ ಮೈಮೈತಿಯಾಲಿ ಜತೆ ಹೋರಾಡಲಿದ್ದಾರೆ. ಈ ಹೋರಾಟದ ಮೊದಲ ಟಿಕೆಟನ್ನು ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ಅವರಿಗೆ ಸ್ವತಃ ವಿಜೇಂದರ್ ನೀಡಿ ಕಾದಾಟ ವೀಕ್ಷಿಸಲು ಆಹ್ವಾನಿಸಿದ್ದಾರೆ.
ವೋರ್ಲಿಯ ಎನ್‌ಎಸ್‌ಸಿಐ ಕ್ರೀಡಾಂಗಣದಲ್ಲಿ ವಿಜೇಂದರ್ ಮತ್ತು ಜುಲ್ಫಿಕರ್ ನಡುವೆ ಕಾದಾಟ ನಡೆಯಲಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಯಿತು. ವಿಜೇಂದರ್ ಡಬ್ಲ್ಯುಬಿಒ ಏಶ್ಯ ಪೆಸಿಫಿಕ್ ಮಿಡಲ್‌ವೇಟ್ ಚಾಂಪಿಯನ್ ಆಗಿದ್ದರೆ ಜುಲ್ಫಿಕರ್ ಡಬ್ಲ್ಯುಬಿಒ ಓರಿಯಂಟಲ್ ಸೂಪರ್ ಮಿಡಲ್‌ವೇಟ್ ಚಾಂಪಿಯನ್ ಆಗಿದ್ದಾರೆ.
ವಿಜೇಂದರ್ ಸದ್ಯ ಇಂಗ್ಲೆಂಡಿನ ಮ್ಯಾಂಚೆಸ್ಟರ್‌ನಲ್ಲಿ ಲೀ ಬಿಯರ್ಡ್ ಅವರಲ್ಲಿ ಕಠಿನ ತರಬೇತಿ ನಡೆಸುತ್ತಿದ್ದಾರೆ. ಈ ಕಾದಾಟದಲ್ಲಿ ಇಬ್ಬರೂ ಬಾಕ್ಸರ್‌ಗಳು ತಮ್ಮ ಡಬ್ಲ್ಯುಬಿಒ ಪ್ರಶಸ್ತಿಯನ್ನು ಪಣಕ್ಕೆ ಇಡಲಿದ್ದಾರೆ. ಗೆದ್ದವರು ತಮ್ಮ ಪ್ರಶಸ್ತಿ ಜತೆ ಸೋತ ಬಾಕ್ಸರ್‌ನ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ ಎಂದು ಪ್ರಕಟಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?