ವಿಕಾಸ್ ಭರ್ಜರಿ ರೈಡ್; ಹರ್ಯಾಣಕ್ಕೆ ಜಯ
ಪುಣೆಯನ್ನು ಕೆಡವಿದ ಯುಪಿ ಯೋಧಾ
Team Udayavani, Aug 26, 2019, 10:19 PM IST
ಹೊಸದಿಲ್ಲಿ: ವಿಕಾಸ್ ಕಂಡೋಲ ಅವರ ಮತ್ತೂಂದು ಅದ್ಭುತ ರೈಡಿಂಗ್ನಿಂದ (11 ಅಂಕ) ಪ್ರೊ ಕಬಡ್ಡಿ 7ನೇ ಆವೃತ್ತಿ ಲೀಗ್ ಹಂತದ ಸೋಮವಾರದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ ವಿರುದ್ಧ ಹರ್ಯಾಣ ಸ್ಟೀಲರ್ 36-33 ಅಂಕಗಳ ಅಂತರದಿಂದ ಗೆಲುವು ಸಾಧಿಸಿದೆ.
ದಿನದ ದ್ವಿತೀಯ ಪಂದ್ಯದಲ್ಲಿ ಯುಪಿ ಯೋಧಾ 35-30 ಅಂತರದಿಂದ ಪುನೇರಿ ಪಲ್ಟಾನ್ಗೆ ಸೋಲುಣಿಸಿತು.
ಇಲ್ಲಿನ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಾಲ್ ಪರ ರೈಡರ್ ಮಣಿಂದರ್ ಸಿಂಗ್ (15 ಅಂಕ) ಹಾಗೂ ಹರ್ಯಾಣ ಪರ ವಿಕಾಸ್ ಕಂಡೋಲ ರೈಡಿಂಗ್ನಿಂದ ಅಬ್ಬರಿಸಿದರು. ಆದರೆ ಎರಡೂ ತಂಡಗಳ ರಕ್ಷಣಾ ವಿಭಾಗದ ಆಟಗಾರರು ಭಾರೀ ವೈಫಲ್ಯ ಅನುಭವಿಸಿದರು.
ವಿಕಾಸ್ ಭರ್ಜರಿ ರೈಡಿಂಗ್
ತಾನೊಬ್ಬ ಪ್ರಬುದ್ಧ ರೈಡರ್ ಎನ್ನುವುದನ್ನು ವಿಕಾಸ್ ಕಂಡೋಲ ಮತ್ತೂಮ್ಮೆ ಸಾಬೀತುಪಡಿಸಿದರು. ಒಟ್ಟಾರೆ 11 ರೈಡಿಂಗ್ನಿಂದ 10 ಟಚ್ ಪಾಯಿಂಟ್ ತಂದರು. ಒಂದು ಬೋನಸ್ ಅಂಕವನ್ನು ಕಲೆಹಾಕಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಇವರಿಗೆ ಸಹ ರೈಡರ್ ವಿನಯ್ (9 ಅಂಕ) ಸಾಥ್ ನೀಡಿದರು. ಧರ್ಮರಾಜ್ ಚೆರಾÉಥನ್ ಅಮೋಘ 4 ಟ್ಯಾಕಲ್ ನಡೆಸಿದರು.
ಮಣಿಂದರ್ ಆಟ ವ್ಯರ್ಥ
ಮಣಿಂದರ್ ಸಿಂಗ್ 13 ಟಚ್ ಪಾಯಿಂಟ್, 2 ಬೋನಸ್ನಿಂದ ಒಟ್ಟು 15 ಅಂಕ ಹಾಗೂ ಕೆ. ಪ್ರಪಂಜನ್ (7 ಅಂಕ) ಅಪ್ರತಿಮ ರೈಡಿಂಗ್ ಪ್ರದರ್ಶಿಸಿ ತಂಡವನ್ನು ಗೆಲ್ಲಿಸುವ ಪ್ರಯತ್ನ ನಡೆಸಿದರೂ ಸಫಲರಾಗಲಿಲ್ಲ.
***
ಯುಪಿ ಯೋಧಾಗೆ ಗೆಲುವು
ಸೋಮವಾರದ ಮತ್ತೂಂದು ಪಂದ್ಯದಲ್ಲಿ ಯುಪಿ ಯೋಧಾ 35-30 ಅಂಕಗಳ ಅಂತರದಿಂದ ಪುನೇರಿ ಪಲ್ಟಾನ್ ತಂಡವನ್ನು ಸೋಲಿಸಿತು. ಯುಪಿ ಪರ ಶ್ರೀಕಾಂತ್ ಜಾಧವ್ (15 ಅಂಕ) ಶ್ರೇಷ್ಠ ರೈಡಿಂಗ್ ಪ್ರದರ್ಶಿಸಿ ಗೆಲುವಿನ ರೂವಾರಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.