![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 4, 2023, 5:45 AM IST
ಹರಾರೆ: ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ಸೋಮವಾರದ ಸೂಪರ್ ಸಿಕ್ಸ್ ಪಂದ್ಯದಲ್ಲಿ ನೆದ ರ್ಲೆಂಡ್ಸ್ ತಂಡ ಒಮಾನ್ ವಿರುದ್ಧ ಡಕ್‌ವರ್ತ್-ಲೂಯಿಸ್ ನಿಯಮ ದಂತೆ 74 ರನ್ ಗೆಲುವು ಸಾಧಿಸಿದೆ. ಮುನ್ನಡೆಯ ಕ್ಷೀಣ ಅವಕಾಶವನ್ನು ಪಡೆದಿದೆ.
ಮಂಗಳವಾರದ ಸ್ಕಾಟ್ಲೆಂಡ್- ಜಿಂಬಾಬ್ವೆ ಪಂದ್ಯ ನಿರ್ಣಾಯಕ ಪಾತ್ರ ವಹಿಸಲಿದೆ. ಜಿಂಬಾಬ್ವೆ ಗೆದ್ದರೆ ವಿಶ್ವಕಪ್ ಅರ್ಹತೆ ಸಂಪಾದಿಸಲಿದೆ. ಇಲ್ಲವಾದರೆ ಸ್ಪರ್ಧೆ ತೀವ್ರಗೊಳ್ಳಲಿದೆ.
ಸೋಮವಾರದ ಹರಾರೆ ಮುಖಾಮುಖಿಯಲ್ಲಿ ಆರಂಭಕಾರ ವಿಕ್ರಮ್‌ಜೀತ್ ಸಿಂಗ್ ಮತ್ತು ವನ್‌ಡೌನ್ ಬ್ಯಾಟರ್ ವೆಸ್ಲಿ ಬರೇಸಿ ಅವರ ಪ್ರಚಂಡ ಬ್ಯಾಟಿಂಗ್ ಪರಾಕ್ರಮದಿಂದ ನೆದರ್ಲೆಂಡ್ಸ್ 7 ವಿಕೆಟಿಗೆ 362 ರನ್ ಪೇರಿಸಿತು. ಒಮಾನ್ ಚೇಸಿಂಗ್ ವೇಳೆ ಮಳೆ ಬಂದು ಪಂದ್ಯ ಸ್ಥಗಿತ ಗೊಂಡ ಕಾರಣ ಗುರಿಯನ್ನು ಪರಿಷ್ಕರಿ ಸಲಾಯಿತು. 48 ಓವರ್‌ಗಳಲ್ಲಿ 364 ರನ್ ಟಾರ್ಗೆಟ್ ಲಭಿಸಿತು. ಆದರೆ 44 ಓವರ್ ಮುಗಿದೊಡನೆ ಬೆಳಕಿನ ಅಭಾವ ಕಾಡಿದ್ದರಿಂದ ಪಂದ್ಯವನ್ನು ಕೊನೆಗೊಳಿಸಲಾಯಿತು. ಆಗ ಒಮಾನ್ 6 ವಿಕೆಟಿಗೆ 246 ರನ್ ಮಾಡಿತ್ತು. ಮಧ್ಯಮ ಕ್ರಮಾಂಕದ ಬ್ಯಾಟರ್ ಅಯಾನ್ ಖಾನ್ 105 ರನ್ ಬಾರಿಸಿ ಅಜೇಯರಾಗಿದ್ದರು.
117 ರನ್ ಜತೆಯಾಟ
ಪಂಜಾಬ್ ಮೂಲದ ವಿಕ್ರಮ್‌ಜೀತ್ ಸಿಂಗ್ 110 ರನ್ ಬಾರಿಸಿ ಶತಕ ಸಂಭ್ರಮ ಆಚರಿಸಿದರು. ಇದು ಅವರ ಮೊದಲ ಏಕದಿನ ಶತಕ. 34ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಅವರು 109 ಎಸೆತಗಳನ್ನು ಎದುರಿಸಿ 11 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಮ್ಯಾಕ್ಸ್ ಓಡೌಡ್ ಜತೆಗೂಡಿ ಮೊದಲ ವಿಕೆಟಿಗೆ 22 ಓವರ್‌ಗಳಿಂದ 117 ರನ್ ಪೇರಿಸಿದರು. ಇದರಲ್ಲಿ ಓಡೌಡ್ ಗಳಿಕೆ ಕೇವಲ 35 ರನ್.
ವೆಸ್ಲಿ ಬರೇಸಿ ಕೇವಲ 3 ರನ್ನಿನಿಂದ ಶತಕ ತಪ್ಪಿಸಿಕೊಂಡರು. ಇವರ 97 ರನ್ ಕೇವಲ 65 ಎಸೆತಗಳಲ್ಲಿ ಬಂತು. ಸಿಡಿಸಿದ್ದು 10 ಬೌಂಡರಿ ಮತ್ತು 3 ಸಿಕ್ಸರ್. ಒಮಾನ್ ಪರ ಬಿಲಾಲ್ ಖಾನ್ 3 ವಿಕೆಟ್ ಉರುಳಿಸಿ ಹೆಚ್ಚಿನ ಯಶಸ್ಸು ಕಂಡರು.
ಅಯಾನ್ ಖಾನ್ ಶತಕ
ಕಠಿನ ಸವಾಲು ಪಡೆದ ಒಮಾನ್, ಅಯಾನ್ ಖಾನ್ ಸಾಹಸದಿಂದ ಸೋಲಿನಲ್ಲೂ ಸಮಾಧಾನಪಟ್ಟಿತು. ಅಯಾನ್ 92 ಎಸೆತಗಳಿಂದ ಅಜೇಯ 105 ರನ್ ಬಾರಿಸಿದರು. ಅವರ ಚೊಚ್ಚಲ ಏಕದಿನ ಶತಕ 11 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಶೋಯಿಬ್ ಖಾನ್ 46 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್: ನೆದರ್ಲೆಂಡ್ಸ್-7 ವಿಕೆಟಿಗೆ 362 (ವಿಕ್ರಮ್‌ಜೀತ್ 110, ಬರೇಸಿ 97, ಓಡೌಡ್ 35, ಬಾಸ್ ಡಿ ಲೀಡ್ 39, ಸಕಿಬ್ ಜುಲ್ಫಿಕರ್ 33, ಬಿಲಾಲ್ ಖಾನ್ 75ಕ್ಕೆ 3, ಮೊಹಮ್ಮದ್ ನದೀಂ 36ಕ್ಕೆ 2). ಒಮಾನ್-44 ಓವರ್
ಗಳಲ್ಲಿ 6 ವಿಕೆಟಿಗೆ 246 (ಅಯಾನ್ ಖಾನ್ ಔಟಾಗದೆ 105, ಶೋಯಿಬ್ ಖಾನ್ 46, ಆರ್ಯನ್ ದತ್ 31ಕ್ಕೆ 3, ರಿಯಾನ್ ಕ್ಲೀನ್ 34ಕ್ಕೆ 2).
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.