Paris Olympics; ವಿನೀಶ್‌ ಫೋಗಾಟ್‌ ಐತಿಹಾಸಿಕ ಸಾಧನೆ; ಫೈನಲ್‌ ಪ್ರವೇಶಿಸಿದ ಗಟ್ಟಿಗಿತ್ತಿ

Team Udayavani, Aug 6, 2024, 10:49 PM IST

Paris Olympics; ವಿನೀಶ್‌ ಫೋಗಾಟ್‌ ಐತಿಹಾಸಿಕ ಸಾಧನೆ; ಫೈನಲ್‌ ಪ್ರವೇಶಿಸಿದ ಗಟ್ಟಿಗಿತ್ತಿ

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ (Paris Games) ಮೂರು ಕಂಚು ಗೆದ್ದಿರುವ ಭಾರತಕ್ಕೆ ಪದಕದ ಬಣ್ಣ ಬದಲಾಗುವ ಕಾಲ ಬಂದಿದೆ. ಮಹಿಳೆಯರ 50 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಭಾರತದ ವಿನೀಶ್‌ ಫೋಗಾಟ್‌ (Vinesh Phogat)ಅವರು ಫೈನಲ್‌ ಪ್ರವೇಶಿಸಿದ್ದಾರೆ.

ಮಂಗಳವಾರ (ಆ.06) ನಡೆದ ಸೆಮಿ ಫೈನಲ್‌ ಪಂದ್ಯದಲ್ಲಿ ಅವರು ಕ್ಯೂಬಾದ ಗುಸ್ಮನ್‌ ಲೋಪೆಜ್‌ ಅವರನ್ನು 5-0 ಅಂತರದಿಂದ ಸೋಲಿಸಿದರು. ಈ ಮೂಲಕ ಒಲಿಂಪಿಕ್‌ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಸಾಧನೆ ಮಾಡಿದ್ದಾರೆ.

ಮಂಗಳವಾರ ಇದಕ್ಕೂ ಮೊದಲು ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌, ವಿಶ್ವದ ನಂ.1 ರೆಸ್ಲರ್‌, ಜಪಾನ್‌ನ ಯೂಯಿ ಸುಸಾಕಿ ವಿರುದ್ಧ ಗೆದ್ದು ಅಚ್ಚರಿಗೊಳಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲೂ ಆಕ್ರಮಣ ಮುಂದುವರಿಸಿದ ವಿನೇಶ್‌, ಉಕ್ರೇನ್‌ನ ಒಕ್ಸಾನಾ ಲಿವೆಚ್‌ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದರು.

ಮಂಗಳವಾರದ ಮೊದಲ ಪಂದ್ಯದಲ್ಲೇ 29 ವರ್ಷದ ವಿನೇಶ್‌ ಪದಕದ ಭರವಸೆ ಮೂಡಿಸುವಂಥ ಪ್ರದರ್ಶನ ನೀಡಿದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದಿದ್ದ ಜಪಾನ್‌ನ ಯುಯಿ ಸುಸಾಕಿ ವಿರುದ್ಧ ಬಿಗಿ ಪಟ್ಟು ಹಾಕಿದ ವಿನೇಶ್‌ 3-2 ಅಂತರದಿಂದ ಗೆದ್ದರು. ಇಲ್ಲಿಗೆ ಜಪಾನ್‌ ಒಲಿಷ್ಠೆ ಸುಸಾಕಿಯ ವಿಶೇಷ ದಾಖಲೆಯೊಂದು ಮುರಿದುಬಿದ್ದಿದೆ. ತನ್ನ ವೃತ್ತಿ ಜೀವನದಲ್ಲಿ ಸತತ 82 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದಿದ್ದ ಸವ್ಯಸಾಚಿ ಸುಸಾಕಿಗೆ ವಿನೇಶ್‌ ಮೊದಲ ಸೋಲುಣಿಸಿದರು!

ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲೂ ವಿನೇಶ್‌ ಆಕ್ರಮಣ ಮುಂದುವರಿಯಿತು. ಉಕ್ರೇನಿನ ಒಕ್ಸಾನಾ ಲಿವಚ್‌ ವಿರುದ್ಧ 7-5 ಅಂತರದಿಂದ ಗೆದ್ದರು. ಕಳೆದ ಟೋಕಿಯೊ ಒಲಿಂಪಿಕ್ಸ್‌ ವೇಳೆ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್‌ ಈ ಬಾರಿ ತನ್ನ ತೂಕದ ವಿಭಾಗವನ್ನು 50 ಕೆಜಿಗೆ ಇಳಿಸಿಕೊಂಡಿದ್ದಾರೆ.

ಜನಪ್ರಿಯ ಬಾಲಿವುಡ್‌ ಚಿತ್ರ ದಂಗಲ್‌ನ ಫೋಗಾಟ್‌ ಕುಟುಂಬಕ್ಕೆ ವಿನೇಶ್‌ ಫೋಗಾಟ್‌ ಸೇರಿದ್ದಾರೆ. ಮಹಾವೀರ್‌ ಫೊಗಾಟ್‌ ಅವರ ತಮ್ಮನ ಮಗಳು ವಿನೇಶ್‌. ಕಾಮನ್‌ವೆಲ್ತ್‌ ಗೇಮ್ಸ್‌ ಮತ್ತು ಏಷ್ಯನ್‌ ಗೇಮ್ಸ್‌ನಲ್ಲಿ ಬಂಗಾರ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎಂಬ ದಾಖಲೆ ಹೊಂದಿದ್ದಾರೆ. ಏಷ್ಯನ್‌ ಗೇಮ್ಸ್‌ನಲ್ಲಿ 1, ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 3 ಮತ್ತು ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ 1 ಪದಕ ಗೆದ್ದ ಸಾಧನೆ ವಿನೇಶ್‌ ಅವರದ್ದಾಗಿದೆ.

ಟಾಪ್ ನ್ಯೂಸ್

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

uUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

Udupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-tennis

US Open;ಅಮೆರಿಕದ ಟೇಲರ್‌ ಫ್ರಿಟ್ಜ್ ಗೆ ಸೋಲು:ಸಿನ್ನರ್‌ ಯುಎಸ್‌ ಚಾಂಪಿಯನ್‌

1-slk

3rd Test: ಶ್ರೀಲಂಕಾಕ್ಕೆ 8 ವಿಕೆಟ್‌ ಜಯ: ಇಂಗ್ಲೆಂಡಿಗೆ 2-1 ಟೆಸ್ಟ್‌  ಸರಣಿ

Foot ball

Football; ಭಾರತಕ್ಕೆ ಸೋಲು: ಸಿರಿಯಾಕ್ಕೆ ಪ್ರಶಸ್ತಿ

Pak 2

Pakistan ಆ್ಯತ್ಲೀಟ್‌ಗಳಿಗೆ ಭಾರತೀಯ ರಾಯಭಾರ ಕಚೇರಿಯಿಂದ ವೀಸಾ

1-reee

New Zealand-Afghanistan ಏಕೈಕ ಟೆಸ್ಟ್‌ : ಹೊರ ಮೈದಾನ ಒದ್ದೆ; ನಡೆಯದ ಆಟ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿPilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.