ಹರ್ಭಜನ್ ಪುತ್ರಿ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡ ವಿರಾಟ್
Team Udayavani, May 3, 2017, 12:25 PM IST
ಹೊಸದಿಲ್ಲಿ: ರಾಯಲ್ ಚಾಲೆಂಜರ್ ಬೆಂಗಳೂರು ತಂಡ 10ನೇ ಆವೃತ್ತಿ ಐಪಿಎಲ್ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಈ ನಡುವೆಯೇ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಮುಂಬೈ ಇಂಡಿಯನ್ಸ್ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಮಗಳ ಜತೆಗೆ ತೆಗೆದುಕೊಂಡಿರುವ ಫೋಟೋವೊಂದನ್ನು ಪ್ರಕಟಿಸಿದ್ದಾರೆ.
ಅಷ್ಟೇ ಅಲ್ಲದೆ ಫೋಟೋದ ಕೆಳಗೆ ಕ್ಯಾಪ್ಷನ್ ಬರೆದಿದ್ದಾರೆ. ಅದರಲ್ಲಿ ಹೀಗಿದೆ. ಭಜ್ಜಿ ಮಗಳು ಹಿನಯಾ ನನ್ನ ಗಡ್ಡದಲ್ಲಿ ಏನೋ ಇದೇ ಅನ್ನುವ ಹಾಗೆ ದಿಟ್ಟಿಸಿ ನೋಡುತ್ತಾಳೆ. ನನಗೆ ಮಗುವನ್ನು ನೋಡಿ ತುಂಬಾ ಖುಷಿಯಾಗಿದೆ. ಮಗು ಬಹಳ ಮುದ್ದಾಗಿದೆ ಎಂದು ಬರೆದುಕೊಂಡಿದ್ದಾರೆ. ಇದು ಸಾಕಷ್ಟು ಅಭಿಮಾನಿಗಳ ವೀಕ್ಷಣೆಗೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ಧೋನಿ ಮಗಳು ಜೀವಾ ಜತೆಗೆ ಕೊಹ್ಲಿ ಇದೇ ತರಹ ಫೋಟೋ ತೆಗೆಸಿಕೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.