ಡ್ರಿಂಕ್ಸ್ ಬಾಯ್ ಗಳಾಗಿ ವಿರಾಟ್, ಕೇನ್: ಅಂತಿಮ ಪಂದ್ಯದಲ್ಲಿ ರಾಹುಲ್ ಹಂಗಾಮಿ ನಾಯಕ
Team Udayavani, Feb 2, 2020, 3:59 PM IST
ಮೌಂಟ್ ಮೌಂಗನಿ: ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಉಭಯ ತಂಡದ ಪ್ರಮುಖ ನಾಯಕರು ವಿಶ್ರಾಂತಿ ಪಡೆದಿರುವುದು ವಿಶೇಷವಾಗಿತ್ತು.
ಈಗಾಗಲೇ ಸರಣಿ ಜಯಿಸಿರುವ ಕಾರಣ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂದಿನ ಪಂದ್ಯಕ್ಕೆ ವಿಶ್ರಾಂತಿ ಪಡೆದರು. ಅವರ ಬದಲಿಗೆ ನಾಯಕತ್ವದ ಜವಾಬ್ದಾರಿ ರೋಹಿತ್ ಶರ್ಮಾ ಪಾಲಾಯಿತು.
ಭುಜದ ನೋವಿನಿಂದ ನಾಲ್ಕನೆ ಪಂದ್ಯ ತಪ್ಪಿಸಿಕೊಂಡಿದ್ದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಇಂದಿನ ಪಂದ್ಯದಲ್ಲೂ ಹೊರಗುಳಿದರು. ಅವರ ಬದಲು ಟಿಮ್ ಸೌಥಿ ಕ್ಯಾಪ್ಸನ್ಸಿ ವಹಿಸಿದರು.
ಪಂದ್ಯದ ವೇಳೆ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಡ್ರಿಂಕ್ಸ್ ಬಾಯ್ ಗಳಾಗಿ ಕಾಣಿಸಿಕೊಂಡು ಸರಳತೆ ಮರೆದರು. ಬಿಸಿಸಿಐ ಈ ಫೋಟೊವನ್ನು ಪೋಸ್ಟ್ ಮಾಡಿ ಸ್ಪಿರಿಟ್ ಆಫ್ ಕ್ರಿಕೆಟ್ ಎಂದು ಬರೆದುಕೊಂಡಿದೆ.
ರಾಹುಲ್ ಹಂಗಾಮಿ ನಾಯಕ
ಬ್ಯಾಟಿಂಗ್ ನಡೆಸುವ ವೇಳೆ ರೋಹಿತ್ ಶರ್ಮಾ ನೋವು ಕಾಣಿಸಿಕೊಂಡ ಕಾರಣ ನಿವೃತ್ತಿ ಪಡೆದು ಪೆವಿಲಿಯನ್ ಗೆ ಸೇರಿದರು. ಫೀಲ್ಡಿಂಗ್ ವೇಳೆ ಕೆ ಎಲ್ ರಾಹುಲ್ ನಾಯಕತ್ವ ಜವಾಬ್ದಾರಿ ನಿಭಾಯಿಸಿದರು. ಕೆ ಎಲ್ ರಾಹುಲ್ ಗೆ ಮತ್ತೊಬ್ಬ ಕನ್ನಡಿಗ ಮನೀಷ್ ಪಾಂಡೆ ಸಲಹೆ ನೀಡುತ್ತಿದುದು ಕಂಡು ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.