ಸಚಿನ್ ಸಿನಿಮಾ ಪ್ರದರ್ಶನದಲ್ಲಿ ಮಿಂಚಿದ ಕೊಹ್ಲಿ-ಅನುಷ್ಕಾಶರ್ಮ
Team Udayavani, May 25, 2017, 11:19 AM IST
ನವದೆಹಲಿ: ವಿಶ್ವ ಕ್ರಿಕೆಟ್‌ನ ದೇವರು ಸಚಿನ್ ತೆಂಡುಲ್ಕರ್ ತಮ್ಮ ಜೀವನಾಧಾರಿತ ಚಲನಚಿತ್ರ ಸಚಿನ್: ಎ ಬಿಲಿಯನ್ ಡ್ರೀಮ್ಸ್ ಚಿತ್ರದ ವಿಶೇಷ ಪ್ರದರ್ಶನವನ್ನು ಬುಧವಾರ ಭಾರತ ಕ್ರಿಕೆಟ್ ತಂಡದ ಸದಸ್ಯರಿಗೆ ಏರ್ಪಡಿಸಿದ್ದರು.
ಭಾರತ ಕ್ರಿಕೆಟ್ ತಂಡ ಬುಧವಾರ ಇಂಗ್ಲೆಂಡ್‌ಗೆ ಹೊರಡುವ ಮುನ್ನ ಮುಂಬೈನಲ್ಲಿ ಸಚಿನ್ ಈ ಪ್ರದರ್ಶನ ಇಟ್ಟುಕೊಂಡಿದ್ದರು. ಭಾರತೀಯ ಕ್ರಿಕೆಟಿಗರ ಜೊತೆಗೆ ಸಚಿನ್ ಬಾಲ್ಯದ ಕೋಚ್ ರಮಾಕಾಂತ್ ಅಚೆÅàಕರ್, ಗಾಯಕಿ ಆಶಾ ಭೋಂಸ್ಲೆ ಕೂಡ ಆಗಮಿಸಿದ್ದರು.
ಆದರೆ ಧೋನಿಯಂತಹ ದಿಗ್ಗಜರ ನಡುವೆ ಕಾರ್ಯಕ್ರಮದಲ್ಲಿ ಮಿಂಚಿದ್ದು ಮಾತ್ರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ! ಕೆಲವು ತಿಂಗಳ ಹಿಂದೆ ಈ ಜೋಡಿ ಬೇರ್ಪಟ್ಟಿದೆ ಎಂಬ ಸುದ್ದಿ ಹಬ್ಬಿತ್ತು. ಇದರ ನಡುವೆಯೇ 24 ಗಂಟೆಗಳೊಳಗೆ ಎರಡು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮಂಗಳವಾರ ಜಹೀರ್ ಖಾನ್ ಅವರ ನಿಶ್ಚಿತಾರ್ಥದಲ್ಲಿ ಪತ್ತೆಯಾಗಿದ್ದರೆ, ಬುಧವಾರ ಸಚಿನ್ ಸಿನಿಮಾ ನೋಡಲು ಆಗಮಿಸಿದ್ದರು.