ಕೊಹ್ಲಿ ದಿನವಹಿ ಜಾಹೀರಾತು ಶುಲ್ಕಎಷ್ಟು ಗೊತ್ತಾ -ಬರೋಬ್ಬರಿ 5 ಕೋಟಿ!
Team Udayavani, Apr 1, 2017, 7:43 PM IST
ಹೊಸದಿಲ್ಲಿ : ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಿನಕ್ಕೆ ಚಾರ್ಜ್ ಮಾಡುವ ಜಾಹೀರಾತು ಶುಲ್ಕ ಎಷ್ಟು ಗೊತ್ತಾ ? ಬರೋಬ್ಬರಿ ಐದು ಕೋಟಿ ರೂ. !
ಕೊಹ್ಲಿ ತಮ್ಮ ಜಾಹೀರಾತು ಶುಲ್ಕವನ್ನು ದಿನಕ್ಕೆ ಐದು ಕೋಟಿ ರೂ.ಗಳಷ್ಟು ಹೆಚ್ಚಿಸಿದ್ದು ಆ ಮೂಲಕ ಅವರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಅಂಗಣದಲ್ಲಿ ಮಾತ್ರವಲ್ಲ ಅಂಗಣದ ಹೊರಗೂ ಹಿಂದಿಕ್ಕಿದ್ದಾರೆ.
ಪೆಪ್ಸಿಕೋ ಜತೆಗಿನ ಎಂಡೋರ್‌ಸ್‌ಮೆಂಟ್ ಡೀಲನ್ನು ನವೀಕರಿಸುವ ಸಂದರ್ಭದಲ್ಲಿ ಕೊಹ್ಲಿ ಅವರು ತಮ್ಮ ಶುಲ್ಕವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿರುವುದನ್ನು ಇಕಾನಮಿಕ್ ಟೈಮ್ಸ್ ವರದಿ ಮಾಡಿದೆ.
ಜಾಹೀರಾತು ವಹಿವಾಟು ರೇಸ್‌ನಲ್ಲಿ ಕೊಹ್ಲಿ ಅವರು ಬಾಲಿವುಡ್ ತಾರೆಯರಾದ ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್ ಅವರನ್ನು ಹಿಂದಿಕ್ಕಿರುವುದು ಅಚ್ಚರಿ ಉಂಟುಮಾಡಿದೆ.
ಕೊಹ್ಲಿ ಕಳೆದ ತಿಂಗಳಲ್ಲಿ ಪ್ರಖ್ಯಾತ ಪ್ಯೂಮಾ ಕಂಪೆನಿ ಜತೆಗಿನ ಎಂಟು ವರ್ಷಗಳ ಜಾಹೀರಾತು ವಹಿವಾಟನ್ನು 110 ಕೋಟಿ ರೂ.ಗಳಿಗೆ ಕುದುರಿಸಿಕೊಂಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಡೀಲ್ ಕುದುರಿಸಿಕೊಂಡ ಪ್ರಪ್ರಥಮ ಭಾರತೀಯ ಕ್ರೀಡಾ ಪಟು ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
ಪ್ಯೂಮಾಗೆ ಮೊದಲು ಕೊಹ್ಲಿ ಅವರು ಪ್ರತಿಸ್ಪರ್ಧಿ ಆದಿದಾಸ್ ಕಂಪೆನಿಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮೂರು ವರ್ಷಗಳ ಆ ಡೀಲ್ ಕಳೆದ ವರ್ಷ ಮುಗಿದಿತ್ತು.
ಅಂದ ಹಾಗೆ ಕೊಹ್ಲಿ 18 ಬ್ರ್ಯಾಂಡ್‌ಗಳಿಗೆ ಎಂಡೋರ್ಸ್ ಮಾಡುತ್ತಾರೆ.ಇವುಗಳಲ್ಲಿ ಎಂಆರ್‌ಎಫ್ ಟಯರ್, ಟಿಸಾಟ್ ವಾಚ್, ಜಿಯೋನಿ ಫೋನ್, ಬೂಸ್ಟ್ ಮಿಲ್ಕ್ ಡ್ರಿಂಕ್, ಕಾಲ್‌ಗೇಟ್ ಟೂತ್‌ಪೇಸ್ಟ್ ಮತ್ತು ಮಾನ್ಯವರ್ ಸೇರಿವೆ.
2016ರ ಫೋರ್‌ಬ್ಸ್ ಟಾಪ್ 100 ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 134.44 ಕೋಟಿ ಸಂಪಾದನೆಗಾಗಿ ಮೂರನೇ ಕ್ರಮಾಂಕ ಪಡೆದ್ದಾರೆ. 2015ರಲ್ಲಿ ಕೊಹ್ಲಿ ಏಳನೇ ಕ್ರಮಾಂಕದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.