ಕ್ರಿಸ್ ಗೇಲ್, ಎಬಿಡಿಗೆ ಆರ್‌ಸಿಬಿ ಹಾಲ್ ಆಫ್ ಫೇಮ್ ಪ್ರಶಸ್ತಿ
Team Udayavani, May 17, 2022, 11:13 PM IST
ಮುಂಬಯಿ: ರಾಯಲ್ ಚಾಲೆಂಜರ್ ಬೆಂಗಳೂರು ತಂಡ ನೂತನವಾಗಿ ಪ್ರಸ್ತುತಪಡಿಸಿದ “ಆರ್‌ಸಿಬಿ ಹಾಲ್ ಆಫ್ ಫೇಮ್’ ಗೌರವಕ್ಕೆ ಕ್ರಿಸ್ ಗೇಲ್ ಮತ್ತು ಎಬಿ ಡಿ ವಿಲಿಯರ್ ಆಯ್ಕೆಯಾಗಿದ್ದಾರೆ.
ಇವರಿಬ್ಬರೂ ವೀಡಿಯೋ ಕಾನ್ಫರೆನ್ಸ್ ಮೂಲಕ ಆರ್‌ಸಿಬಿಯೊಂದಿಗಿನ ತಮ್ಮ ನಂಟನ್ನು ಬಣ್ಣಿಸಿದರು. ಮುಂದಿನ ವರ್ಷ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆ ಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಗುವುದು.
ಹಾಲ್ ಆಫ್ ಫೇಮ್ ಪೂರ್ವಭಾವಿ ಸಮಾರಂಭದಲ್ಲಿ “ರೆಡ್ ಆರ್ಮಿ’ಯ ಸದಸ್ಯರೆಲ್ಲ ಪಾಲ್ಗೊಂಡಿದ್ದರು. ಮೊದಲು ವಿರಾಟ್ ಕೊಹ್ಲಿ, ಬಳಿಕ ತಂಡದ ಡೈರೆಕ್ಟರ್ ಆಫ್ ಕ್ರಿಕೆಟ್ ಮೈಕ್ ಹೆಸ್ಸನ್ ಸಮಾರಂಭವನ್ನು ಉದ್ದೇಶಿಸಿ ಮಾತಾ ಡಿದರು. ಬಳಿಕ ಪ್ರಶಸ್ತಿ ಪುರಸ್ಕೃತರಾದ ಗೇಲ್ ಮತ್ತು ಎಬಿಡಿ ಅವರಿಗೆ ಚಿನ್ನದ ತಟ್ಟೆಯ ಸ್ಮರಣಿಕೆಯನ್ನು ನೀಡಲಾ ಗುವುದು. ಇದರಲ್ಲಿ ಅವರ ಹೆಸರು ಹಾಗೂ ಜೆರ್ಸಿ ಸಂಖ್ಯೆ ಒಳಗೊಂಡಿದೆ.
ಗೌರವ ಸ್ವೀಕರಿಸಿ ಮಾತಾಡಿದ ಎಬಿ ಡಿ ವಿಲಿಯರ್ ತಮ್ಮ ಹಾಗೂ ಆರ್‌ಸಿಬಿ ತಂಡದೊಂದಿಗಿನ ಬಾಂಧವ್ಯವನ್ನು ಖುಷಿಯಿಂದ ಹಂಚಿಕೊಂಡರು. “ಇಡೀ ಆರ್‌ಸಿಬಿ ತಂಡ ಇಲ್ಲಿ ಸೇರಿದೆ. ನಿಜ ಹೇಳಬೇಕೆಂದರೆ, ನಾನು ಬಹಳ ಭಾವುಕನಾಗಿದ್ದೇನೆ. ಟಿವಿಯಲ್ಲಿ ನಿಮ್ಮ ಆಟವನ್ನು ನೋಡುತ್ತಲೇ ಇದ್ದೇನೆ. ಈ ವರ್ಷದ ಪ್ರದರ್ಶನ ಚೆನ್ನಾಗಿತ್ತು. ವಿರಾಟ್ ಕೊಹ್ಲಿ ಮಾತುಗಳು ಸ್ಫೂರ್ತಿದಾಯಕವಾಗಿದ್ದವು. ನನ್ನ ಪಾಲಿಗೆ ಇದೊಂದು ವಿಶೇಷ ಅನುಭವ…’ ಎಂದು ಎಬಿಡಿ ಹೇಳಿದರು.
ಆರ್‌ಸಿಬಿ ಹೃದಯಕ್ಕೆ ಹತ್ತಿರ
ಆರ್‌ಸಿಬಿ ಯಾವತ್ತೂ ನನ್ನ ಹೃದ ಯಕ್ಕೆ ಹತ್ತಿರವಾಗಿಯೇ ಇದೆ ಎಂದು ನುಡಿದವರು ಕ್ರಿಸ್ ಗೇಲ್.”ಆರ್‌ಸಿಬಿ ತಂಡದೊಂದಿಗೆ ನನ್ನ ನೆನಪುಗಳು ಸದಾ ಮಧುರ. ಸ್ಪೆಷಲ್ ಆಟಗಾರರು, ಸ್ಪೆಷಲ್ ತರಬೇತುದಾರರ ನಂಟು ನನ್ನದಾಗಿತ್ತು. ನಿನ್ಮೊಂದಿಗೆ ಇದ್ದೇ ಈ ಮಾತುಗಳನ್ನು ಆಡಬೇಕಿತ್ತು. ಎಬಿಡಿ ಹೇಳಿದಂತೆ ನನ್ನ ಪಾಲಿಗೆ ಇದೊಂದು ಭಾವುಕ ಗಳಿಗೆ’ ಎಂದು ಕ್ರಿಸ್ ಗೇಲ್ ಹೇಳಿದರು.
ಎಬಿಡಿ ಮತ್ತು ಗೇಲ್ ಐಪಿಎಲ್ ಆಡಿದ ಇಬ್ಬರು ಲೆಜೆಂಡ್ರಿ ಕ್ರಿಕೆಟಿಗರು. ಇಬ್ಬರೂ ಆರ್‌ಸಿಬಿ ಪರ ಏಕಕಾಲದಲ್ಲಿ ಆಡಿದ್ದು ವಿಶೇಷ.
ಎಬಿಡಿ 184 ಐಪಿಎಲ್ ಪಂದ್ಯ ಗಳನ್ನಾಡಿದ್ದು, 5,162 ರನ್ ಬಾರಿಸಿದ್ದಾರೆ. 3 ಶತಕ ಹಾಗೂ 40 ಅರ್ಧ ಶತಕಗಳನ್ನು ಇದು ಒಳಗೊಂಡಿದೆ. ಎಡಗೈ ಡ್ಯಾಶರ್ ಗೇಲ್ 142 ಪಂದ್ಯ ಆಡಿದ್ದಾರೆ. ಬಾರಿಸಿದ್ದು 4,965 ರನ್. 6 ಶತಕ, 31 ಅರ್ಧ ಶತಕಗಳೊಂದಿಗೆ ಐಪಿಎಲ್‌ನಲ್ಲಿ ಮೆರೆದಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.