ಕೊಹ್ಲಿ ವಿಶ್ವ ಕಂಡ ಅದ್ಭುತ ಆಟಗಾರ: ರೋಶನ್ ಸಿಲ್ವ
Team Udayavani, Mar 21, 2018, 10:00 AM IST
ಮಂಗಳೂರು: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವ ಕಂಡ ಅದ್ಭುತ ಆಟಗಾರ. ಅಲ್ಲದೆ ಒಂದು ತಂಡವನ್ನು ಚೆನ್ನಾಗಿ ನಿಭಾಯಿಸಬಲ್ಲ ಸಾಮರ್ಥ್ಯವುಳ್ಳ ವ್ಯಕ್ತಿ ಎಂದು ಶ್ರೀಲಂಕಾ ತಂಡದ ಟೆಸ್ಟ್ ಕ್ರಿಕೆಟಿಗ ರೋಶನ್ ಸಿಲ್ವ ತಿಳಿಸಿದರು. ನಗರದ ಪ್ರಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಡದ ನಾಯಕನಾಗಿ ಸಲಹೆ ನೀಡುವುದು ಸುಲಭ. ಆದರೆ ಸಲಹೆ ನೀಡಿದ್ದನ್ನು ತಾನೇ ಆಟದ ಮೂಲಕ ತೋರಿಸುವುದು ಕಷ್ಟ. ಕೊಹ್ಲಿ ಶ್ರಮಜೀವಿಯಾಗಿದ್ದು , ಅದನ್ನು ಕೆಲವು ಆಟಗಳಲ್ಲಿ ನಾವು ನೋಡಿದ್ದೇವೆ ಎಂದರು.
ಮಂಗಳೂರಿನ ಹವಾಮಾನ ಮತ್ತು ಆಹಾರ ಪದ್ಧತಿ ಶ್ರೀಲಂಕಾದಂತೆಯೇ ಹೋಲಿಕೆಯಾಗುತ್ತಿದ್ದು, ಈ ನಗರ ನನಗೆ ತುಂಬಾ ಇಷ್ಟವಾಗಿದೆ. ಮಂಗಳೂರಿನಲ್ಲಿ ನಡೆಯುತ್ತಿರುವ ಎಂಪಿಎಲ್ ಟೂರ್ನಿಯಲ್ಲಿ ಟಿ-4 ಸೂಪರ್ ಕಿಂಗ್ಸ್ ತಂಡದ ರಾಯಭಾರಿಯಾಗಿ ಆಯ್ಕೆಯಾಗಿರುವುದು ತುಂಬಾ ಖುಷಿ ನೀಡಿದೆ. 4 ದಿನಗಳ ಕಾಲ ಮಂಗಳೂರಿನಲ್ಲಿದ್ದು, ತಂಡವನ್ನು ಬೆಂಬಲಿಸುವೆ. ವೆಸ್ಟ್ ಇಂಡೀಸ್ ಪ್ರವಾಸ ಹಿನ್ನೆಲೆಯಲ್ಲಿ ಫೈನಲ್ ಪಂದ್ಯಕ್ಕೆ ಬರುವುದು ಅನುಮಾನ ಎಂದರು.
ಟಿ-4 ಸೂಪರ್ ಕಿಂಗ್ಸ್ ಮಾಲಕ ಮಾರ್ಷೆಲ್ ನೊರೋನ್ಹಾರ ಮಗ ಶ್ರೀಲಂಕಾದ ವಸಂತನ್ ಅವರಲ್ಲಿ ತರಬೇತಿ ಪಡೆಯುತ್ತಿದ್ದರು. ಆ ಮೂಲಕ ನನಗೆ ಮಂಗಳೂರಿನ ಪರಿಚಯವಾಗಿ, ರಾಯಭಾರಿ ಅವಕಾಶ ದೊರೆತಿದೆ. ವಸಂತನ್ ಈಗ ಟಿ-4 ಸೂಪರ್ ಕಿಂಗ್ಸ್ ತರಬೇತುದಾರರಾಗಿದ್ದಾರೆ ಎಂದರು.
ಟಿ-4 ಸೂಪರ್ ಕಿಂಗ್ಸ್ ತಂಡದ ಮಾಲಕ ಮಾರ್ಷೆಲ್ ನೊರೋನ್ಹಾ ಮಾತನಾಡಿ, ಟಿ-4 ತಂಡವು ಬುಧವಾರ ಮೊದಲ ಪಂದ್ಯವನ್ನು ಆಡಲಿದೆ. ತಂಡದಲ್ಲಿ 3 ರಾಜ್ಯಮಟ್ಟದ ನಾಯಕರಿದ್ದು, 9 ಮಂಗಳೂರಿನ ಆಟಗಾರರಿದ್ದಾರೆ. ವಿದೇಶಿ ಕೋಚ್ ವಸಂತನ್, ರಾಯಭಾರಿ ರೋಶನ್ ಸೇರಿದಂತೆ ತಂಡ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಟೀಮ್ ನಿರ್ದೇಶಕ ಹ್ಯಾರಿಸ್ ಮೊಹಮ್ಮದ್, ಟೀಮ್ ಮ್ಯಾನೇಜರ್ ಜಿ. ಗಣೇಶ್ ಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತು; ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Kasaragod Crime News: ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದ ಮೂವರ ಬಂಧನ
Belthangady: ಬಸ್ ಬೈಕ್ ಢಿಕ್ಕಿ, ಸವಾರ ಗಂಭೀರ
Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.